ಡಿವೈಎಸ್ ಪಿ ಹಂಡಿಭಾಗ್ ಸಾವಿಗೆ ಚಿಕ್ಕಮಗಳೂರು ಎಸ್ ಪಿ ಹೊಣೆ
ತಮ್ಮ ಪುತ್ರ ಡಿವೈಎಸ್ ಪಿ ಕಲ್ಲಪ್ಪ ಹಂಡಿಭಾಗ್ ಸಾವಿಗೆ ಚಿಕ್ಕಮಗಳೂರು ಎಸ್ ಪಿ ಸುರೇಶ್ ಬಾಬು ಕಾರಣ ಎಂದು ಕಲ್ಲಪ್ಪ ಹಂಡಿಭಾಗ್ ಪೋಷಕರು ಆರೋಪಿಸಿದ್ದಾರೆ. ..

ಬೆಳಗಾವಿ: ತಮ್ಮ ಪುತ್ರ ಡಿವೈಎಸ್ ಪಿ ಕಲ್ಲಪ್ಪ ಹಂಡಿಭಾಗ್ ಸಾವಿಗೆ ಚಿಕ್ಕಮಗಳೂರು ಎಸ್ ಪಿ ಸುರೇಶ್ ಬಾಬು ಕಾರಣ ಎಂದು ಕಲ್ಲಪ್ಪ ಹಂಡಿಭಾಗ್ ಪೋಷಕರು ಆರೋಪಿಸಿದ್ದಾರೆ.
ಚಿಕ್ಕಮಗಳೂರು ಎಸ್ ಪಿ ಸುರೇಶ್ ಬಾಬು ವಿರುದ್ಧ ಬೆಳಗಾವಿಯ ಹರುಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಮಾತನಾಡಿದ ಕಲ್ಲಪ್ಪ ಹಂಡಿಭಾಗ್ ಅವರ ಪೋಷಕರಾದ ಬಸಪ್ಪ ಮತ್ತು ಬಸವ್ವ ಎಸ್ಪಿ ಸುರೇಶ್ ಬಾಬು ನಿರಂತರವಾಗಿ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿದ್ದಾರೆ.
ತಮ್ಮ ಪುತ್ರ ಕಲ್ಲಪ್ಪ ಹಂಡಿಭಾಗ್ ಜೊತೆ ಎಸ್ ಪಿ ಸುರೇಶ ಬಾಬು ಕೆಟ್ಟದಾಗಿ ನಡೆದುಕೊಳ್ಳಿತ್ತಿದ್ದರು, ಅವರ ಕಿರುಕುಳದಿಂದ ಬೇಸತ್ತ ಹಂಡಿಭಾಗ್ ಆತ್ಮಹತ್ಯೆಯ ನಿರ್ಧಾರ ಕೈಗೊಂಡಿದ್ದಾರೆ ಎಂದು ಲಿಖಿತ ದೂರು ನೀಡಿದ್ದಾರೆ. ಸುರೇಶ್ ಬಾಬು, ಹಂಡಿಭಾಗ್ ಗೆ ರಜೆ ನೀಡುತ್ತಿರಲಿಲ್ಲ, ಎಲ್ಲರ ಎದುರು ಅವಮಾನ ಮಾಡುತ್ತಿದ್ದರು ಎಂದು ಆರೋಪಿಸಿದ್ದಾರೆ.
ದೂರು ದಾಖಲಿಸಿಕೊಂಡಿರುವ ಪೋಲೀಸರು ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ತಂಡಕ್ಕೆ ದೂರನ್ನು ಕಳುಹಿಸಿದ್ದಾರೆ ಎಂದು ಬೆಳಗಾವಿ ಎಸ್ ಪಿ ರವಿಕಾಂತೇಗೌಡ ಹೇಳಿದ್ದಾರೆ.
ಕಲ್ಲಪ್ಪ ಹಂಡಿಭಾಗ್ ಅವರ ಆತ್ಮಹತ್ಯೆ ಸಂಬಂಧ ವಿಶ್ವ ಹಿಂದೂ ಪರಿಷತ್ ಚಿಕ್ಕಮಗಳೂರು ಜಿಲ್ಲೆ ಮುಖ್ಯಸ್ಥ ಪ್ರವೀಣ್ ಖಾಂಡ್ಯ ಅವರನ್ನು ಬಂಧಿಸಬೇಕೆಂದು ಒತ್ತಾಯಿಸಿ ಕರ್ನಾಟಕ ಕುರುಬ ಸಂಘ ಮನವಿ ಸಲ್ಲಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


