ರಾಜ್ಯ

ಅನುಪಮಾ ರಾಜಿನಾಮೆ ಅಂಗೀಕರಿಸಿದ ರಾಜ್ಯ ಸರ್ಕಾರ

ಹಲವು ದಿನಗಳಿಂದ ನಡೆಯುತ್ತಿರುವ ಕೂಡ್ಲಿಗಿ ಡಿವೈಎಸ್ ಪಿ ಅನುಪಮಾ ಪ್ರಕರಣದ ಹೈ ಡ್ರಾಮಾಗೆ ರಾಜ್ಯ ಸರ್ಕಾರ ತೆರೆ ಎಳೆದಿದ್ದು, ಅನುಪಮಾ ಅವರು ಸಲ್ಲಿಸಿದ್ದ ರಾಜಿನಾಮೆ ಪತ್ರವನ್ನು...

ಅನುಪಮಾ ರಾಜಿನಾಮೆ ಅಂಗೀಕರಿಸಿದ ರಾಜ್ಯ ಸರ್ಕಾರ
ಅನುಪಣಾ ಶೆಣೈ
Published On :

ಬೆಂಗಳೂರು: ಹಲವು ದಿನಗಳಿಂದ ನಡೆಯುತ್ತಿರುವ ಕೂಡ್ಲಿಗಿ ಡಿವೈಎಸ್ ಪಿ ಅನುಪಮಾ ಪ್ರಕರಣದ ಹೈ ಡ್ರಾಮಾಗೆ ರಾಜ್ಯ ಸರ್ಕಾರ ತೆರೆ ಎಳೆದಿದ್ದು, ಅನುಪಮಾ ಅವರು ಸಲ್ಲಿಸಿದ್ದ ರಾಜಿನಾಮೆ ಪತ್ರವನ್ನು ಗುರುವಾರ ಅಂಗೀಕರಿಸಿದೆ.

ಜೂನ್ 4 ರಂದು ಅನುಪಣಾ ಶೆಣೈ ಅವರು ತಮ್ಮ ಹುದ್ದೆಗೆ ರಾಜಿನಾಮೆ ಸಲ್ಲಿಸಿ ಸರ್ಕಾರಕ್ಕೆ ಮತ್ತು ಪೊಲೀಸ್ ಇಲಾಖೆ ಪತ್ರವೊಂದನ್ನು ಬರೆದು ಕಣ್ಮರೆಯಾಗಿದ್ದರು. ನಂತರ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದ್ದ ಈ ಪ್ರಕರಣ ಸಾಮಾಜಿಕ ಜಾಲತಾಣ ಫೇಸ್ ಬುಕ್ ಪೋಸ್ಟ್ ಗಳ ಬರವಣೆಗೆ ಮೂಲಕ ಜೀವಂತವಾಗಿ ಸಾಕಷ್ಟು ಸುದ್ದಿ ಮಾಡಿತ್ತು.

ತದನಂತರ ಸರ್ಕಾರದ ಆದೇಶದಂತೆ ಅನುಪಮಾ ಶೆಣೈ ಅವರ ಮನವೊಲಿಸಲು ಅಧಿಕಾರಿಗಳು ಸಾಕಷ್ಟು ಪ್ರಯತ್ನಗಳನ್ನು ಮಾಡಿದ್ದರು. ಆದರೆ, ಈ ಎಲ್ಲಾ ಪ್ರಯತ್ನಗಳನ್ನು ವಿಫಲಗೊಳಿಸಿದ್ದ ಅನುಪಮಾ ಶೆಣೈ ಅವರು ಯಾರಿಗೂ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ನಿನ್ನೆ ಬಳ್ಳಾರಿಯಲ್ಲಿ ಉನ್ನತಾಧಿಕಾರಿಗಳನ್ನು ಭೇಟಿ ಮಾಡಿದ್ದ ಅವರು ಮಾತುಕತೆ ನಡೆಸಿದ್ದರು.

ಇದರಂತೆ ಶೆಣೈ ಅವರ ರಾಜಿನಾಮೆ ಹಿಂದಿನ ವಿಚಾರವನ್ನು ಖಾತರಿಪಡಿಸಿಕೊಂಡಿರುವ ರಾಜ್ಯ ಸರ್ಕಾರ ಅಂತಿಮವಾಗಿ ಇದೀಗ ರಾಜಿನಾಮೆ ಪತ್ರವನ್ನು ಅಂಗೀಕರಿಸಿದೆ.

ಫೇಸ್ ಬುಕ್ ಸ್ಟೇಟಸ್ ಗೂ ನನಗೂ ಸಂಬಂಧವಿಲ್ಲ: ಅನುಪಮಾ ಶೆಣೈ
ಬಳ್ಳಾರಿಯಲ್ಲಿ ಉನ್ನತಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅನುಪಮಾ ಅವರು ಜನತೆಗೆ ದೊಡ್ಡ ಶಾಕ್ ವೊಂದನ್ನು ನೀಡಿದ್ದರು.

ನಾನು ಯಾವುದೇ ಫೇಸ್ ಬುಕ್'ನ್ನು ಹೊಂದಿಲ್ಲ. ನನಗೂ ಹಾಗೂ ಫೇಸ್ ಬುಕ್ ನಲ್ಲಿನ ಸ್ಟೇಟಸ್ ಗೂ ಯಾವುದೇ ಸಂಬಂಧವಿಲ್ಲ. ನನಗೆ ಫೇಸ್ ಬುಕ್ ಬಳಕೆ ಮಾಡುವುದೇ ಗೊತ್ತಿಲ್ಲ ಎಂದು ಹೇಳಿದ್ದರು.

ಈ ಹೇಳಿಕೆ ಇದೀಗ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಫೇಸ್ ಬುಕ್ ನಲ್ಲಿರುವ ಆ ಖಾತೆ ಯಾರದ್ದು..? ಸ್ಟೇಟಸ್ ಗಳನ್ನು ಹಾಕುತ್ತಿರುವುದು ಯಾರು? ಫೇಸ್ ಬುಕ್ ಅಕೌಂಟ್ ತಮ್ಮದಲ್ಲ ಎಂದು ಗೊತ್ತಾದರೂ ಅನುಪಮಾ ಅವರು ಯಾವ ಕಾರಣಕ್ಕೆ ದೂರು ನೀಡುತ್ತಿಲ್ಲ? ಎಂಬ ಹಲವು ಪ್ರಶ್ನೆಗಳು ಮೂಡತೊಡಗಿವೆ.

ಇದರ ಮಧ್ಯೆಯೇ ಇದೀಗ ಮತ್ತೆ ಅನುಪಮಾ ಶೆಣೈ ಅವರ ಫೇಸ್ ಬುಕ್ ಖಾತೆಯಿಂದ ಹೊಸದಾಗಿ ಸ್ಟೇಟಸ್ ಗಳು ಹೊರಬರುತ್ತಿದ್ದು,  ರಾಜದ್ರೋಹ! ದುರ್ಯೋಧನಾ, ಯಾರಿಗೆ ಹೆದರಿಸ್ತಿದ್ದೀಯಾ, ಸಂವಿಧಾನ ನಿನ್ನ ಅಪ್ಪನ ಮನೆ ಆಸ್ತಿಯಲ್ಲ.

ಫೇಸ್ ಬುಕ್ ಮಿತ್ರರೇ, ಭೀಷ್ಮ ಪಿತಾಮಹ ಎಂದಿನಂತೆ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ನಾನು ನಿಮಿತ್ತ ಮಾತ್ರ, ಕುರುಕ್ಷೇತ್ರ ಯುದ್ಧ ನಡೆಯಲೇಬೇಕು ಎಂದಿದ್ದಾರೆ. ದ್ರೌಪದಿಗಾಗಿರುವುದು 1852ರ ಅಪಮಾನ ಎಂದು ಹೇಳಿಕೊಂಡಿರುವುದು ಫೇಸ್ ಬುಕ್ ನಲ್ಲಿ ಕಂಡುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.