ರಾಜ್ಯ

ಭೂ ಕಬಳಿಕೆ ಆರೋಪ: ಎಸಿಬಿಯಿಂದ ಅರವಿಂದ್ ಜಾದವ್ ವಿರುದ್ಧ ತನಿಖೆ

ಅಕ್ರಮ ಭೂಕಬಳಿಕೆ ಆರೋಪ ಹೊತ್ತಿರುವ ಸರ್ಕಾರದ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾದವ್ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ...

ಭೂ ಕಬಳಿಕೆ ಆರೋಪ: ಎಸಿಬಿಯಿಂದ ಅರವಿಂದ್ ಜಾದವ್ ವಿರುದ್ಧ ತನಿಖೆ
ಅರವಿಂದ್ ಜಾಧವ್
Published On :

ಬೆಂಗಳೂರು: ಅಕ್ರಮ ಭೂಕಬಳಿಕೆ ಆರೋಪ ಹೊತ್ತಿರುವ ಸರ್ಕಾರದ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾದವ್ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

ವಿಧಾನ ಸೌಧದಲ್ಲಿರುವ ರೆಕಾರ್ಡ್ ರೂಂ ಗೆ ಸೋಮವಾರ ಭೇಟಿ ನೀಡಿದ ಅಧಿಕಾರಿಗಳು ಭೂಅಕ್ರಮ ದಾಖಲೆಗಳನ್ನು ಪರಿಶೀಲನೆ ನಡೆಸಿದರು.

ಮುಖ್ಯ ಕಾರ್ಯದರ್ಶಿಗಳ ಉಸ್ತುವಾರಿಯಿರುವ ರೆಕಾರ್ಡ್ ರೂಂ ನಿಂದ ಅಧಿಕಾರಿಗಳು ಕೆಲವೊಂದು ದಾಖಲೆ ಕಡತ ತೆಗೆದುಕೊಂಡು ಹೋದರೆಂದು ಮೂಲಗಳು ತಿಳಿಸಿವೆ.

ಎಸಿಬಿ ಅಧಿಕಾರಿಗಳು ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಂದಾಯ ಭವನದಲ್ಲಿರುವ ರೆವಿನ್ಯೂ ಇಲಾಖೆಗೂ ಭೇಟಿ ನೀಡಿದ ಅವರು, 2002 ರ ಆನೇಕಲ್ ನಲ್ಲಿ ಅರವಿಂದ್ ಜಾಧವ್ ಅವರ ತಾಯಿ ತಾರಾಬಾಯಿ ಖರೀದೀಸಿದ ಭೂಮಿಯ ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸಿದರು.

ರಾಜ್ಯ ಸರ್ಕಾರ 9 ಮಂದಿಗೆ ಹಂಚಿಕೆ ಮಾಡಿದ್ದ 8 ಎಕರೆ ಭೂಮಿಯನ್ನು ಜಾದವ್ ತಾಯಿ ಖರೀದಿಸಿದ್ದಾರೆ ಎಂದು ಆರ್ ಟಿ ಐ ಕಾರ್ಯಕರ್ತ ಸಲ್ಲಿಸಿದ್ದ ದೂರಿನ ಅನ್ವಯ ಎಸಿಬಿ ಆಧಿಕಾರಿಗಳು ತನವಿಖೆ ಆರಂಭಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.