ಶಾಲಾ ವಾಹನ: ಮಕ್ಕಳ ಸುರಕ್ಷತೆಗೆ ಪೋಷಕರ ಆದ್ಯತೆ
ನಿಗದಿಗಿಂತ ಹೆಚ್ಚು ಶಾಲಾ ಮಕ್ಕಳನ್ನು ಖಾಸಗಿ ವಾಹನಗಳು ಹೊತ್ತುಯ್ಯುವ ದೂರುಗಳು ನಿಧಾನವಾಗಿ ಕಡಿಮೆಯಾಗುತ್ತಿವೆ...

Published On :
ಬೆಂಗಳೂರು: ನಿಗದಿಗಿಂತ ಹೆಚ್ಚು ಶಾಲಾ ಮಕ್ಕಳನ್ನು ಖಾಸಗಿ ವಾಹನಗಳು ಹೊತ್ತುಯ್ಯುವ ದೂರುಗಳು ನಿಧಾನವಾಗಿ ಕಡಿಮೆಯಾಗುತ್ತಿವೆ ಎಂದು ನಗರ ಟ್ರಾಫಿಕ್ ಪೊಲೀಸರು ಇತ್ತೀಚೆಗೆ ಬಿಡುಗಡೆ ಮಾಡಿರುವ ಹೇಳಿಕೆ ತಿಳಿಸುತ್ತದೆ.
2014ರಲ್ಲಿ ಪೊಲೀಸರು 2 ಸಾವಿರದ 527 ಪ್ರಕರಣಗಳನ್ನು ದಾಖಲಿಸಿದ್ದರು. 2015ರಲ್ಲಿ ಅದು 3 ಸಾವಿರದ 798ಕ್ಕೆ ಏರಿಕೆಯಾಗಿತ್ತು. 2016ರಲ್ಲಿ ಜನವರಿಯಿಂದ ಜೂನ್ ವರೆಗೆ 401 ಕೇಸುಗಳು ದಾಖಲಾಗಿವೆ.
ಶಿಕ್ಷಣ ಇಲಾಖೆಯ ಕಟ್ಟುನಿಟ್ಟಿನ ಕಾನೂನು ಜಾರಿ ಮತ್ತು ಜಾಗೃತಿ ಸಂಖ್ಯೆಯಲ್ಲಿ ಇಳಿಮುಖವಾಗಲು ಕಾರಣ ಎನ್ನುತ್ತಾರೆ ಪೊಲೀಸ್ ಅಧಿಕಾರಿಗಳು. ಇತ್ತೀಚೆಗೆ ಪೋಷಕರು ಕೂಡ ತಮ್ಮ ಮಕ್ಕಳ ಸುರಕ್ಷತೆ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸುತ್ತಿದ್ದಾರೆ.
'' ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವಾಗ ಸುರಕ್ಷತೆ ಮೊದಲ ಆದ್ಯತೆಯಾಗಿರುತ್ತದೆ. ವಾಹನಗಳಲ್ಲಿ ಮಕ್ಕಳು ಪ್ರಯಾಣಿಸುವಾಗ ಅವರ ಬಗ್ಗೆ ಸರಿಯಾದ ಜಾಗ್ರತೆ ಇರಬೇಕಾದ ಅವಶ್ಯಕತೆಯಿದೆ ಎನ್ನುತ್ತಾರೆ ಜೆಪಿ ನಗರದ ಸಾಫ್ಟ್ ವೇರ್ ಎಂಜಿನಿಯರ್ ಅಶ್ವಿನಿ ಭಾಗವತ್.
ಮಕ್ಕಳ ಸುರಕ್ಷತೆ ವಿಷಯ ಬಂದಾಗ ನಗರದ ಪೋಷಕರು ಸ್ವಲ್ಪ ಹೆಚ್ಚು ಖರ್ಚು ಮಾಡಲು ಯೋಚಿಸುವುದಿಲ್ಲ. ನನ್ನ ಮಗುವಿನ ಸುರಕ್ಷತೆ ಮುಖ್ಯ. ಅದರಲ್ಲಿ ಎಷ್ಟು ಹಣ ಖರ್ಚಾಗುತ್ತದೆ ಎಂದು ನಾನು ನೋಡುವುದಿಲ್ಲ ಎನ್ನುತ್ತಾರೆ ಎಸ್ ಜಿ ಪಾಳ್ಯದ ಲಕ್ಷ್ಮಿ ಪ್ರಿಯ.
ಶಾಲಾ ಮಕ್ಕಳ ವಾಹನದ ನಿಯಮಗಳನ್ನು ಪಾಲಿಸದ ಚಾಲಕರ ವಿರುದ್ಧ ಕ್ರಮ ಕೈಗೊಳ್ಳಲು ಸಂಚಾರಿ ಪೊಲೀಸರು ಮುಂದಾಗಿದ್ದಾರೆ.
ಕೇವಲ ದಂಡ ವಿಧಿಸುವುದು ಮಾತ್ರವಲ್ಲದೆ, ವಾಹನದ ಮತ್ತು ಚಾಲಕನ ಪರವಾನಗಿಯನ್ನು ರದ್ದುಪಡಿಸುತ್ತೇವೆ ಎನ್ನುತ್ತಾರೆ ಸಂಚಾರಿ ಹೆಚ್ಚುವರಿ ಪೊಲೀಸ್ ಆಯುಕ್ತ ಆರ್.ಹಿತೇಂದ್ರ.
''ನನ್ನ ಮಗು ಹೋಗುವ ಶಾಲಾ ವ್ಯಾನನ್ನು ನಾನು ಪ್ರತಿದಿನ ಪರೀಕ್ಷಿಸುತ್ತೇನೆ. ಅದರಲ್ಲಿ ಲೆಕ್ಕಕ್ಕಿಂತ ಹೆಚ್ಚು ಮಕ್ಕಳನ್ನು ಸೇರಿಸುತ್ತಾರೆಯೇ ಎಂದು ನೋಡುತ್ತೇನೆ ಎನ್ನುತ್ತಾರೆ ಕೋರಮಂಗಲ ಮೂಲದ ಜೊಜು ಜಾಕೊಬ್ ಹೇಳುತ್ತಾರೆ.
ಮಕ್ಕಳಿಗೆ ಶಾಲೆಗೆ ಹೋಗಿ ಬರಲು ಸುಖಕರವಾಗಿರುವ, ಆರಾಮದಾಯಕವಾಗಿ ಸುರಕ್ಷಿತವಾಗಿರುವ ವಾಹನಗಳನ್ನು ಬಯಸುತ್ತಾರೆ. ಶ್ರೀಮಂತ ಮತ್ತು ಮಧ್ಯಮ ವರ್ಗದ ಪೋಷಕರು ಇದನ್ನು ಈಡೇರಿಸಲು ಸಾಧ್ಯವಾದರೆ ಕೆಳ ಮಧ್ಯಮ ಮತ್ತು ಬಡವರ್ಗದ ಪೋಷಕರ ಮಕ್ಕಳು ತೊಂದರೆಯಿಂದ ಮುಕ್ತವಾಗಿಲ್ಲ ಎನ್ನುತ್ತಾರೆ ಬೆಂಗಳೂರು ಶಾಲೆ ಮತ್ತು ಕಾಲೇಜು ಸಾಮಾಜಿಕ ತಾಣ ಗುಂಪಿನ ಸ್ಥಾಪಕಿ ಶ್ವೇತಾ ಶರಣ್.
ನಗರದಲ್ಲಿರುವ ಬಹುತೇಕ ಸರ್ಕಾರಿ ಶಾಲೆಗಳ ಮಕ್ಕಳು ನಡೆದುಕೊಂಡು ಬರುತ್ತಾರೆ. ಕೆಲವು ಮಕ್ಕಳ ಪೋಷಕರು ತಾವೇ ಶಾಲೆಗೆ ಮಕ್ಕಳನ್ನು ತಮ್ಮ ದ್ವಿಚಕ್ರ ವಾಹನದಲ್ಲಿ ಬಿಡುತ್ತಾರೆ.ಹಲವು ಬಡ ಮಕ್ಕಳಿಗೆ ಶಾಲೆಯ ಸಮಯಕ್ಕೆ ಸರಿಯಾಗಿ ಹೋಗಲು ಸಾಧ್ಯವಾಗದೆ ಪಾಠಗಳಿಂದ ವಂಚಿತರಾಗುತ್ತಾರೆ ಎನ್ನುತ್ತಾರೆ ಆಚಾರ್ಯಾಸ್ ಫಾರ್ ಬೆಟರ್ ಕಮ್ಯೂನಿಟಿಯ ಸ್ಥಾಪಕ ನವೀನ್ ಕುಮಾರ್.
ಈ ಸಮುದಾಯ ಬೆಂಗಳೂರಿನ ಸರ್ಕಾರಿ ಶಾಲೆಗಳ ಸೌಲಭ್ಯಗಳನ್ನು ಉತ್ತಮಪಡಿಸುಲ್ಲಿ ಶ್ರಮಿಸುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


