ರಾಜ್ಯ

ಸತತ ಮೂರು ತಾಸು ಕರಡಿ ಜೊತೆ ಹೋರಾಡಿ ಪ್ರಾಣ ಉಳಿಸಿಕೊಂಡ ರೈತ

ತಮ್ಮ ಮೇಲೆ ದಾಳಿ ಮಾಡಿದ ಕರಡಿ ಜೊತೆ ಸುಮಾರು ತಾಸು ಹೋರಾಟ ಮಾಡಿದ ರೈತನೊಬ್ಬ ಅಪಾಯದಿಂದ ಪಾರಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ...

ಸತತ ಮೂರು ತಾಸು ಕರಡಿ ಜೊತೆ ಹೋರಾಡಿ ಪ್ರಾಣ ಉಳಿಸಿಕೊಂಡ ರೈತ
ಕರಡಿ ಜೊತೆ ಹೋರಾಡಿ ಪ್ರಮಾ ಉಳಿಸಿಕೊಂಡ ರೈತ
Published On :

ಹಳಿಯಾಳ: ತಮ್ಮ ಮೇಲೆ ದಾಳಿ ಮಾಡಿದ ಕರಡಿ ಜೊತೆ ಸುಮಾರು ತಾಸು ಹೋರಾಟ ಮಾಡಿದ ರೈತನೊಬ್ಬ ಅಪಾಯದಿಂದ ಪಾರಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ನಡೆದಿದೆ.

ಉತ್ತರ ಕನ್ನಡ ಜಿಲ್ಲೆ ಹಳಿಯಾಳ ತಾಲ್ಲೂಕಿನ 58 ವರ್ಷದ ಜುಬೆ ವಾಲಂತಿ ಅಡವೆಪ್ಪಾಚೇ ಕರಡಿಯೊಂದಿಗೆ ಹೋರಾಡಿ ಜೀವ ಉಳಿಸಿಕೊಂಡವರು. ಗ್ರಾಮಕ್ಕೆ ಹೊಂದಿಕೊಂಡಿರುವ ಕಾಡಿನ ಮಧ್ಯದಲ್ಲಿ ಇದ್ದ ಜಮೀನಿಗೆ ಅಣಬೆ ತರಲು ಹೋಗಿದ್ದ ಜುಬೆ ಅವರ ಮೇಲೆ ಮರಿಗಳೊಂದಿಗೆ ಪೊದೆಯಲ್ಲಿ ಅವಿತು ಕುಳಿತಿದ್ದ ಕರಡಿ ದಾಳಿ ಮಾಡಿದೆ. ಇದರಿಂದ ಧೃತಿಗೆಡದೆ ಹೋರಾಟ ನಡೆಸಿದ ಅವರು, ಕೊನೆಗೂ ಕರಡಿಯನ್ನು ಓಡಿಸಿದ್ದಾರೆ.

ಕರಡಿಯ ದಾಳಿಗೆ ಸಿಲುಕಿದ ಅವರಿಗೆ ಕೈ, ಕಣ್ಣು ಮತ್ತು ತಲೆಗೆ ಗಾಯಗಳಾಗಿದ್ದು, ಅಂತಹ ಸ್ಥಿತಿಯಲ್ಲೇ 5 ಕಿಲೋ ಮೀಟರ್ ದೂರದಲ್ಲಿರುವ ಗ್ರಾಮಕ್ಕೆ ಬಂದ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಸುಮಾರು 50 ಹೊಲಿಗೆ ಹಾಕಲಾಗಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ. ಕಿಮ್ಸ್ ಆಸ್ಪತ್ರೆಗೆದಾಖಲಾಗಿರುವ ಜುಬೆ ಅವರನ್ನು ಸ್ಥಳೀಯ ಅರಣ್ಯಾಧಿಕಾರಿಗಳು ಭೇಟಿ ಮಾಡಿ ಕುಶಲೋಪರಿ ವಿಚಾರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.