ವಿಧಾನ ಪರಿಷತ್ ಶಿಕ್ಷಕ, ಪದವೀಧರ ಕ್ಷೇತ್ರಗಳಿಗೆ ಮತದಾನ ಆರಂಭ
ವಿಧಾನಪರಿಷತ್ತಿನ ನಾಲ್ಕು ಶಿಕ್ಷಕ ಮತ್ತು ಪದವೀಧರ ಕ್ಷೇತ್ರಗಳಿಗೆ ಚುನಾವಣೆಯ ಮತದಾನ...

ಬೆಂಗಳೂರು: ವಿಧಾನಪರಿಷತ್ತಿನ ನಾಲ್ಕು ಶಿಕ್ಷಕ ಮತ್ತು ಪದವೀಧರ ಕ್ಷೇತ್ರಗಳಿಗೆ ಚುನಾವಣೆಯ ಗುರುವಾರ ಮತದಾನ ನಡೆಯುತ್ತಿದೆ.
ವಾಯುವ್ಯ ಪದವೀಧರರ ಕ್ಷೇತ್ರ, ದಕ್ಷಿಣ ಪದವೀಧರರ ಕ್ಷೇತ್ರ, ವಾಯುವ್ಯ ಶಿಕ್ಷಕರ ಕ್ಷೇತ್ರ ಹಾಗೂ ಪಶ್ಚಿಮ ಶಿಕ್ಷಕರ ಕ್ಷೇತ್ರಗಳಿಗೆ ಈಗಾಗಲೇ ಮತದಾನ ಆರಂಭವಾಗಿದ್ದು, ಸಂಜೆ 4ಗಂಟೆವರೆಗೆ ನಡೆಯಲಿದೆ. ಈ ತಿಂಗಳ 13ರಂದು ಮತ ಎಣಿಕೆ ನಡೆಯಲಿದೆ.
ಕಾಂಗ್ರೆಸ್ಸಿನ ಮಹಾಂತೇಶ್ ಕೌಜಲಗಿ (ವಾಯುವ್ಯ ಪದವೀಧರರ ಕ್ಷೇತ್ರ), ಬಿಜೆಪಿಯ ಗೋ.ಮಧುಸೂಧನ್ (ದಕ್ಷಿಣ ಪದವೀಧರರ ಕ್ಷೇತ್ರ), ಅರುಣ್ ಶಹಾಪೂರ (ವಾಯುವ್ಯ ಶಿಕ್ಷಕರ ಕ್ಷೇತ್ರ) ಹಾಗೂ ಜೆಡಿಎಸ್‌ನ ಬಸವರಾಜ ಹೊರಟ್ಟಿ (ಪಶ್ಚಿಮ ಶಿಕ್ಷಕರ ಕ್ಷೇತ್ರ) ಅವರ ಅವಧಿ ಮುಗಿದ ಹಿನ್ನೆಲೆಯಲ್ಲಿ ಚುನಾವಣೆ ಎದುರಾಗಿದೆ. ಇವರ ಪೈಕಿ ಮಹಾಂತೇಶ್ ಕೌಜಲಗಿ, ಅರುಣ್ ಶಹಾಪೂರ್ ಹಾಗೂ ಹೊರಟ್ಟಿ ಮತ್ತೆ ಸ್ಪರ್ಧೆಗಿಳಿದ್ದಾರೆ.
ವಾಯುವ್ಯ ಪದವೀಧರರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಹಾಂತೇಶ್ ಕೌಜಲಗಿ, ಬಿಜೆಪಿಯಿಂದ ಹನುಮಂತಪ್ಪ ನಿರಾಣಿ, ಜೆಡಿಎಸ್‌ನಿಂದ ಸಾತಗೌಡ ಪಾಟೀಲ್ ಹಾಗೂ ಜೆಡಿಯುನಿಂದ ಡಾ.ಎಂ.ಪಿ.ನಾಡಗೌಡ ಕಣದಲ್ಲಿರುವ ಪ್ರಮುಖರು. ಜತೆಗೆ 12 ಮಂದಿ ಪಕ್ಷೇತರರೂ ಸ್ಪರ್ಧೆಗಿಳಿದಿದ್ದಾರೆ.
ದಕ್ಷಿಣ ಪದವೀಧರರ ಕ್ಷೇತ್ರದಲ್ಲಿ ಬಿಜೆಪಿಯಿಂದ ಮೈ.ವಿ.ರವಿಶಂಕರ್, ಕಾಂಗ್ರೆಸ್ ಪಕ್ಷದಿಂದ ಡಾ.ಎಚ್.ಎನ್.ರವೀಂದ್ರ, ಜೆಡಿಎಸ್‌ನಿಂದ ಕೆ.ಟಿ.ಶ್ರೀಕಂಠೇಗೌಡ ಹಾಗೂ ಕನ್ನಡ ಚಳವಳಿ ವಾಟಾಳ್ ಪಕ್ಷದಿಂದ ವಾಟಾಳ್ ನಾಗರಾಜ್ ಕಣಕ್ಕಿಳಿದಿದ್ದಾರೆ.
ಇನ್ನು ಸಾಹಿತಿಗಳ ವಲಯದಿಂದ ಪ್ರೊ.ಕೆ.ಎಸ್.ಭಗವಾನ್ ಸೇರಿದಂತೆ 13 ಮಂದಿ ಪಕ್ಷೇತರರಿದ್ದಾರೆ. ವಾಯುವ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿಯಿಂದ ಅರುಣ್ ಶಹಾಪೂರ. ಕಾಂಗ್ರೆಸ್ಸಿನಿಂದ ನಿಂಗಪ್ಪ ಬನ್ನೂರ, ಜೆಡಿಎಸ್‌ನಿಂದ ಶಿವರುದ್ರಪ್ಪ ಅಂಗಡಿ ಕಣಕ್ಕಿಳಿದಿದ್ದಾರೆ. ಇವರೊಂದಿಗೆ ಒಂಬತ್ತು ಮಂದಿ ಪಕ್ಷೇತರರೂ ಅಖಾಡದಲ್ಲಿದ್ದಾರೆ.
ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಬಸವರಾಜ ಹೊರಟ್ಟಿ, ಬಿಜೆಪಿಯಿಂದ ಪ್ರೊ.ಎಂ.ನಾಗರಾಜ, ಕಾಂಗ್ರೆಸ್‌ನಿಂದ ಟಿ.ಈಶ್ವರ, ಜತೆಗೆ ಐವರು ಪಕ್ಷೇತರರೂ ಕಣದಲ್ಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


