ಸಿಗದ ಸಂಬಳ: 2ನೇ ಬಾರಿಗೆ ಆತ್ಮಹತ್ಯೆಗೆ ಯತ್ನಿಸಿದ ಹೋಂ ಗಾರ್ಡ್ ಸಿಬ್ಬಂದಿ ಸುಮತಿ
4 ತಿಂಗಳಿಂದ ವೇತನ ಸಿಗದಿದ್ದಕ್ಕೆ ಬೇಸತ್ತು ಹಿರಿಯ ಅಧಿಕಾರಿಗಳ ಮುಂದೆ ಗುರುವಾರ ಆತ್ಮಹತ್ಯೆಗೆ ಯತ್ನಿಸಿದ್ದ ಗೃಹ ರಕ್ಷಕ ದಳ ಸಿಬ್ಬಂದಿ ಎಸ್ ಸುಮತಿ ಮತ್ತೆ ...

ಬೆಂಗಳೂರು: 4 ತಿಂಗಳಿಂದ ವೇತನ ಸಿಗದಿದ್ದಕ್ಕೆ ಬೇಸತ್ತು ಹಿರಿಯ ಅಧಿಕಾರಿಗಳ ಮುಂದೆ ಗುರುವಾರ ಆತ್ಮಹತ್ಯೆಗೆ ಯತ್ನಿಸಿದ್ದ ಗೃಹ ರಕ್ಷಕ ದಳ ಸಿಬ್ಬಂದಿ ಎಸ್ ಸುಮತಿ ಮತ್ತೆ ಶುಕ್ರವಾರ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವ ಸುಮತಿ ಅವರನ್ನು ಎರಡನೇ ಬಾರಿಗೆ ಆತ್ಮಹತ್ಯೆ ಪ್ರಯತ್ನ ನಡೆಸಿದ್ದು, ಆಕೆಯ 15 ವರ್ಷದ ಪುತ್ರ ರಕ್ಷಿಸಿದ್ದಾನೆ. ಹಣಕಾಸಿನ ಒತ್ತಡ ಎದುರಿಸಲಾಗದೇ ಶುಕ್ರವಾರ ಸುಮತಿ ಎರಡು ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದನ್ನು ಮನಗಂಡ ಪುತ್ರ ಗೋಕುಲ್ ಆಕೆಯನ್ನು ತಕ್ಷಣವೇ ಶಿವಾಜಿನಗರದ ಆಸ್ಪತ್ರೆಗೆ ದಾಖಲಿಸಿದ್ದಾನೆ.
ದೇವರು ದೊಡ್ಡವನು ಎರಡನೇ ಬಾರಿಗೆ ನನ್ನ ಮಗನ ಮೂಲಕ ನನ್ನನ್ನು ಬದುಕಿಸಿದ್ದಾನೆ. ನಾಳೆಯನ್ನು ಹೇಗೆ ಎದುರಿಸಬೇಕು ಎಂಬುದು ನನಗೆ ತಿಳಿಯುತ್ತಿಲ್ಲ ಎಂದು ತಮ್ಮ ಅಸಹಾಯಕತೆ ವ್ಯಕ್ತ ಪಡಿಸಿದ್ದಾರೆ.
ಇದು ಕೇವಲ ಸುಮತಿ ಮಾತ್ರವಲ್ಲ, ಉಳಿದ 619 ಹೋಮ್ ಗಾರ್ಡ್ ಸಿಬ್ಬಂದಿಯ ಕಥೆಯಾಗಿದೆ. ಹಲವು ತಿಂಗಳಿಂದ ಸಂಬಳ ಸಿಗದೇ ಇದ್ದುದ್ದರಿಂದ ಸುಮತಿ ಕೆಲವು ಪೊಲೀಸ್ ಅಧಿಕಾರಿಗಳಿಂದ ಹಣಕಾಸಿನ ಸಹಾಯ ಕೇಳಿದ್ದರು. ಆದರೆ ಆಗೆ ಯಾರು ಅವರ ನೆರವಿಗೆ ಬಂದಿರಲಿಲ್ಲ. ಈಗ ಅವರು ಆತ್ಮಹತ್ಯೆ ಮಾಡಿದ ಬಳಿಕ ಆರ್ಥಿಕ ಸಹಾಯ ನೀಡಲು ಮುಂದೆ ಬಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


