ಭಿಕ್ಷುಕಿಯಾಗಿದ್ದ ಮೈಸೂರು ಬಾಲಕಿಯನ್ನು ವಕೀಲೆಯನ್ನಾಗಿಸಿದ ಜಯಲಲಿತಾ
ನಾನು ಭಿಕ್ಷುಕಿಯಾಗಿ ಎಲ್ಲಿಯೋ ಜೀವನ ನಡೆಸಬೇಕಿತ್ತು, ಆದರೆ ನಾನು ಈವತ್ತು ಎಲ್ ಎಲ್ ಬಿ ವ್ಯಾಸಂಗ ಮಾಡಿ ವಕೀಲೆಯಾಗಿ...

ಬೆಂಗಳೂರು: ನಾನು ಭಿಕ್ಷುಕಿಯಾಗಿ ಎಲ್ಲಿಯೋ ಜೀವನ ನಡೆಸಬೇಕಿತ್ತು, ಆದರೆ ನಾನು ಈವತ್ತು ಎಲ್ ಎಲ್ ಬಿ ವ್ಯಾಸಂಗ ಮಾಡಿ ವಕೀಲೆಯಾಗಿ ಪ್ರಾಕ್ಟೀಸ್ ಮಾಡುತ್ತಿದ್ದೇನೆ ಎಂದರೇ ಅದಕ್ಕೆ ಕಾರಣ ತಮಿಳುನಾಡು ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರು, ನನ್ನ ಜೀವನ ಜಯಲಲಿತಾ ಅವರ ಉಡುಗೊರೆ ಎಂದು ಲಾಯರ್ ನಾಗರತ್ನ ಸ್ಮರಿಸಿದ್ದಾರೆ.
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ತಮ್ಮ ಜೀವನದ ಕಹಿ ಘಟನೆ ಬಗ್ಗೆ ಹಂಚಿಕೊಂಡಿರುವ ನಾಗರತ್ನ ಜಯಲಲಿತಾ ಅವರು ಮಾಡಿರುವ ಸಹಾಯವನ್ನು ನೆನಪಿಸಿಕೊಂಡಿದ್ದಾರೆ.
ನಾನು ಮೈಸೂರಿನಲ್ಲಿ 10 ನೇ ತರಗತಿ ವರೆಗೆ ವ್ಯಾಸಂಗ ನಡೆಸುತ್ತಿದ್ದ. ನಮಗೆ ಇರಲು ಮನೆ ಇರಲಿಲ್ಲ. ಶಾಲೆಯಿಂದ ಬಂದ ಮೇಲೆ ಭಿಕ್ಷೆ ಬೇಡಲು ತೆರಳುತ್ತಿದ್ದೆ. ಬೀದಿ ದೀಪದ ಕೆಳಗೆ ಕುಳಿತು ಓದಿ 10 ನೇ ತರಗತಿಯನ್ನು ಶೇ.65 ರಷ್ಟು ಅಂಕಗಳೊಂದಿಗೆ ಪಾಸು ಮಾಡಿದೆ. ಮುಂದೆ ಓದಲು ನನಗೆ ಸಾಧ್ಯವಿಲ್ಲವಾದ್ದರಿಂದ ಭಿಕ್ಷೆ ಬೇಡಿ ಪೋಷಕರಿಗೆ ಸಹಾಯ ಮಾಡಲು ನಿರ್ಧರಿಸಿದ್ದೆ.
2001 ರಲ್ಲಿ ನಾನು ಎಸ್ ಎಸ್ ಎಲ್ ಸಿ ಉತ್ತೀರ್ಣಗೊಂಡಾಗದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಹಾಗೂ ಅದರ ಸೋದರ ಪತ್ರಿಕೆ ದಿನಮಣಿ ಪತ್ರಿಕೆಯ ಚೆನ್ನೈ ಆವೃತ್ತಿಯಲ್ಲಿ ನನ್ನ ಬಗ್ಗೆ ವರದಿ ಮಾಡಲಾಗಿತ್ತು. ಪತ್ರಿಕೆ ಓದಿದ ಜಯಲಲಿತಾ ಅವರು ನನಗೆ ಸಹಾಯ ಮಾಡಲು ನಿರ್ಧರಿಸಿದ್ದರು. ಕರ್ನಾಟಕ ಎಐಎಡಿಎಂಕೆ ಮುಖಂಡ ಪುಗಳೇಂದಿ ಅವರಿಗೆ ಕರೆ ಮಾಡಿ ನನ್ನನ್ನು ಕರೆ ತರುವಂತೆ ತಿಳಿಸಿದ್ದರು. ಮೈಸೂರಿಗೆ ಆಗಮಿಸಿದ ಪುಗಳೇಂದಿ ನನ್ನನ್ನು ಹುಡುಕಿ ಚೆನ್ನೈ ಗೆ ಕರೆದೊಯ್ದರು.
ಅಲ್ಲಿ ಚೆನ್ನೈ ನ ಪಾಂಡ್ಯನ್ ಹೊಟೇಲ್ ನಲ್ಲಿ ಇರಿಸಲಾಯಿತು. ಸಂಜೆ ಜಯಲಲಿತಾ ಅವರನ್ನು ಭೇಟಿ ಮಾಡಲು ಅಪಾಯಿಂಟ್ ಮೆಂಟ್ ಸಿಕ್ಕಿತು. ನನ್ನ ಕಥೆ ಕೇಳಿದ ಜಯಲಲಿತಾ ಅವರು ನನಗೆ 1 ಲಕ್ಷ ರು ಚೆನ್ ನೀಡಿ ವಿಧ್ಯಾಭ್ಯಾಸ ಮುಂದುವರಿಸುವಂತೆ ಹೇಳಿದರು. ಮತ್ತೆ ಹಣದ ಅವಶ್ಯಕತೆ ಬಂದರೆ ಸಹಾಯ ಮಾಡುವ ಭರವಸೆ ನೀಡಿದರು.
ಹಣವನ್ನು ಬ್ಯಾಂಕ್ ನಲ್ಲಿ ಜಮೆ ಮಾಡಿದ ನಾಗರತ್ನ ಬರುವ ಬಡ್ಡಿ ಹಣದಲ್ಲಿ ದ್ವಿತೀಯ ಪಿಯುಸಿ ಪೂರ್ಣಗೊಳಿಸಿದೆ. ನಂತರ ಎಲ್ ಎಲ್ ಬಿ ಪಾಸು ಮಾಡಿ ಸದ್ಯ ಸಿಟಿ ಸಿವಿಲ್ ಕೋರ್ಟ್ ನಲ್ಲಿ ವಕೀಲೆಯಾಗಿ ಪ್ರಾಕ್ಟೀಸ್ ಮಾಡುತ್ತಿದ್ದೇನೆ. ಇದೆಲ್ಲಾ ಸಾಧ್ಯಾವಾದದ್ದು ಜಯಲಲಿತಾ ಅವರಿಂದ. ಮತ್ತೊಮ್ಮೆ ಅವರನ್ನು ಭೇಟಿಯಾಗಿ ಧನ್ಯವಾದ ಹೇಳಬೇಕೆಂದು ಬಯಸಿದ್ದೆ, ಆದರೆ ಆ ಆಸೆ ಈಡೇರದೇ ಹಾಗೆಯೇ ಉಳಿದು ಹೋಯಿತು ಎಂದು ನಾಗರತ್ನ ಜಯಲಲಿತಾ ಅವರ ಸಹಾಯವನ್ನು ಸ್ಮರಿಸಿಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


