ನಗರದಲ್ಲಿ ಡಬ್ಲ್ಯುಡಬ್ಲ್ಯುಇ ಸೂಪರ್ ಸ್ಟಾರ್ ಅಲ್ಬರ್ಟ್ ಡೆಲ್ ರಿಯೊ
ನಾಲ್ಕು ಸಲದ ಡಬ್ಲ್ಯುಡಬ್ಲುಇ ವಲ್ರ್ಡ್ ಹೆವಿವೇಟ್ ಚಾಂಪಿಯನ್ ಆಗಿರುವ ಅಲ್ಬರ್ಟ್ ಡೆಲ್ ರಿಯೊ 3 ದಿನಗಳ ವಿಶೇಷ ಭಾರತ ಭೇಟಿಯ ಅಂಗವಾಗಿ...

ಬೆಂಗಳೂರು: ನಾಲ್ಕು ಸಲದ ಡಬ್ಲ್ಯುಡಬ್ಲುಇ ವಲ್ರ್ಡ್ ಹೆವಿವೇಟ್ ಚಾಂಪಿಯನ್ ಆಗಿರುವ ಅಲ್ಬರ್ಟ್ ಡೆಲ್ ರಿಯೊ 3 ದಿನಗಳ ವಿಶೇಷ ಭಾರತ ಭೇಟಿಯ ಅಂಗವಾಗಿ ಇಂದು ಬೆಂಗಳೂರಿಗೆ ಆಗಮಿಸಿದ್ದರು. ನಗರದಲ್ಲಿ ಸ್ಥಳೀಯ ಅಭಿಮಾನಿಗಳ ಜೊತೆ ಸಮಯ ಕಳೆದು ಮಾತುಕತೆ ನಡೆಸಿದರು.
ನಗರದ ಗರುಡ ಮಾಲ್‍ನಲ್ಲಿ ಅಲ್ಬರ್ಟ್ ಅಭಿಮಾನಿಗಳನ್ನು ಭೇಟಿ ಮಾಡಿದರು. ಜೊತೆಗೆ ಡಬ್ಲ್ಯುಡಬ್ಲ್ಯುಇ 2ಕೆ17 ಆಟವನ್ನು ಬಿಡುಗಡೆಗೊಳಿಸಿದರು. ಡಬ್ಲ್ಯುಡಬ್ಲ್ಯುಇ ಅಭಿಮಾನಿಗಳೊಂದಿಗೆ ಗರುಡ ಮಾಲ್ ತುಂಬಿ ತುಳುಕುತ್ತಿತ್ತು.
ಇದಕ್ಕು ಮೊದಲು ಡಬ್ಲ್ಯುಡಬ್ಲ್ಯುಇ ಸೂಪರ್ ಸ್ಟಾರ್ ಭಾರತದ ವಿಶೇಷ ಒಲಿಂಪಿಕ್ ತಂಡವನ್ನು ಭೇಟಿ ಮಾಡಿದರು. ವಿಶೇಷ ಮಕ್ಕಳ ಜೊತೆ ಕ್ರಿಕೆಟ್ ಆಡಿದರು. ಈ ಸಂದರ್ಭದಲ್ಲಿ ವಿಶೇಷ ಒಲಿಂಪಿಕ್ ತಂಡದ ಸ್ಥಳೀಯ ನಿರ್ದೇಶಕ ವಸಂತ್ ಕುಮಾರ್ ಶೆಟ್ಟಿ ಹಾಜರಿದ್ದರು.
ಈ ವೇಳೆ ಮಾತನಾಡಿದ ಅಲ್ಬರ್ಟ್ ರಿಯೊ, ಭಾರತ ಒಂದು ಶ್ರೇಷ್ಠ ರಾಷ್ಟ್ರ. ಇಲ್ಲಿನ ಅಭಿಮಾನಿಗಳ ಪ್ರೀತಿಯಿಂದ ಮನಸು ತುಂಬಿ ಬಂದಿದೆ. ಬೆಂಗಳೂರಿನಲ್ಲಿ ನಿಜಕ್ಕು ಉತ್ತಮ ಸಮಯ ಕಳೆದಿರುವೆ. ಸ್ಪೆಷಲ್ ಒಲಿಂಪಿಕ್ಸ್ ಭಾರತ ಮಕ್ಕಳನ್ನು ಭೇಟಿ ಮಾಡಿರುವುದು ಒಂದು ವಿಶೇಷ ಹಾಗೂ ಸ್ಫೂರ್ತಿದಾಯಕ ಅನುಭವ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


