ನಗರದ ಟ್ರಾಫಿಕ್ ಸಮಸ್ಯೆಗೆ ನಲುಗಿದ ಅಪಾಘಾತ ಸಂತ್ರಸ್ತ
ನಗರದಲ್ಲು ಉಂಟಾಗ ಟ್ರಾಫಿಕ್ ಸಮಸ್ಯೆಯಿಂದಾಗಿ ಅಪಘಾತಕ್ಕೀಡಾದ ಸಂತ್ರಸ್ತನೊಬ್ಬ ಸಂಕಷ್ಟದಲ್ಲಿ ಆಸ್ಪತ್ರೆಗೆ ತಲುಪಿರುವ ಘಟನೆ ಶುಕ್ರವಾರ ನಡೆದಿದೆ...

ಬೆಂಗಳೂರು: ನಗರದಲ್ಲಿ ಉಂಟಾಗ ಟ್ರಾಫಿಕ್ ಸಮಸ್ಯೆಯಿಂದಾಗಿ ಅಪಘಾತಕ್ಕೀಡಾದ ಸಂತ್ರಸ್ತನೊಬ್ಬ ಸಂಕಷ್ಟದಲ್ಲಿ ಆಸ್ಪತ್ರೆಗೆ ತಲುಪಿರುವ ಘಟನೆ ಶುಕ್ರವಾರ ನಡೆದಿದೆ.
ಕೃಷ್ಣಗರಿಯ ಬಸ್ ವೊಂದಕ್ಕೆ ಲಾರಿಯೊಂದು ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ಶರಣವನ್ (26) ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದರು. ಇದರಂತೆ ಕೃಷ್ಣಗಿರಿಯ ಸರ್ಕಾರಿ ಆಸ್ಪತ್ರೆಯ ವೈದ್ಯರು ಶರವಣನ್ ಅವರನ್ನು ನಗರದ ನಿಮ್ಹಾನ್ಸ್ ಆಸ್ಪತ್ರೆಗೆ ಕೂಡಲೇ ಕರೆದೊಯ್ಯುವಂತೆ ತಿಳಿಸಿದ್ದಾರೆ.
ಆ್ಯಂಬುಲೆನ್ಸ್ ಮೂಲಕ ಶರಣವನ್ ಅವರು ನಿಮ್ಹಾನ್ಸ್ ಆಸ್ಪತ್ರೆಗೆ ಬಂದಿದ್ದಾರೆ. ಆದರೆ, ನಗರದಲ್ಲಿ ಉಂಟಾಗಿದ್ದ ಟ್ರಾಫಿಕ್ ಸಮಸ್ಯೆ ಅವರ ಸ್ಥಿತಿಯನ್ನು ಮತ್ತಷ್ಟು ಚಿಂತಾಜನಕವಾಗುವಂತೆ ಮಾಡಿದೆ.
ಆ್ಯಂಬುಲೆನ್ಸ ಚಾಲಕ ಅಣ್ಣಾಮಲೈ ಅವರು ಮಾತನಾಡಿ, ಸಂಜೆ 5.45ರ ಸುಮಾರಿಗೆ ಕೃಷ್ಣಗಿರಿಯಿಂದ ಶರವಣನ್ ಅವರನ್ನು ಕರೆತರಲಾಗಿತ್ತು. 6.50-6.55ರ ಸುಮಾರಿಗೆ ಎಲೆಕ್ಟ್ರಾನಿಕ್ ಸಿಟಿಗೆ ತಲುಪಿದ್ದೆವು. ನಗರದಲ್ಲಿ ಟ್ರಾಫಿಕ್ ಇದ್ದ ಕಾರಣ ಆಸ್ಪತ್ರೆಗೆ ತಲುಪುವುದು ಬಹಳ ಕಷ್ಟವಾಗಿತ್ತು. ಕಾರು ಹಾಗೂ ಬೈಕ್ ಗಳು ಆ್ಯಂಬುಲೆನ್ಸ್ ಹೋಗಲು ದಾರಿ ಮಾಡಿಕೊಡಲಿಲ್ಲ. ಟ್ರಾಫಿಕ್ ನಿಂದ ಕೂಡಿದ ರಸ್ತೆಗಳಲ್ಲಿ ರೋಗಿಗಳನ್ನು ಆಸ್ಪತ್ರೆಗೆ ಕರೆತರುವುದು ಆ್ಯಂಬುಲೆನ್ಸ್ ಚಾಲಕರಿಗೆ ಇದೊಂದು ದೊಡ್ಡ ಸಮಸ್ಯೆಯಾಗಿದೆ ಎಂದು ಹೇಳಿದ್ದಾರೆ.
1 ಗಂಟೆ 10 ನಿಮಿಷಗಳಲ್ಲಿ 71 ಕಿ.ಮೀ ಬಂದಿದ್ದೇವೆ. ನಗರದಲ್ಲಿ ಕೇವಲ 15 ಕಿ.ಮೀ ಹೋಗುವುದಕ್ಕೆ 1 ಗಂಟೆ ಬೇಕಾಯಿತು. ಎಲೆಕ್ಟ್ರಾನಿಕ್ ಸಿಟಿಯಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದ್ದು, ಇಲ್ಲಿಂದ ನಿಮ್ಹಾನ್ಸ್ ಗೆ ರೋಗಿಗಳನ್ನು ಕರೆಕೊಂಡು ಹೋಗುವುದು ಕಷ್ಟವಾಗಿದೆ. ರಸ್ತೆ ಬದಲಿಸಿ ಆಸ್ಪತ್ರೆಗೆ ತಲುಪಲು ನೋಡಿದರೂ ಅಲ್ಲಿಯೂ ಟ್ರಾಫಿಕ್ ಇರುತ್ತದೆ. ದ್ವಿಚಕ್ರ ವಾಹನಗಳು, ಕಾರುಗಳು ಆ್ಯಂಬುಲೆನ್ಸ್ ಹೋಗಲು ದಾರಿ ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಶರವಣನ್ ಪತ್ನಿ ಸೇಮ್ಬ್ರಾತಿ ಮಾತನಾಡಿ, ಅಪಘಾತ ಸಂಭವಿಸಿದ ವಿಚಾರ ಸಂಜೆ 4.10ರ ಸುಮಾರಿಗೆ ತಿಳಿಯಿತು. ಕೂಡಲೇ ಅವರನ್ನು ಕೃಷ್ಣಗಿರಿಯ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿನ ವೈದ್ಯರು ಪತಿಯನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದೊಯ್ಯುವಂತೆ ತಿಳಿಸಿದರು. ಟ್ರಾಫಿಕ್ ಸಮಸ್ಯೆ ನಮ್ಮ ಆತಂಕವನ್ನು ಮತ್ತಷ್ಟು ಹೆಚ್ಚು ಮಾಡಿತ್ತು. ರಸ್ತೆಯಲ್ಲಿ ಕಾರು ಹಾಗೂ ಬೈಕ್ ಸವಾರರು ದಾರಿ ಬಿಡದಿರುವುದು ನಿಜಕ್ಕೂ ಬೇಸರ ತಂದಿತ್ತು. ಈ ರೀತಿಯ ಸಮಸ್ಯೆಗಳಿಗೆ ಬದಲಾವಣೆಯಾಗದಿದ್ದರೆ, ಮುಂದಿನ ದಿನಗಳಲ್ಲಿ ಬೆಂಗಳೂರಿನ ಜನತೆ ಕೂಡ ಕಷ್ಟ ಪಡಬೇಕಾಗುತ್ತದೆ ಎಂದು ಹೇಳಿದ್ದಾರೆ.
ಇನ್ನು ಶರವಣನ್ ಅವರ ಸ್ಥಿತಿ ಕುರಿತಂತೆ ಮಾತನಾಡಿರುವ ನರ್ಸ್ ಇಲ್ವೇಣಿಯವರು, ಶರಣವಣನ್ ಅವರ ತಲೆಯಲ್ಲಿ ರಕ್ತ ಹೆಚ್ಚು ಗಟ್ಟಿದ್ದು, ಅವರು, ಎಪಿಲೆಪ್ಟಿಕ್ ಸೀಸರ್ಸ್ ರೋಗದಿಂದ ಬಳಲುತ್ತಿದ್ದಾರೆ. ಅಲ್ಲದೆ, ರೋಗಿ ಆಸ್ಪತ್ರೆಗೆ ತಲುಪಿರುವುದು ಚಿಕಿತ್ಸೆ ಕೊಡಲು ತಡವಾಗಿದ್ದು, ಅವರು ಪ್ರಜ್ಞೆ ತಪ್ಪಿದ್ದಾರೆ. ತಡವಾದದ್ದು ರೋಗಿಯ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


