ಫೇಸ್ ಬುಕ್ ನಲ್ಲಿ ಉಗ್ರಪ್ಪ ವಿರುದ್ಧ ಆಕ್ಷೇಪಾರ್ಹ ಬರಹ: ಇಬ್ಬರ ಬಂಧನ
ಎಂ ಎಲ್ ಸಿ, ವಿ.ಎಸ್.ಉಗ್ರಪ್ಪ ಅವರನ್ನು ಆಕ್ಷೇಪಾರ್ಹ ಬರಹಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ್ದ ಆರೋಪದಡಿ ಪ್ರಾಧ್ಯಾಪಕ ಸೇರಿದಂತೆ ಇಬ್ಬರನ್ನು ..

ಬೆಂಗಳೂರು:ಎಂ ಎಲ್ ಸಿ, ವಿ.ಎಸ್.ಉಗ್ರಪ್ಪ ಅವರನ್ನು ಆಕ್ಷೇಪಾರ್ಹ ಬರಹಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ್ದ ಆರೋಪದಡಿ ಪ್ರಾಧ್ಯಾಪಕ ಸೇರಿದಂತೆ ಇಬ್ಬರನ್ನು ವಿಧಾನಸೌಧ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ದಾವಣಗೆರೆಪ್ರಥಮದರ್ಜೆ ಸರ್ಕಾರಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿದ್ದ ಪ್ರದೀಪ್‌ಕುಮಾರ್ ಹಾಗೂ ಶಿವಮೊಗ್ಗದಲ್ಲಿ ಯುಪಿಎಸ್ ವ್ಯಾಪಾರ ಮಾಡುವ ಅರುಣ್‌ಕುಮಾರ್ ಬಂಧಿತರು. ಇಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಕೆಲ ದಿನಗಳವರೆಗೆ ವಶಕ್ಕೆ ನೀಡುವಂತೆ ಮನವಿ ಮಾಡುತ್ತೇವೆ ಎಂದು ವಿಧಾನಸೌಧ ಪೊಲೀಸರು ಹೇಳಿದ್ದಾರೆ,
ರಾಮಚಂದ್ರಾಪುರ ಮಠದ ಭಕ್ತರಾಗಿರುವ ಇವರು ಸ್ವಚ್ಛ ಬ್ರಾಹ್ಮಣ ವೇದಿಕೆ’ ಗ್ರೂಪ್ ಸದಸ್ಯರಾಗಿರುವ ಇವರು ಉಗ್ರಪ್ಪ ಅವರ ವಿರುದ್ಧ ಅಸಭ್ಯ ಮತ್ತು ಆಕ್ಷೇಪಾರ್ಹ ಬರಹ ಪ್ರಕಟಿಸಿ, ಕೊಲೆ ಬೆದರಿಕೆ ಹಾಕಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


