ರಾಜ್ಯ

ಸಿಎಂ ಮುಂದೆಯೇ ಸಿದ್ದು ಬೆಂಬಲಿಗರಿಂದ ಮಹಿಳಾ ಜಿಲ್ಲಾಧಿಕಾರಿಗೆ ಧಮ್ಕಿ

ಮೈಸೂರು ಜಿಲ್ಲಾಧಿಕಾರಿ ಸಿ.ಶಿಖಾ ಅವರಿಗೆ ಸಿಎಂ ಸಿದ್ದರಾಮಯ್ಯ ಅವರ ಮುಂದೆಯೇ ಕಾಂಗ್ರೆಸ್ ನಾಯಕರು ಬೆದರಿಕೆ ಹಾಕಿದ ಘಟನೆ ನಿನ್ನೆ ಮೈಸೂರಿನಲ್ಲಿ ನಡೆದಿದೆ...

ಸಿಎಂ ಮುಂದೆಯೇ ಸಿದ್ದು ಬೆಂಬಲಿಗರಿಂದ ಮಹಿಳಾ ಜಿಲ್ಲಾಧಿಕಾರಿಗೆ ಧಮ್ಕಿ
ಜಿಲ್ಲಾಧಿಕಾರಿ ಸಿ. ಶಿಖಾ
Published On :

ಮೈಸೂರು: ಮೈಸೂರು ಜಿಲ್ಲಾಧಿಕಾರಿ ಸಿ.ಶಿಖಾ ಅವರಿಗೆ ಸಿಎಂ ಸಿದ್ದರಾಮಯ್ಯ ಅವರ ಮುಂದೆಯೇ ಕಾಂಗ್ರೆಸ್ ನಾಯಕರು ಬೆದರಿಕೆ ಹಾಕಿದ ಘಟನೆ ನಿನ್ನೆ ಮೈಸೂರಿನಲ್ಲಿ ನಡೆದಿದೆ.

ಬೆಂಗಳೂರಿನಿಂದ ಇಪ್ತಾರ್ ಕೂಟಕ್ಕೆ ತೆರಳಿದ್ದ ಸಿಎಂ ಮೈಸೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ತಂಗಿದ್ದರು. ಈ ವೇಳೆ ಸಿಎಂ ಆಪ್ತ ಮರಿಗೌಡ ಮೈಸೂರು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಮತ್ತವರ ಹಿಂಬಾಲಕರು ಮೈಸೂರು ಜಿಲ್ಲಾಧಿಕಾರಿ ಸಿ,ಶಿಖಾ ಅವರಿಗೆ ಸಿಎಂ ಮುಂದೆಯೇ ಬೆದರಿಕೆ ಹಾಕಿದ್ದಾರೆ.

ತಹಶೀಲ್ದಾರ್ ನವೀನ್ ಜೋಸೆಫ್  ಅವರಿಗೆ ಯಾದಗಿರಿಗೆ ವರ್ಗಾವಣೆಯಾಗಿದ್ದರೂ ಅವರಿಗೆ ಇನ್ನೂ ರಿಲೀವ್ ಮಾಡಲಿಲ್ಲ ಎಂದು ಹೇಳಿ ಡಿಸಿ ವಿರುದ್ಧ ಘೋಷಣೆ ಕೂಗಿದ್ದಾರೆ.

ಈ ವೇಳೆ ಸ್ಪಷ್ಟನೆ ನೀಡಿದ ಶಿಖಾ, ಮೈಸೂರು ಜಿಲ್ಲೆಯಲ್ಲಿರುವ 7 ತಹಶೀಲ್ದಾರ್ ಪೋಸ್ಟ್ ಗಳಲ್ಲಿ 4 ಖಾಲಿಯಿದ್ದು, ನವೀನ್ ಜೊಸೆಫ್ ಅವರಿಗೆ ರಿಲೀವ್ ಮಾಡಿದರೇ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸುವುದು ಕಷ್ಟವಾಗುತ್ತದೆ. ಅವರ ಸ್ಥಳಕ್ಕೆ ಮತ್ತೊಬ್ಬ ಅಧಿಕಾರಿ ಬರುವವರೆಗೂ ಅವರನ್ನು ಅಲ್ಲಿಂದ ರಿಲೀವ್ ಮಾಡಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಅವರಿಗೆ ಶಿಖಾ ಮನವರಿಕೆ ಮಾಡಿಕೊಟ್ಟಿದ್ದಾರೆ.

ಸಿಎಂ ಅಲ್ಲಿಂದ ಹೊರಟ ನಂತರ ಶಿಖಾ ಬೆಂಗಾವಲು ವಾಹನದ ಜೊತೆ ತೆರಳಬೇಕಿತ್ತು. ಈ ವೇಳೆ ಸಿಎಂ ಹಿಂಬಾಲಕರು ಡಿಸಿ ಶಿಖಾ ವಿರುದ್ಧ ಜೊರಾಗಿ ಕೂಗಾಡುತ್ತಿದ್ದರು. ಪರಿಸ್ಥಿತಿ ಅರಿತ ಗನ್ ಮ್ಯಾನ್ ಗಳ ಡಿಸಿ ಅವರನ್ನು ಬಿಗಿ ಭದ್ರತೆಯಲ್ಲಿ ಕರೆದೊಯ್ದರು.

ಜಿಲ್ಲಾಧಿಕಾರಿ ಶಿಖಾ ಅವರ ಆದೇಶದ ಮೇರೆಗೆ ತಹಶೀಲ್ದಾರ್ ನವೀನ್ ಜೋಸೆಫ್ ಮೈಸೂರು ನಗರದ ಪ್ರಮುಖ ಸ್ಥಳದಲ್ಲಿ ಒತ್ತುವರಿ ಮಾಡಿಕೊಂಡಿದ್ದ ಹಲವು ಕೋಟಿ ರು. ಮೌಲ್ಯದ ಭೂಮಿಯನ್ನು ವಶಕ್ಕೆ ತೆಗೆದುಕೊಂಡಿದ್ದರು.

ಮೈಸೂರು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಮರಿಗೌಡ ಬೆಂಬಲಿಗರು ಈ ಒತ್ತುವರಿಯಲ್ಲಿ ಭಾಗಿಯಾಗಿದ್ದರು. ಇದರಿಂದ ಅಸಮಾಧಾನಗೊಂಡ ಮರಿಗೌಡ ಸರ್ಕಾರದ ಮೇಲೆ ಒತ್ತಡ ಹಾಕಿ ನವೀನ್ ಜೋಸೆಫ್ ಅವರನ್ನು ವರ್ಗಾವಣೆ ಮಾಡಿಸಿದ್ದ.

ಆದರೆ ವರ್ಗಾವಣೆಗೊಂಡರೂ ನವೀನ್ ಜೋಸೆಫ್ ಅಲ್ಲಿಂದ ತೆರಳದೇ ಇರುವುದು ಮರಿಗೌಡ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಂಬಂಧ ಮರಿಗೌಡ ಅವರನ್ನು ಸಂಪರ್ಕಿಸಿದಾಗ ಭ್ರಷ್ಟ ತಹಶೀಲ್ದಾರ್ ಅವರನ್ನ ಇನ್ನು ಯಾಕೆ ರಿಲೀವ್ ಮಾಡಿಲ್ಲ ಎಂದು ಜಿಲ್ಲಾಧಿಕಾರಿ ಶಿಖಾ ಅವರನ್ನೇ ಕೇಳಿ ಎಂದು ಫೋನ್ ಕಟ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.