ರಾಜ್ಯ

ಮೆಡಿಕಲ್ ಯೋಜನೆಗಳು ಬಡಜನರಿಗೆ ತಲುಪಬೇಕು: ಮನೋಹರ್ ಪರಿಕ್ಕರ್

ದೇಶದಲ್ಲಿ ಅವಶ್ಯಕತೆ ಇರುವ ಬಡಜನರಿಗೆ ಸರ್ಕಾರದ ಮೆಡಿಕಲ್ ಯೋಜನೆಗಳು ತಲುಪಬೇಕು ಎಂದು ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್

ಮೆಡಿಕಲ್ ಯೋಜನೆಗಳು ಬಡಜನರಿಗೆ ತಲುಪಬೇಕು: ಮನೋಹರ್ ಪರಿಕ್ಕರ್
ಮನೋಹರ್ ಪರಿಕ್ಕರ್
Published On :

ಮಂಗಳೂರು: ದೇಶದಲ್ಲಿ  ಅವಶ್ಯಕತೆ ಇರುವ ಬಡಜನರಿಗೆ ಸರ್ಕಾರದ ಮೆಡಿಕಲ್ ಯೋಜನೆಗಳು ತಲುಪಬೇಕು ಎಂದು ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದಾರೆ.

ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಹೊಸ ಸೌಲಭ್ಯಗಳನ್ನು ಉಧ್ಘಾಟಿಸಿ ಮಾತನಾಡಿದ ಅವರು, ಅರ್ಪ ಬಡರೋಗಿಗಳಿಗಾಗಿ ಗೋವಾ ಸರ್ಕಾರ ಹಲವು ಆರೋಗ್ಯ ಸೌಲಭ್ಯಗಳನ್ನು ಒದಗಿಸಿದೆ, ಅಂತಹ ಯೋಜನೆಗಳು ಎಲ್ಲಾ ರಾಜ್ಯಗಳಲ್ಲೂ ಅನುಷ್ಠಾನಗೊಳ್ಳಬೇಕು ಎಂದು ಅವರು ಅಭಿಪ್ರಾಯ ಪಟ್ಟರು.

ಆರ್ಥಿಕವಾಗಿ ತೀರ ಹಿಂದುಳಿದವರಿಗೆ ಆಸ್ಪತ್ರೆಗಳು ಹೆಚ್ಚಿನ ಸಹಾಯ ನೀಡಬೇಕು. ಆರೋಗ್ಯ ಸೇವೆಗಳು ಉತ್ತಮ ಸೇವೆ ಹಾಗೂ ಗುಣಮಟ್ಟವನ್ನು ಸಹ ಕಾಪಾಡಬೇಕು ಎಂದು ಅವರು ಕರೆ ನೀಡಿದರು.

ಕಡಿಮೆ ಬೆಲೆಗೆ ಉತ್ತಮ ಆರೋಗ್ಯ ಸೇವೆ ನೀಡಬೇಕು ಎಂದು ಹೇಳಿದ ಅವರು ಕೇಂದ್ರದ ಅನಾಣ್ಯೀಕರಣ ಕ್ರಮಕ್ಕೆ ಬೆಂಬಲ ನೀಡಲು ಆಸ್ಪತ್ರೆಗಳು ನಗದು ರಹಿತ ವ್ಯವಹಾರ ನಡೆಸಬೇಕು ಎಂದು ಪರಿಕ್ಕರ್ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.