ರಾಜ್ಯ

ತುಮಕೂರು: ಅನಾರೋಗ್ಯ ಪೀಡಿತ ಮಗುವನ್ನು ಮೋರಿಗೆ ಎಸೆದು ಕೊಂದ ತಾಯಿ

ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಹೆಣ್ಣುಮಗುವನ್ನು ತಾಯಿಯೇ ಚರಂಡಿಗೆ ಎಸೆದು ಕೊಂದಿರುವ ಘಟನೆ ತುಮಕೂರಿನ ಕೊರಟಗೆರೆಯಲ್ಲಿ ನಡೆದಿದೆ...

ತುಮಕೂರು: ಅನಾರೋಗ್ಯ ಪೀಡಿತ ಮಗುವನ್ನು ಮೋರಿಗೆ ಎಸೆದು ಕೊಂದ ತಾಯಿ
ಸಾಂದರ್ಭಿಕ ಚಿತ್ರ
Published On :

ತುಮಕೂರು: ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಹೆಣ್ಣುಮಗುವನ್ನು ತಾಯಿಯೇ ಚರಂಡಿಗೆ ಎಸೆದು ಕೊಂದಿರುವ ಘಟನೆ ತುಮಕೂರಿನ ಕೊರಟಗೆರೆಯಲ್ಲಿ ನಡೆದಿದೆ.

ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆ ಹೊಟ್ಟೆಬೆಟ್ಟ ಗ್ರಾಮದ ಕವಿತಾಳನ್ನು ಪೊಲೀಸರು ಬಂಧಿಸಿದ್ದಾರೆ. ಆಕೆಯ ಪತಿ ಪೊಲೀಸರಿಗೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಕವಿತಾಳನ್ನು ಬಂಧಿಸಲಾಗಿದೆ.

ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮಗುವನ್ನು ಕವಿತಾ ಕೊರಟಗೆರೆ ಆಸ್ಪತ್ರೆಗೆ ಕರೆದೊಯ್ದಿದ್ದಳು. ಮಗುವಿಗೆ ಪೂರ್ಣ ಪ್ರಮಾಣದಲ್ಲಿ ಚಿಕಿತ್ಸೆ ನೀಡುವ ಅವಶ್ಯಕತೆ ಇದೆ ಎಂದು ಹೇಳಿದ್ದರು. ಆದರೆ ಕವಿತಾ ಬಳಿ ಹಣವಿಲ್ಲದ ಕಾರಣ ವಾಪಸ್ ಬಂದಿದ್ದಳು. ಈ ವೇಳೆ ದಾರಿಯಲ್ಲಿ ಯಾರೋ ನನ್ನನ್ನು ಅಡ್ಡಗಟ್ಟಿ ಮಗು ಮತ್ತು ಹಣ ದರೋಚಿದರು ಎಂದು ಗಂಡನ ಬಳಿ ಹೇಳಿದ್ದಳು.

ಆದರೆ ಪತ್ನಿಯ ಹೇಳಿಕೆಯನ್ನು ನಂಬದ ಕವಿತಾ ಪತಿ ಮಂಜುನಾಥ್ ಪೊಲೀಸರಗೆ ದೂರು ನೀಡಿದ್ದವು. ಆಸ್ಪತ್ರೆ ಸಿಬ್ಬಂದಿಯನ್ನು ವಿಚಾರಣೆಗೊಳಪಡಿಸಿದಾಗ, ಅವರು ಕವಿತಾ ವಿಷಯ ತಿಳಿಸಿದ್ದಾರೆ. ನಂತರ ಕವಿತಾಳನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಸತ್ಯ ಬಾಯಿಬ್ಟಿಟ್ದಾದಾಳೆ. ನಾನೇ ಮಗುವನ್ನು ಕೊಂದಿದ್ದಾಗಿ ತಪ್ಪು ಒಪ್ಪಿಕೊಂಡಿದ್ದಾಳೆ, ದಂಪತಿಗೆ 5 ವರ್ಷದ ಮತ್ತೊಂದು ಹೆಣ್ಣು ಮಗುವಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.