ಆಮದಾಗುವ ಬೂತಾಯಿ ಮೀನಿಗೆ ಪ್ರಧಾನಿ ಮೋದಿ ಹೆಸರು
ಮೀನುಗಳಲ್ಲಿ ವೆಚ್ಚ, ರುಚಿ ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಆದ್ಯತೆ ಪಡೆದಿರುವ ಬೂತಾಯಿಗೆ ಈಗ 'ಮೋದಿ ಬೂತಾಯಿ' ಎಂದು ಹೊಸದಾಗಿ ನಾಮಕರಣ ...

ಮಂಗಳೂರು: ಮೀನುಗಳಲ್ಲಿ ವೆಚ್ಚ, ರುಚಿ ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಆದ್ಯತೆ ಪಡೆದಿರುವ ಬೂತಾಯಿಗೆ ಈಗ 'ಮೋದಿ ಬೂತಾಯಿ' ಎಂದು ಹೊಸದಾಗಿ ನಾಮಕರಣ ಮಾಡಲಾಗಿದೆ.
ಮಂಗಳೂರಿಗೆ ಮೀನಿನ ಬೇಡಿಕೆ ಪೂರೈಸಲು ಒಮನ್‌ನಿಂದ ಹೆಚ್ಚಿನ ಪ್ರಮಾಣದಲ್ಲಿ ಬೂತಾಯಿ ಆಮದು ಮಾಡಿಕೊಳ್ಳಲಾಗುತ್ತಿದೆ. ನರೇಂದ್ರ ಮೋದಿ ಪ್ರಧಾನಿಯಾದ ವರ್ಷದಲ್ಲಿ ಒಮನ್‌ನಿಂದ ಆಮದು ಮಾಡಲಾಗಿರುವ ಈ ಮೀನು ಮೊದಲ ಬಾರಿಗೆ ಹಡಗು ಮೂಲಕ ಗುಜರಾತ್ ಕರಾವಳಿಯಲ್ಲಿ ಬಂದಿಳಿದಿತ್ತು. ಒಮನ್‌ನಿಂದ ಹೊರಡುವ ಹಡಗಿಗೆ ಗುಜರಾತ್ ಕರಾವಳಿ ಭಾರತದ ಹತ್ತಿರದ ಬಂದರು ಆಗಿರುವುದೇ ಇದಕ್ಕೆ ಕಾರಣ. ಹೀಗೆ ಒಮನ್‌ನಿಂದ ಆಮದು ಮಾಡಲಾದ ಮೀನು ಮೊದಲ ಬಾರಿಗೆ ಗುಜರಾತ್ ಕರಾವಳಿಗೆ ಬಂದು ತಲುಪಿದ ಕಾರಣ ಮೋದಿ ಅವರ ಹೆಸರನ್ನು ಇದಕ್ಕೆ ಇಡಲಾಗಿದೆ.
ಮೋದಿ ಬೂತಾಯಿ ಸಾಮಾನ್ಯಕ್ಕಿಂತ ಗಾತ್ರದಲ್ಲಿ ದೊಡ್ಡದು. ಸ್ಥಳೀಯ ಬೂತಾಯಿ ಕೆ.ಜಿಗೆ 15-20 ಬಂದರೆ ಒಮನ್‌ನ ಒಂದು ಮೀನು 150-200 ಗ್ರಾಂ ಇರುತ್ತದೆ. ಸ್ಥಳೀಯ ಬೂತಾಯಿ ಬೆಲೆ ಕೆ.ಜಿಗೆ 120 ಇದ್ದರೆ ಒಮನ್ ಬೂತಾಯಿ ಬೆಲೆ ಕೆ.ಜಿಗೆ 190 ರೂ. ರುಚಿಯಲ್ಲೂ ಸ್ಥಳೀಯರು ಒಮನ್ ಬೂತಾಯಿಯನ್ನು ಹೆಚ್ಚು ಇಷ್ಟ ಪಡುತ್ತಾರೆ ಎಂದು ಲೋಕೇಶ್ ಉಲ್ಲಾಳ ಎಂಬುವರು ಹೇಳಿದ್ದಾರೆ.
ಭಾರತಕ್ಕೆ ಪ್ರತಿನಿತ್ಯ 400 ಟನ್‌ಗಳಷ್ಟು ಬೂತಾಯಿ ಮೀನುಗಳನ್ನು ಹಡಗುಗಳ ಮೂಲಕ ಆಮದು ಮಾಡಿಕೊಳ್ಳಲಾಗುತ್ತಿದೆ. ಮೀನಿನ ಪ್ರಮಾಣ ಕುಗ್ಗುತ್ತಿರುವ ಸಂದರ್ಭದಲ್ಲಿ ಜನಸಾಮಾನ್ಯರಿಗೆ ಒಮನ್‌ನಿಂದ ಮೀನನ್ನು ಆಮದು ಮಾಡಿ ಪೂರೈಸುತ್ತಿರುವುದಕ್ಕೆ ಇಲ್ಲಿನ ಜನತೆ ಧನ್ಯವಾದ ಹೇಳಿದ್ದಾರೆ.
ಮೋದಿ ಬೂತಾಯಿ ಗಾತ್ರ ದೊಡ್ಡದಿದ್ದು, ಉತ್ತಮ ಮೀನು ಪೂರೈಕೆಯಾಗುತ್ತಿರುವುದಕ್ಕೆ ಸಂತೋಷವಾಗಿರುವುದಾಗಿ ಗೃಹಿಣಿ ಹೇಳುತ್ತಾರೆ. ಈ ಒಮನ್‌ನಿಂದ ಆಮದಾಗುವ ಮೀನು ಕರ್ನಾಟಕ ಮತ್ತು ಕೇರಳ ಕರಾವಳಿಗಳಲ್ಲಿ ಮಾರಾಟವಾಗುತ್ತವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


