ತುಮಕೂರು: ಗೌರಿಶಂಕರ ಸ್ವಾಮೀಜಿ ಭೇಟಿಯಾಗಲು ಸಿದ್ದಗಂಗಾ ಶ್ರೀ ನಕಾರ
ಸಿದ್ದಗಂಗಾ ಮಠದ ಉತ್ತರಾಧಿಕಾರಿಯಾಗುವ ಬಯಕೆ ಹೊಂದಿ, ಮಠದಿಂದ ಹೊರಹಾಕಲ್ಪಟ್ಟಿದ್ದ ಶ್ರೀ ಗೌರಿ ಶಂಕರ ಸ್ವಾಮೀಜಿ ಅವರನ್ನು ಭೇಟಿಯಾಗಲು ..

ತುಮಕೂರು : ಸಿದ್ದಗಂಗಾ ಮಠದ ಉತ್ತರಾಧಿಕಾರಿಯಾಗುವ ಬಯಕೆ ಹೊಂದಿ, ಮಠದಿಂದ ಹೊರಹಾಕಲ್ಪಟ್ಟಿದ್ದ ಶ್ರೀ ಗೌರಿ ಶಂಕರ ಸ್ವಾಮೀಜಿ ಅವರನ್ನು ಭೇಟಿಯಾಗಲು ಶಿವಕುಮಾರ ಸ್ವಾಮೀಜಿ ಅವರು ನಿರಾಕರಿಸಿದ್ದಾರೆ.
ಶ್ರೀ ಸಿದ್ದಗಂಗಾ ಮಠದಲ್ಲಿ 1 ಗಂಟೆ ಸಮಯ ಇರಲು ಕೋರ್ಟ್‌ಗೆ ಅರ್ಜಿ ಸಲ್ಲಿಸಿ ಅನುಮತಿ ಪಡೆದು ಇಂದು ತುಮಕೂರಿಗೆ ಆಗಮಿಸಿದ್ದರು. ಆದರೆ ಶಿವಕುಮಾರ ಶ್ರೀಗಳು ಭೇಟಿ ನಿರಾಕರಿಸಿದ ಹಿನ್ನಲೆಯಲ್ಲಿ ವಾಪಾಸು ತೆರಳಿದ್ದಾರೆ.
ಶಿವಕುಮಾರ ಶ್ರೀಗಳು ಪತ್ರವೊಂದನ್ನು ಬರೆದು ಕ್ಯಾತ್ಸಂದ್ರ ಇನ್ಸ್‌ಪೆಕ್ಟರ್ ಅವರಿಗೆ ನೀಡಿ ಗೌರಿಶಂಕರ ಶ್ರೀಗಳಿಗೆ ನೀಡಲು ಹೇಳಿದ್ದಾರೆ. 'ನಿಮ್ಮನ್ನು ಭೇಟಿಯಾಗುವುದು ನನಗೆ ಇಷ್ಟವಿಲ್ಲ,ನಾನು ಅನಾರೋಗ್ಯದಿಂದ ಇರುವುದರಿಂದ ಮಾನಸಿಕ ತೊಂದರೆ ಯಾಗುತ್ತದೆ. ಆದ್ದರಿಂದ ಬರುವುದು ಬೇಡ, ಬಂದರೆ ಮಠದ ದೈನಂದಿನ ಕಾರ್ಯಗಳಿಗೆ ತೊಂದರೆಯಾಗುತ್ತದೆ' ಎಂದು ಪತ್ರದಲ್ಲಿ ಶೀಗಳು ಬರೆದಿದ್ದರು.
ಗುರುಗಳ ಆರೋಗ್ಯ ವಿಚಾರಣೆಯ ಸಲುವಾಗಿ ನಾನು ಭೇಟಿಯಾಗಿ ಆಶೀರ್ವಾದ ಪಡೆಯಲು ನಿರ್ಧರಿಸಿದ್ದೆ. ಗುರುಗಳು ಬರುವುದು ಬೇಡ ಎಂದು ಪತ್ರ ಕಳುಹಿಸಿದ್ದಾರೆ. ಬಲವಂತವಾಗಿ ಹೋಗುವುದು ಉತ್ತಮವಲ್ಲ ಆದ್ದರಿಂದ ಈ ಘಟನೆ ಬಗ್ಗೆ ನನಗೆ ನಿರಾಸೆಯಾಗಿರುವುದು ಸಹಜ , ನಾನು ವಾಪಾಸು ತೆರಳುತ್ತಿದ್ದೇನೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


