ರಾಜ್ಯ

ಭೀಮಾ ನಾಯಕ್ ಡ್ರೈವರ್ ಆತ್ಮಹತ್ಯೆ ಪ್ರಕರಣ: ಸಂಸದ ಶ್ರೀರಾಮುಲು ಗನ್ ಮ್ಯಾನ್ ಸಿಐಡಿ ವಶಕ್ಕೆ

ಕೆಎಎಸ್ ಅಧಿಕಾರಿ ಭೀಮಾ ನಾಯಕ್ ಕಾರು ಚಾಲಕ ರಮೇಶ್ ಕುಮಾರ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧ ಸಂಸದ ಶ್ರೀರಾಮುಲು ಅವರ ಗನ್ ಮ್ಯಾನ್ ನನ್ನು ಸಿಐಡಿ...

ಭೀಮಾ ನಾಯಕ್ ಡ್ರೈವರ್ ಆತ್ಮಹತ್ಯೆ ಪ್ರಕರಣ: ಸಂಸದ ಶ್ರೀರಾಮುಲು ಗನ್ ಮ್ಯಾನ್ ಸಿಐಡಿ ವಶಕ್ಕೆ
ಶ್ರೀ ರಾಮುಲು
Published On :

ಬೆಂಗಳೂರು: ಕೆಎಎಸ್ ಅಧಿಕಾರಿ ಭೀಮಾ ನಾಯಕ್ ಕಾರು ಚಾಲಕ ರಮೇಶ್ ಕುಮಾರ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧ ಸಂಸದ ಶ್ರೀರಾಮುಲು ಅವರ ಗನ್ ಮ್ಯಾನ್ ನನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ರಮೇಶ್ ಕುಮಾರ್ ಆತ್ಮಹತ್ಯೆ ಗೂ ಮುನ್ನ ಬರೆದಿದ್ದ ಡೆತ್ ನೋಟ್ ನಲ್ಲಿ ಜನಾರ್ದನ ರೆಡ್ಡಿ ಪುತ್ರಿ ಮದುವೆಗೆ ಕಪ್ಪು ಹಣವನ್ನು ಬಿಳಿ ಮಾಡಿಕೊಡಲು ಕಮಿಷನ್ ಆಧಾರದ ಮೇಲೆ ಭೀಮಾ ನಾಯಕ್ ಸಹಾಯ ಮಾಡಿದ್ದರು ಎಂದು ಬರೆದಿದ್ದರು. ಈ ಸಂಬಂಧ  ಶ್ರೀರಾಮುಲು ಗನ್‌ ಮ್ಯಾನ್‌ ಚನ್ನಪ್ಪ ಹೊಸಮನಿ ಅವರನ್ನು  ವಶಕ್ಕೆ ಪಡೆದಿರುವ ಸಿಐಡಿ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ

ಭೀಮಾನಾಯಕ್, ತಮ್ಮ ಅಕ್ರಮದಿಂದ 100 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿ ಸಂಪಾದಿಸಿದ್ದಾರೆ. ತಮ್ಮ ಮೇಲಿನ ಇಲಾಖಾ ತನಿಖೆಯಿಂದ ತಪ್ಪಿಸಿಕೊಳ್ಳಲು ಈ ಹಿಂದಿನ ಕಂದಾಯ ಸಚಿವರ ಆಪ್ತ ಕಾರ್ಯದರ್ಶಿ ನಾಗರಾಜು ಅವರಿಗೆ 25 ಲಕ್ಷ ರೂ. ಲಂಚ ನೀಡಿದ್ದಾರೆ. ನ್ಯಾಯಾಧೀಶರನ್ನ ಭೇಟಿಯಾಗಿ ತಮ್ಮ ಮೇಲಿನ ಪ್ರಕರಣವನ್ನ ಮುಚ್ಚಿಹಾಕಲು ಅವರಿಗೂ ಲಂಚ ಕೊಟ್ಟಿದ್ದರು ಎಂದು ಡೆತ್‍ನೋಟ್‍ನಲ್ಲಿ ರಮೇಶ್ ಆರೋಪಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.