ಮೇಟಿ ಲೈಂಗಿಕ ಹಗರಣ: ಪೇದೆ ಸುಭಾಷ್ ಸೇರಿ ನಾಲ್ವರ ವಿರುದ್ಧ ವಿಜಯಲಕ್ಷ್ಮಿ ದೂರು!
ಮೇಟಿ ಲೈಂಗಿಕ ಹಗರಣ ಸಂಬಂಧ ಸುದ್ದಿಯಾಗಿದ್ದ ಮಹಿಳೆ ವಿಜಯಲಕ್ಷ್ಮಿ ಸರೂರು ಅವರು ಕಾನ್ ಸ್ಟೆಬಲ್ ಸುಭಾಷ್ ಮುಗಳಖೋಡ ಸೇರಿ ನಾಲ್ಕು ಮಂದಿ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ.

ಬಾಗಲಕೋಟೆ: ಮೇಟಿ ಲೈಂಗಿಕ ಹಗರಣ ಸಂಬಂಧ ಸುದ್ದಿಯಾಗಿದ್ದ ಮಹಿಳೆ ವಿಜಯಲಕ್ಷ್ಮಿ ಸರೂರು ಅವರು ಕಾನ್ ಸ್ಟೆಬಲ್ ಸುಭಾಷ್ ಮುಗಳಖೋಡ ಸೇರಿ ನಾಲ್ಕು ಮಂದಿ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ.
ಮೂಲಗಳ ಪ್ರಕಾರ ವಿಜಯಲಕ್ಷ್ಮಿ ಅವರು, ಡಿಎಆರ್ ಕಾನ್ಸ್ ಟೇಬಲ್ ಸುಭಾಷ್ ಮುಗಳಖೋಡ, ಸಿದ್ದಲಿಂಗ ಅಬಲಗಟ್ಟಿ, ಮಾರುತಿ ಮೀರಜ್ ಕರ್ ಮತ್ತು ಅಶೋಕ್ ಲಾಗಲೋಟಿ ಎಂಬುವವರ ವಿರುದ್ಧ ಶನಿವಾರ ಮಧ್ಯರಾತ್ರಿ ವಿಜಯಲಕ್ಷ್ನಿ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ. ಲೈಂಗಿಕ ಹಗರಣ ಸಂಬಂಧ ತಮ್ಮ ಹಿಂದೆ ಬಿದ್ದಿರುವ ಮಾಧ್ಯಮಗಳ ಕಣ್ಣುತಪ್ಪಿಸಲು ವಿಜಯಲಕ್ಷ್ನಿ ಅವರು ತಡರಾತ್ರಿ ದೂರು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಶನಿವಾರ ರಾತ್ರಿ ಬಾಗಲಕೋಟೆಯ ನವನಗರ ಠಾಣೆಗೆ ಆಗಮಿಸಿದ ವಿಜಯಲಕ್ಷ್ಮಿ ಅವರು ಜೀವ ಬೆದರಿಕೆ ಆರೋಪದಲ್ಲಿ ಡಿಎಆರ್ ಪೇದೆ ಸುಭಾಷ್ ಮುಗಳಖೋಡ ಸೇರಿದಂತೆ ನಾಲ್ಕು ಮಂದಿ ವಿರುದ್ಧ ದೂರುದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಐಪಿಸಿ ಸೆಕ್ಷನ್ 307 (ಹತ್ಯಾ ಪ್ರಯತ್ನ), 356 (ಹಲ್ಲೆ), 354 ಬಿ (ಮಹಿಳೆ ಮೇಲೆ ದೌರ್ಜನ್ಯ),109,143, 504, ಹಾಗೂ120ಬಿ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


