ಕೂಡ್ಲಿಗಿಗೆ ಮರಳಿದ ಡಿಎವೈಎಸ್ಪಿ ಅನುಪಮಾ ಶೆಣೈ
ಡಿವೈಎಸ್‌ಪಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅನುಪಮಾ ಶೆಣೈ ಪತ್ತೆಯಾಗಿದ್ದಾರೆ. ಗುರುವಾರ ಮುಂಜಾನೆ ಅವರು ಕೂಡ್ಲಿಗೆಗೆ ಆಗಮಿಸಿದ್ದಾರೆ..

ಬಳ್ಳಾರಿ : ಡಿವೈಎಸ್‌ಪಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅನುಪಮಾ ಶೆಣೈ ಪತ್ತೆಯಾಗಿದ್ದಾರೆ. ಗುರುವಾರ ಮುಂಜಾನೆ ಅವರು ಕೂಡ್ಲಿಗೆಗೆ ಆಗಮಿಸಿದ್ದಾರೆ. ಸದ್ಯ ಅನುಪಮಾ ಕೂಡ್ಲಿಗಿಯ ಪೊಲೀಸ್ ವಸತಿ ಗೃಹದಲ್ಲಿ ವಾಸ್ತವ್ಯ ಹೂಡಿದ್ದಾರೆ.
ತಮ್ಮ ಸಹೋದರ ಅಚ್ಯುತ್ ಜೊತೆ ಅನುಪಮಾ ಶೆಣೈ ಇಂದು ಬೆಳಗ್ಗೆ ಕೂಡ್ಲಿಗಿಗೆ ಆಗಮಿಸಿದ್ದಾರೆ.ಇಂದು ಸಂಜೆ ಅವರು ಬಳ್ಳಾರಿ ಎಸ್‌ಪಿ ಆರ್.ಚೇತನ್ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಜೂನ್ 4ರ ಶನಿವಾರ ಅನುಪಮಾ ಶೆಣೈ ಅವರು ರಾಜೀನಾಮೆ ನೀಡಿದ್ದರು. ನಂತರ ಅವರು ಬಹಿರಂಗವಾಗಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ.
ಪೊಲೀಸ್ ಮಹಾನಿರ್ದೇಶಕರ ಸೂಚನೆಯಂತೆ ಅವರನ್ನು ಹುಡುಕಲು ಬುಧವಾರ ಪೊಲೀಸರ ತಂಡ ರಚನೆ ಮಾಡಲಾಗಿತ್ತು. ಬುಧವಾರ ರಾತ್ರಿ ಭಟ್ಕಳದಿಂದ ಹೊರಟ ಅನುಪಮಾ ಶೆಣೈ ಅವರು, ಹುಬ್ಬಳ್ಳಿ ಮೂಲಕ ಗುರುವಾರ ಮುಂಜಾನೆ 4.30ರ ಸುಮಾರಿಗೆ ಕೂಡ್ಲಿಗಿಯಲ್ಲಿರುವ ಪೊಲೀಸ್ ಕ್ವಾಟರ್ಸ್‌ಗೆ ಆಗಮಿಸಿದರು. ಸಂಜೆ ಅವರು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿ ಮಾಡಿ, ರಾಜೀನಾಮೆ ಪ್ರಕರಣದ ಬಗ್ಗೆ ವಿವರಣೆ ನೀಡುವ ಸಾಧ್ಯತೆ ಇದೆ.
ಇನ್ನೂ ಪಿ.ಟಿ ಪರಮೇಶ್ವರ್ ನಾಯಕ್ ಅವರ ಪ್ರಣಯ ಪ್ರಸಂಗದ ಸಿಡಿ ಮತ್ತು ಆಡಿಯೋ ಎರಡು ಇದೆ, ಸಂದರ್ಭ ಬಂದಾಗ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಚಿತ್ರದುರ್ಗದ ಹಾನಗಲ್ ಐಬಿಯಲ್ಲಿ ಮಹಿಳೆಯೋರ್ವಳ ಜೊತೆ ಪರಮೇಶ್ವರ ನಾಯಕ್ ಇದ್ದ ವಿಡಿಯೋ ನನ್ನ ಬಳಿ ಇದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


