ರಾಜ್ಯ

ಪೊಲೀಸ್ ಪೇದೆಯಿಂದ ನಿವೃತ್ತ ಯೋಧನಿಗೆ ಕಪಾಳ ಮೋಕ್ಷ!

ಬ್ಯಾಂಕ್ ಹೊರಗೆ ಸರತಿ ಸಾಲಿನಲ್ಲಿ ನಿಂತಿದ್ದ ನಿವೃತ್ತ ಯೋಧರೊಬ್ಬರಿಗೆ ಪೊಲೀಸ್ ಪೇದೆ ಕಪಾಳ ಮೋಕ್ಷ ಮಾಡಿದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

ಪೊಲೀಸ್ ಪೇದೆಯಿಂದ ನಿವೃತ್ತ ಯೋಧನಿಗೆ ಕಪಾಳ ಮೋಕ್ಷ!
ಪೊಲೀಸ್ ಪೇದೆಯಿಂದ ನಿವೃತ್ತ ಯೋಧನಿಗೆ ಕಪಾಳ ಮೋಕ್ಷ!
Published On :
ಬಾಗಲಕೋಟೆ: ಬ್ಯಾಂಕ್ ಹೊರಗೆ ಸರತಿ ಸಾಲಿನಲ್ಲಿ ನಿಂತಿದ್ದ ನಿವೃತ್ತ ಯೋಧರೊಬ್ಬರಿಗೆ ಪೊಲೀಸ್ ಪೇದೆ ಕಪಾಳ ಮೋಕ್ಷ ಮಾಡಿದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. 
ಸರತಿ ಸಾಲಿನಲ್ಲಿ ನಿಂತಿದ್ದ ಜನರು ಬ್ಯಾಂಕ್ ಗೇಟು ತೆರೆಯುತ್ತಿದ್ದಂತೆ ಏಕಾಏಕಿ ಒಳನುಗ್ಗಲು ಯತ್ನಿಸಿದ್ದಾರೆ, ಇದರಿಂದ ಕೋಪಗೊಂಡ ಪೊಲೀಸ್ ಪೇದೆ ಜನರ ಗುಂಪಿನಲ್ಲಿದ್ದ ಮಾಜಿ ಯೋಧರೊಬ್ಬರಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ಈ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಪೊಲೀಸ್ ಪೇದೆಯನ್ನು ಅಮಾನತು ಮಾಡಲಾಗಿದೆ. 
ಮಾಜಿ ಸೈನಿಕ ನಂದಪ್ಪ(55) ಹಾಗೂ ಪೊಲೀಸ್ ಪೇದೆ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಕುಪಿತಗೊಂಡ ಪೊಲೀಸ್ ಪೇದೆ  ಹಲವು ಬಾರಿ ಕಪಾಳ ಮೋಕ್ಷ ಮಾಡಿದ್ದಾರೆ. ಆದರೆ ಸ್ಥಳದಲ್ಲಿದ್ದ ಯಾರೂ ಸಹ ಪೊಲೀಸ್ ಪೇದೆಯ ದುರ್ವರ್ತನೆಯನ್ನು ತಡೆಯಲು ಮುಂದಾಗದೇ ನಿಂತಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.