ರಾಜ್ಯಸಭೆ ಚುನಾವಣೆ ಮತದಾನ ಆರಂಭ
ವಿಧಾನಪರಿಷತ್ ಚುನಾವಣೆ ಮುಗಿದ ಬೆನ್ನಲ್ಲೇ ಶನಿವಾರ ರಾಜ್ಯಸಭೆಗೆ ಚುನಾವಣೆ ಮತದಾನ ಆರಂಭಗೊಂಡಿದೆ. ಕಾಂಗ್ರೆಸ್ ನಿಂದ...

ಬೆಂಗಳೂರು: ವಿಧಾನಪರಿಷತ್ ಚುನಾವಣೆ ಮುಗಿದ ಬೆನ್ನಲ್ಲೇ ಶನಿವಾರ ರಾಜ್ಯಸಭೆಗೆ ಚುನಾವಣೆ ಮತದಾನ ಆರಂಭಗೊಂಡಿದೆ. ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದ್ದು, ಸಾಯಂಕಾಲ 5 ಗಂಟೆಯ ನಂತರ ಫಲಿತಾಂಶ ಹೊರಬೀಳಲಿದೆ.
ಕಾಂಗ್ರೆಸ್ ನಿಂದ ಕೇಂದ್ರದ ಮಾಜಿ ಸಚಿವರಾದ ಆಸ್ಕರ್ ಫೆರ್ನಾಂಡಿಸ್, ಜೈರಾಮ್ ರಮೇಶ್ ಹಾಗೂ ಮಾಜಿ ಪೊಲೀಸ್ ಅಧಿಕಾರಿ ಕೆ.ಸಿ.ರಾಮಮೂರ್ತಿ ಸ್ಪರ್ಧಿಸಿದ್ದರೆ, ಬಿಜೆಪಿಯಿಂದ ಕೇಂದ್ರ ವಾಣಿಜ್ಯ ಖಾತೆ ರಾಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಸ್ಪರ್ಧಿಸಿದ್ದಾರೆ. ಜೆಡಿಎಸ್ ನಿಂದ ಉದ್ಯಮಿ ಬಿ.ಎಂ.ಫಾರೂಕ್ ಕಣದಲ್ಲಿದ್ದಾರೆ.
ರಾಜ್ಯ ವಿಧಾನಸಭೆಯಿಂದ ವಿಧಾನಪರಿಷತ್‌ಗೆ ನಡೆದ ಚುನಾವಣೆಯಲ್ಲಿ ನಿರೀಕ್ಷೆಯಂತೆ ಫಲಿತಾಂಶ ಬಂದಿದ್ದು, ರಾಜ್ಯಸಭೆಯಲ್ಲೂ ಇದೇ ಫಲಿತಾಂಶ ಮರುಕಳಿಸುವ ಸಾಧ್ಯತೆಯಿದೆ.
ಬಿಜೆಪಿ ಎರಡನೇ ಅಭ್ಯರ್ಥಿ ಲೆಹರ್‌ಸಿಂಗ್ ಪರ ಚಲಾವಣೆಗೊಂಡಿರುವ ಹಾಗೂ ಜೆಡಿಎಸ್‌ನ ಭಿನ್ನರ ಮತಗಳು ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮೂರನೇ ಅಭ್ಯರ್ಥಿ ಕೈ ಹಿಡಿಯುವ ಲಕ್ಷಣಗಳಿವೆ.
ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪರ 130 ಮತಗಳು ಚಲಾವಣೆಯಾಗಿದ್ದು, ಇದರ ಜತೆಗೆ ಲೆಹರ್‌ಸಿಂಗ್ ಅವರಿಗೆ ಚಲಾವಣೆಯಾಗಿವೆ ಎಂದು ಹೇಳಲಾದ 12 ಮತಗಳು ಕಾಂಗ್ರೆಸ್ ಅಭ್ಯರ್ಥಿಗೆ ಬೀಳಲಿದೆ ಎಂಬ ಲೆಕ್ಕಾಚಾರವಿದ್ದು, ಆ ಪ್ರಕಾರ ಒಟ್ಟು 142 ಮತಗಳಾಗಲಿದೆ. ಕಾಂಗ್ರೆಸ್‌ನ ಮೂವರು ಅಭ್ಯರ್ಥಿಗಳು ತಲಾ 47 ಮತ ಪಡೆಯಬೇಕು.
ಬಿಜೆಪಿ ಪರವಾಗಿರುವ 46 ಮತಗಳಿಂದ ಆ ಪಕ್ಷದ ಒಬ್ಬ ಅಭ್ಯರ್ಥಿ ನಿರ್ಮಲಾ ಸೀತಾರಾಮನ್ ಆಯ್ಕೆ ಸುಗಮವಾಗಬಹುದು. ಬಿಜೆಪಿಯ 44 ಹಾಗೂ ಅವರ ಬೆಂಬಲಕ್ಕೆ ನಿಂತಿರುವ ಇಬ್ಬರು ರಾಜ್ಯಸಭೆಯಲ್ಲೂ ಮತ ಹಾಕುವುದರಿಂದ ಯಾವುದೇ ಸಮಸ್ಯೆಯಾಗದು.
ಇನ್ನು ಜೆಡಿಎಸ್‌ನ ಬಳಿ 40 ಮತಗಳಿದ್ದು ಆ ಪೈಕಿ ಐವರು ಬಂಡಾಯ ಸಾರಿರುವುದರಿಂದ ಜೆಡಿಎಸ್ ಅಭ್ಯರ್ಥಿಗೆ ಖಚಿತವಾಗಿ 35 ಮತ ಬೀಳಬಹುದು. ಪಕ್ಷದ ಭಿನ್ನರು ಹಾಗೂ ಪಕ್ಷೇತರರು ಕೈ ಹಿಡಿಯದಿದ್ದರೆ ಕಷ್ಟವಾಗಬಹುದು ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.
ರಾಜ್ಯಸಭೆ ಫಲಿತಾಂಶ ಒಟ್ಟಾರೆ ಪಕ್ಷೇತರರ ಬೆಂಬಲದ ಮೇಲೆಯೇ ಅವಲಂಬಿತವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


