ಇಳಿ ವಯಸ್ಸಿನಲ್ಲೂ ಪಿಂಚಣಿ ಪಡೆಯದೇ ದೋಣಿ ನಡೆಸಿ ತಲೆ ಎತ್ತಿ ಬದುಕುತ್ತಿರುವ ದಂಪತಿಗಳು
ಬಡತನ ನಿವಾರಣೆ ಎಂಬುದು ಇಂದಿಗೂ ದೇಶದಲ್ಲಿ ತಾಂಡವವಾಡುತ್ತಿದ್ದು, ಬಡತನ ಪಿಡುಗು ಹಿರಿಯರ ವಯಸ್ಸಿನವರನ್ನು ಹೆಚ್ಚು ಕಾಡುತ್ತಿದೆ. ಹಿರಿಯ ವಯಸ್ಸಿನವರಿಗೆ ಸಹಾಯವಾಗಲು ಸಾಕಷ್ಟು ಯೋಜನೆಗಳನ್ನು...

ಮಂಗಳೂರು: ಬಡತನ ನಿವಾರಣೆ ಎಂಬುದು ಇಂದಿಗೂ ದೇಶದಲ್ಲಿ ತಾಂಡವವಾಡುತ್ತಿದ್ದು, ಬಡತನ ಪಿಡುಗು ಹಿರಿಯರ ವಯಸ್ಸಿನವರನ್ನು ಹೆಚ್ಚು ಕಾಡುತ್ತಿದೆ. ಹಿರಿಯ ವಯಸ್ಸಿನವರಿಗೆ ಸಹಾಯವಾಗಲು ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದರು. ಎಷ್ಟೋ ಯೋಜನೆಗಳು ಹಿರಿಯ ವಯಸ್ಸಿನವರಿಗೆ ತಲುಪುತ್ತಿಲ್ಲ. ಇಂದಿಗೂ ಎಷ್ಟೇ ಮಂದಿ ಪಿಂಚಣಿ ಸರಿಯಾಗಿ ತಲುಪುತ್ತಿಲ್ಲ.
ಹೆನ್ರಿ ಡಿಸೋಜಾ(76) ಮತ್ತು ಅವರ ಪತ್ನಿ ರಿತಾ ಡಿಸೋಜಾ (66) ಪಿಂಚಣೆ ಪಡೆಯದೆಯೇ ದೋಣಿ ನಡೆಸಿ ಮೀನು ಹಿಡಿಯುವ ಮೂಲಕ ಯಾರ ಮುಂದೆಯೂ ಕೈಚಾಚದೆ ಹಿರಿಯ ವಯಸ್ಸಿನಲ್ಲೂ ತಲೆಯೆತ್ತಿ ಜೀವನ ನಡೆಸುತ್ತಿದ್ದಾರೆ.
ವಯಸ್ಸಾಗುತ್ತಿದ್ದಂತೆ ಸಾಮಾನ್ಯವಾಗಿ ಹಿರಿಯರು ತಮ್ಮ ಮಕ್ಕಳ ಆರೈಕೆಯಡಿಯಲ್ಲಿ ಬದುಕುತ್ತಿರುತ್ತಾರೆ. ಕೆಲವರು ಸರ್ಕಾರ ನೀಡುವ ಪಿಂಚಣಿಯ ಸಹಾಯದಿಂದ ಬದುಕ್ಕುತ್ತಾರೆ. ಆದರೆ, ಈ ಹಿರಿಯರು ಯಾರ ಸಹಾಯವನ್ನು ಬಯಸದೇ ದೋಣಿ ನಡೆಸಿ ಜೀವನ ನಡೆಸುತ್ತಿದ್ದಾರೆ.
ಬೆಳಿಗ್ಗೆ 3 ಗಂಟೆಗೆ ಏಳುವ ಈ ದಂಪತಿ ದೋಣಿಯನ್ನು ತೆಗೆದುಕೊಂಡು ನೇತ್ರಾವತಿ ಹಾಗೂ ಪಾಲ್ಗುಣಿ ನದಿಗೆ ತೆರಳಿ, ಅಲ್ಲಿ ಮೀನು ಹಿಡಿಯುವ ಕೆಲಸವನ್ನು ಆರಂಭಿಸುತ್ತಾರೆ.
ಈ ಮೊದಲು ನದಿಗೆ ಹೋಗುತ್ತಿದ್ದಾಗ ನದಿಯಲ್ಲಿ ಮೀನುಗಳ ಸಂಖ್ಯೆ ಹೆಚ್ಚಾಗಿರುತ್ತಿತ್ತು. ನಮ್ಮ ಅದೃಷ್ಟ ಚೆನ್ನಾಗಿದ್ದರೆ, ಲಾಡಿ ಮೀನುಗಳು ಹಾಗೂ ಮಣ್ಣಿನ ಏಡಿಗಳು ಸಿಗುತ್ತಿತ್ತು. ಮಾರುಕಟ್ಟೆಯಲ್ಲಿ ಇವುಗಳ ಬೆಲೆ ಹೆಚ್ಚು. ಮೀನುಗಳ ಮಾರಾಟ ಮಾಡುವುದಕ್ಕೂ ಮುನ್ನ ಸೊಸೈಟಿಯಲ್ಲಿ ಹಣವನ್ನು ಠೇವಣಿ ಇಡಬೇಕು. ನಂತರ ಹರಾಜು ಪ್ರಕ್ರಿಯೆಯಲ್ಲಿ ನಮಗೆ ಹಣ ಸಿಗುತ್ತದೆ. ಕೆಲವೊಮ್ಮೆ ನಮಗೆ ರು. 500 ಬರುವುದು ಕೂಡ ಕಷ್ಟವಾಗಿ ಹೋಗುತ್ತದೆ. ಈ ಹಣ ದೋಣಿಯ ಇಂಧನ ಹಾಗೂ ಬಲೆಗಳನ್ನು ನೋಡಿಕೊಳ್ಳುವುದಕ್ಕೂ ಸಾಕಾಗುವುದಿಲ್ಲ ಎಂದು ಹೆನ್ರಿ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ನಾನು ಸಂಪಾದನೆ ಮಾಡಿದ ಹಣವನ್ನು ನನ್ನ ಕುಟುಂಬದ ಏಳಿಗಾಗಿ ಖರ್ಚು ಮಾಡಿದ್ದೆ. ಅಪಘಾತಕ್ಕೀಡಾಗುವುದಕ್ಕೂ ಮುನ್ನ ನಾನು ಸ್ವಂತ ಬಲೆಯನ್ನು ಹೊಂದಿದ್ದೆ. ಅದಕ್ಕೆ ವಿಮೆಯನ್ನು ಮಾಡಿಸಿರಲಿಲ್ಲ. ನಾನು ಏನೇ ಸಂಪಾದನೆ ಮಾಡಿದ್ದರೂ ಅದನ್ನು ಬೋಟ್ ಕೊಳ್ಳಲು ಹಾಕಿದ್ದೆ. ಇಂಜಿನ್ ಬೋಟ್ ಓಡಿಸಲು ಆಡಳಿತ ಮಂಡಳಿ ನನಗೆ ದೈಹಿಕ ಪ್ರಮಾಣಪತ್ರವನ್ನು ನೀಡಿರಲಿಲ್ಲ. ಆದರೆ, ಶಾಸಕ ಜೆ.ಆರ್. ಲೋಬೋ ಅವರು ನಮ್ಮ ಕಷ್ಟವನ್ನು ಅರ್ಥಮಾಡಿಕೊಂಡಿದ್ದರು. ಸಮಸ್ಯೆ ಬಗೆಹರಿಸಿದ್ದರು. ಅವರಿಲ್ಲದಿದ್ದರೆ, ರಿತಾ ಮತ್ತು ನಾನು ಮೀನುಗಾರರಾಗಿ ಜೀವನ ನಡೆಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಈ ದಂಪತಿಗಳಿಗೆ ಮೂವರು ಮಕ್ಕಳಿದ್ದು, ಇಬ್ಬರು ಹೆಣ್ಣು ಮಕ್ಕಳು ಹಾಗೂ ಓರ್ವ ಮಗನಿದ್ದಾನೆ. ಅವರು ಎಲ್ಲಿಯೇ ಇದ್ದರೂ ಚೆನ್ನಾಗಿರಲಿ. ಅವರೊಂದಿಗೆ ಮಾತನಾಡುವುದು ಅತೀ ವಿರಳ. ಇದೀಗ ಬೋಟ್ ಯೇ ನಮ್ಮ ಜೀವನವಾಗಿದೆ ಎಂದು ಹೆನ್ರಿ ಹೇಳಿದ್ದಾರೆ.
ಹೆನ್ರಿ ಬಹಳ ಆತ್ಮವಿಶ್ವಾಸವುಳ್ಳವರು, ಯಾರ ಮುಂದೆಯೂ ಕೈ ಚಾಚಿ ನಿಲ್ಲುವುದು ಅವರಿಗೆ ಇಷ್ಟವಾಗುವುದಿಲ್ಲ ಎಂದು ಹೆನ್ರಿ ಪತ್ನಿ ರಿತಾ ಅವರು ಹೇಳಿದ್ದಾರೆ.
ಹಿರಿಯರಿಗೆ ಸರ್ಕಾರ ಪಿಂಚಣಿ ನೀಡುತ್ತಿದೆ ಎಂಬುದನ್ನು ತಿಳಿದಿದ್ದ ನಾವು ಶಾಸಕರೊಬ್ಬರ ಬಳಿ ಹೋಗಿದ್ದವು. ಆ ದಿನ ಪೂರ್ತಿ ಓಡಾಡಿದ್ದೆವು. ಆದರೆ, ಯಾವುದೇ ಕೆಲಸವಾಗಲಿಲ್ಲ. ಆ ಒಂದು ದಿನ ನಾವು ಮೀನು ಹಿಡಿದಿದ್ದರೆ, ಪಿಂಚಣಿಯಲ್ಲಿ ಬರುವ ರು. 500 ಹಣಕ್ಕಿಂತ ಹೆಚ್ಚು ದುಡಿಯುತ್ತಿದ್ದೆವು ಎಂದೆನಿಸಿತು. ಅಂದು ಕೊನೆಯ ಉಸಿರಿರುವವರೆಗೂ ಪಿಂಚಣಿ ಹಣ ಪಡೆಯಬಾರದು ಎಂದು ನಿರ್ಧರಿಸಿದೆವು ಎಂದು ದಂಪತಿ ಹೇಳಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


