ತುಮಕೂರು: ಕಾಡಿನಲ್ಲಿ ಪ್ರೇಮಿಗಳ ಮೇಲೆ ಹಲ್ಲೆ ಮಾಡಿದ್ದ ಐವರ ಬಂಧನ
ದೇವರಾಯನ ದುರ್ಗದ ನಾಮದ ಚಿಲುಮೆ ಪಾರ್ಕ್‌ನಲ್ಲಿ ಪ್ರೇಮಿಗಳ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಯಾತ್ಸಂದ್ರ ಪೊಲೀಸರು ಐವರು

ತುಮಕೂರು: ದೇವರಾಯನ ದುರ್ಗದ ನಾಮದ ಚಿಲುಮೆ ಪಾರ್ಕ್‌ನಲ್ಲಿ ಪ್ರೇಮಿಗಳ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಯಾತ್ಸಂದ್ರ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ರಾಕೇಶ್, ಅನ್ಸಾರ್ ಪಾಷಾ, ಗಿರೀಶ್, ಅಂಜನಮೂರ್ತಿ ಮತ್ತು ನಿತಿನ್ ಬಂಧಿತರು. ರಾಕೇಶ್ ಮತ್ತು ಅನ್ಸಾರ್ ಪಾಷಾ ಬೆಂಗಳೂರಿನ ಅತ್ತಿ ಬೆಲೆಯವರು. ಇನ್ನುಳಿದ ಮೂವರು ತುಮಕೂರಿನ ಹೆಗ್ಗರೆಯವರು.ಅತ್ತಿಬೆಲೆಯ ರಾಕೇಶ್ ಮತ್ತು ಅನ್ಸರ್ ಪಾಷಾ ಪ್ರೇಮಿ ಮಂಜುನಾಥ್‌ಗೆ ಚೂರಿಯಿಂದ ಇರಿದಿದ್ದಾರೆ. ಉಳಿದ ಮೂವರು ಈ ಇಬ್ಬರಿಗೆ ಪರೋಕ್ಷವಾಗಿ ಸಹಕಾರ ಮಾಡಿದ್ದಾರೆ. ರಾಕೇಶ್ ಮತ್ತು ಗಿರೀಶ್ ಇಬ್ಬರೂ ತುಮಕೂರಿನ ಕಾಲೇಜೊಂದರಲ್ಲಿ ಕ್ಲಾಸ್‌ಮೇಟ್ ಆಗಿದ್ದಾರೆ ಎನ್ನಲಾಗಿದೆ.
ಈ ಐವರು ಈ ಮೊದಲು ಬೆಂಗಳೂರಿನಲ್ಲಿ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದು ಪೊಲೀಸರ ಕೈಗೆ ಸಿಗದೇ ಜೈಲಿನಿಂದ ಹೊರಗಿದ್ದರು ಎನ್ನಲಾಗಿದೆ. ಬಂಧಿತರಿಂದ ಎರಡು ಮೊಬೈಲ್ ಹಾಗೂ ಕದ್ದಿದ್ದ ಮಂಜುನಾಥ್ ಅವರ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಗಿರೀಶ ಹಣಕಾಸಿನ ಮುಗ್ಗಟ್ಟಿನಲ್ಲಿ ಸಿಲುಕಿದ್ದ, ಹೀಗಾಗಿ ಹಣಕ್ಕಾಗಿ ಈ ಕೃತ್ಯ ನಡೆಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.ಹಾಗಾಗಿ ಪರಸ್ಪರ ಸಂಪರ್ಕಕ್ಕೆ ಬಂದು ದರೋಡೆಗೆ ಇಳಿದಿದ್ದಾರೆ. ಗಿರೀಶ್ ಕೃತ್ಯದ ಮಾಸ್ಟರ್ ಮೈಂಡ್ ಆಗಿದ್ದಾನೆ. ಮನೆ ಸಾಲ ಹಾಗೂ ಸ್ನೇಹಿತರ ಮದುವೆಗೆ ದುಡ್ಡು ಹೊಂದಿಸಲು ಈ ಕೃತ್ಯಕ್ಕೆ ಕೈ ಹಾಕಿದ್ದಾರೆ ಎಂದು ಆರೋಪಿಗಳು ಬಾಯಿಬಿಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


