ರಾಜ್ಯಸಭಾ ಚುನಾವಣೆ: ಡಿಕೆಶಿ, ಎಚ್.ಡಿ.ರೇವಣ್ಣ ಮಧ್ಯೆ ವಾಗ್ವಾದ
ಕರ್ನಾಟಕದಿಂದ ರಾಜ್ಯಸಭೆಯ 4 ಸ್ಥಾನಗಳಿಗೆ ಚುನಾವಣೆ ಮತದಾನ ವಿಧಾನಸೌಧದ ಮತಕೇಂದ್ರದಲ್ಲಿ ನಡೆಯುತ್ತಿದ್ದ...

ಬೆಂಗಳೂರು: ಕರ್ನಾಟಕದಿಂದ ರಾಜ್ಯಸಭೆಯ 4 ಸ್ಥಾನಗಳಿಗೆ ಚುನಾವಣೆ ಮತದಾನ ವಿಧಾನಸೌಧದ ಮತಕೇಂದ್ರದಲ್ಲಿ ನಡೆಯುತ್ತಿದ್ದ ಸಂದರ್ಭದಲ್ಲಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಚುನಾವಣಾಧಿಕಾರಿ ಮೂರ್ತಿ ಅವರೊಂದಿಗೆ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ವಾಗ್ವಾದ ನಡೆಸಿದ ಪ್ರಸಂಗ ನಡೆದಿದೆ.
ಕಾಂಗ್ರೆಸ್ ಶಾಸಕ ಜಿ.ರಾಮಕೃಷ್ಣ ತಮ್ಮ ಸಹಾಯಕರೊಂದಿಗೆ ಮತಕೇಂದ್ರಕ್ಕೆ ಬಂದರು. ಈ ವೇಳೆ ಜೆಡಿಎಸ್ ಪಕ್ಷದ ವೀಕ್ಷಕರಾಗಿ ಮತಕೇಂದ್ರದಲ್ಲಿ ಕುಳಿತಿದ್ದ ಎಚ್.ಡಿ.ರೇವಣ್ಣ ಅವರು ರಾಮಕೃಷ್ಣ ಅವರು ಸಹಾಯಕರೊಂದಿಗೆ ಬಂದಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ರಾಮಕೃಷ್ಣ ಅವರು ಅನಾರೋಗ್ಯದ ಕಾರಣದಿಂದ ಸಹಾಯಕರೊಂದಿಗೆ ಬಂದಿದ್ದಾರೆ ಎಂದು ಚುನಾವಣಾಧಿಕಾರಿಗಳು ಹೇಳಿದರೂ ಸಮಾಧಾನಗೊಳ್ಳದ ರೇವಣ್ಣ, ‘ರಾಮಕೃಷ್ಣ ಅವರಿಗೆ ಅನಾರೋಗ್ಯವೇನಿಲ್ಲ. ಅವರು ಚೆನ್ನಾಗಿಯೇ ಇದ್ದಾರೆ. ಅವರು ಮತದಾನ ಮಾಡಲು ಸಹಾಯಕರ ಅಗತ್ಯ ಇಲ್ಲ’ಎಂದರು.
ಈ ವೇಳೆ ಚುನಾವಣಾಧಿಕಾರಿ ಮೂರ್ತಿ ರೇವಣ್ಣ ಅವರಿಗೆ ಸಮಾಧಾನ ಹೇಳಲು ಮುಂದಾದರು. ಆದರೆ ರೇವಣ್ಣ ಸಮಾಧಾನಕ್ಕೊಳಗಾಗಲಿಲ್ಲ, ಮತ್ತಷ್ಟು ಕುಪಿತರಾದರು. ಮತಕೇಂದ್ರದಲ್ಲಿ ಉಂಟಾದ ಗದ್ದಲದಿಂದ ಅಲ್ಲಿಗೆ ಬಂದ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ಜತೆಗೂ ರೇವಣ್ಣ ವಾಗ್ವಾದ ನಡೆಸಿದರು.
ಈ ರೀತಿ ಚುನಾವಣೆ ನಡೆಸುವುದಾದರೆ ನಾನು ಹೊರಹೋಗುತ್ತೇನೆ’ ಎಂದು ರೇವಣ್ಣ ಹೇಳಿದರು. ಆಗ ಸಚಿವ ಡಿ.ಕೆ.ಶಿವಕುಮಾರ್, ಹೊರಹೋಗುವುದಾದರೆ ಹೋಗಿ ಎಂದರು. ಈ ವೇಳೆ ಇಬ್ಬರ ಮಧ್ಯೆ ಕೆಲಕಾಲ ಮಾತಿನ ಚಕಮಕಿ ನಡೆಯಿತು.
ಕರ್ನಾಟಕದ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳ ಮತದಾನ ವಿಧಾನಸೌಧದ ಮೊದಲ ಮಹಡಿಯಲ್ಲಿರುವ ಸಮಿತಿಯ ಕೊಠಡಿ ಸಂಖ್ಯೆ 106ರಲ್ಲಿ ಬಿರುಸಿನ ಮತದಾನ ನಡೆಯುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


