ರಾಜ್ಯ

ವೇತನ ಹೆಚ್ಚಳವಾದರೂ ಸಮಯಕ್ಕೆ ಸರಿಯಾಗಿ ಸಿಗುವುದು ಸಂಶಯ; ಆರ್ಥಿಕ ಸಂಕಷ್ಟದಲ್ಲಿ ಸಾರಿಗೆ ಇಲಾಖೆ

ರಾಜ್ಯ ರಸ್ತೆ ಸಾರಿಗೆ ನೌಕರರ ಮುಷ್ಕರದ ನಂತರ ಅನಿವಾರ್ಯವಾಗಿ ಶೇಕಡಾ 12.5ರಷ್ಟು ವೇತನ ಹೆಚ್ಚಿಸಲಾಗಿದ್ದರೂ...

ವೇತನ ಹೆಚ್ಚಳವಾದರೂ ಸಮಯಕ್ಕೆ ಸರಿಯಾಗಿ ಸಿಗುವುದು ಸಂಶಯ; ಆರ್ಥಿಕ ಸಂಕಷ್ಟದಲ್ಲಿ ಸಾರಿಗೆ ಇಲಾಖೆ
ಸಾಂದರ್ಭಿಕ ಚಿತ್ರ
Published On :
ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನೌಕರರ ಮುಷ್ಕರದ ನಂತರ ಅನಿವಾರ್ಯವಾಗಿ ಶೇಕಡಾ 12.5ರಷ್ಟು ವೇತನ ಹೆಚ್ಚಿಸಲಾಗಿದ್ದರೂ ರಸ್ತೆ ಸಾರಿಗೆ ನಿಗಮ ಹಣಕಾಸಿನ ದುಸ್ಥಿತಿಕೆ ಸಿಲುಕಿ ನಲುಗುತ್ತಿದೆ. ನೌಕರರಿಗೆ ಸಮಯಕ್ಕೆ ಸರಿಯಾಗಿ ಇನ್ನು ಮೂರು ತಿಂಗಳು ಸಂಬಳ ನೀಡುವುದು ಕಷ್ಟ ಎನ್ನುತ್ತಿದ್ದಾರೆ ಕೆಎಸ್ಆರ್ ಟಿಸಿಯ ವ್ಯವಸ್ಥಾಪಕ ನಿರ್ದೇಶಕ ರಾಜೇಂದರ್ ಕುಮಾರ್ ಕಟಾರಿಯಾ. 
ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಅವರು, ಹೊಸ ವೇತನದ ಪ್ರಕಾರ ಸಾರಿಗೆ ನೌಕರರಿಗೆ ಸಂಬಳ ನೀಡಲು ಹೆಚ್ಚುವರಿ 14 ಕೋಟಿ ರೂಪಾಯಿ ಬೇಕಾಗಿದೆ ಎಂದರು.
ಬಿಎಂಟಿಸಿಯ ವ್ಯವಸ್ಥಾಪಕ ನಿರ್ದೇಶಕಿ ಡಾ. ಎಕ್ರೂಪ್ ಕೌರ್, ತಮ್ಮ ಸಂಸ್ಥೆ ಕೂಡ ಆರ್ಥಿಕ ಸಂಕಷ್ಟ ಎದುರಾಗಿದೆ ಎನ್ನುತ್ತಾರೆ. ನಮಗೆ ತಿಂಗಳಿಗೆ 10 ಕೋಟಿ ರೂಪಾಯಿ ಹೆಚ್ಚುವರಿ ಹಣ ಬೇಕಾಗಿದೆ. ಹಾಗಾಗಿ ವೇತನ ನೀಡಿಕೆಯಲ್ಲಿ ವಿಳಂಬವಾಗುವ ಸಾಧ್ಯತೆಯಿದೆ ಎಂದರು.
ಇನ್ನು ರಾಜ್ಯದ ಇತರ ಎರಡು ನಿಗಮಗಳಾದ ವಾಯುವ್ಯ ಮತ್ತು ಈಶಾನ್ಯ ರಸ್ತೆ ಸಾರಿಗೆ ನಿಗಮಗಳದ್ದೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಪ್ರಸ್ತುತ ಕಚೇರಿಯ ಸಿಬ್ಬಂದಿ ಪ್ರತಿ ತಿಂಗಳ ಮೊದಲ ದಿನ ವೇತನ ಪಡೆಯುತ್ತಾರೆ. ತಾಂತ್ರಿಕ ಸಿಬ್ಬಂದಿ ನಾಲ್ಕನೇ ದಿನ, ಚಾಲಕರು ಮತ್ತು ನಿರ್ವಾಹಕರು ಏಳನೇ ತಾರೀಖಿನಂದು ಸಂಬಳ ಪಡೆಯುತ್ತಾರೆ.
ನೌಕರರಿಗೆ ವೇತನವನ್ನ ಹೆಚ್ಚಿಸಿರುವುದರಿಂದ ಸಮಯಕ್ಕೆ ಸರಿಯಾಗಿ ನೀಡಲು ನಿಗಮ ಪ್ರಯತ್ನಿಸುತ್ತಿದ್ದು ಇಲಾಖೆಯಲ್ಲಿ ಸೋರಿಕೆ ಮತ್ತು ವೆಚ್ಚದ ಹೊರೆಯನ್ನು ತಗ್ಗಿಸಲಾಗುವುದು. ಇಡೀ ದೇಶದಲ್ಲಿ ಕರ್ನಾಟಕದಲ್ಲಿಯೇ ಸಾರಿಗೆ ಇಲಾಖೆ ನೌಕರರಿಗೆ ಇಷ್ಟೊಂದು ವೇತನ ನೀಡುತ್ತಿರುವುದು ಎಂದರು.
ವೇತನ ಪರಿಷ್ಕರಣೆಯಿಂದ ನಾಲ್ಕು ನಿಗಮಗಳಿಗೆ ಹೆಚ್ಚುವರಿ ಸಾವಿರದ 775 ಕೋಟಿ ರೂಪಾಯಿ 4 ವರ್ಷಗಳಲ್ಲಿ ಹೊರೆ ಬೀಳಲಿದೆ. ಕೆಎಸ್ ಆರ್ ಟಿಸಿಯೊಂದಕ್ಕೇ 730 ಕೋಟಿ ರೂಪಾಯಿ ಹೆಚ್ಚುವರಿ ಹೊರೆ ಬೀಳಲಿದೆ. ಇದರರ್ಥ ನಷ್ಟವನ್ನು ಭರಿಸಲು ಪ್ರತಿದಿನ 50 ಲಕ್ಷದಷ್ಟು ಆದಾಯ ತರಬೇಕು.
 ''ಮೂರು ದಿನಗಳ ಮುಷ್ಕರದಿಂದ ಸಾವಿರಾರು ಕೋಟಿ ರೂಪಾಯಿ ನಷ್ಟವಾಗಿದೆ. ಆಗಸ್ಟ್ ತಿಂಗಳಲ್ಲಿ ಹಬ್ಬಹರಿದಿನ, ರಜೆಗಳು ಆರಂಭವಾಗುವುದರಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವುದರಿಂದ ಉತ್ತಮ ಆದಾಯ ಬರುವ ನಿರೀಕ್ಷೆಯಿದೆ ಎಂದರು ಕಠಾರಿಯಾ.
ಮೊನ್ನೆಯ ಮುಷ್ಕರ ಮತ್ತು ಬಂದ್ ಸಮಯದಲ್ಲಿ ಬಸ್ಸುಗಳಿಗೆ ಹಾನಿ ಮಾಡಿದ ಸಿಬ್ಬಂದಿ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕಠಾರಿಯಾ ಭರವಸೆ ನೀಡಿದರು. ಸುಮಾರು 200 ಬಸ್ ಹಾನಿಗೀಡಾಗಿವೆ. ನಾವು ಕ್ರಿಮಿನಲ್ ಕೇಸು ದಾಖಲಿಸಿದ್ದೇವೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.