ಬಿಸಿಲ ದಗೆಗೆ ಬೆಳಗಾವಿ ಕಂಗಾಲು: 40ಕ್ಕೇರಿದ ಉಷ್ಣಾಂಶ!
ಬೆಳಗಾವಿಯಲ್ಲಿ ಇದೀಗ ಇರುವ ವಾತಾವರಣ ಸೂರ್ಯನೇ ಭೂಮಿಗೆ ಕಳಚಿ ಬಿದ್ದಂತಿದೆ. ಬಿಸಿಲ ದಗೆಗೆ ಬೆಳಗಾವಿ ಜನತೆ ತತ್ತರಿಸಿದ್ದು, ಇಲ್ಲಿನ ತಾಪಮಾನ 40 ಡಿಗ್ರಿಗೆ ಮುಟ್ಟಿದೆ...

ಬೆಳಗಾವಿ: ಬೆಳಗಾವಿಯಲ್ಲಿ ಇದೀಗ ಇರುವ ವಾತಾವರಣ ಸೂರ್ಯನೇ ಭೂಮಿಗೆ ಕಳಚಿ ಬಿದ್ದಂತಿದೆ. ಬಿಸಿಲ ದಗೆಗೆ ಬೆಳಗಾವಿ ಜನತೆ ತತ್ತರಿಸಿದ್ದು, ಇಲ್ಲಿನ ತಾಪಮಾನ 40 ಡಿಗ್ರಿಗೆ ಮುಟ್ಟಿದೆ.
ಬೆಳಗಾವಿಯ ಇತಿಹಾಸದಲ್ಲಿ ಈ ಪರಿ ತಾಪಮಾನ ದಾಖಲಾಗುತ್ತಿರುವುದು ಇದೇ ಮೊದಲಾಗಿದ್ದು, ಈ ಬಾರಿಯ ಬಿಸಿಲು ಬೆಳಗಾವಿಯಲ್ಲಿ ದಾಖಲೆ ಸೇರಿದೆ. ಬೆಳಗಾವಿಯಲ್ಲಿ ಮಂಗಳವಾರ 40 ಡಿಗ್ರಿ ತಾಪಮಾನ ದಾಖಲಾಗಿದೆ. ಈಗಾಲೇ ಸೂರ್ಯ ಕೆಂಡ ಕಾರುತ್ತಿದ್ದು, ಮನೆ ಒಳಗೂ, ಹೊರಗೂ ಇರಲಾಗದೆ ಜನತೆ ತತ್ತರಿಸಿ ಹೋಗುತ್ತಿದ್ದಾರೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿಗಾ ಕೇಂದ್ರ ನೀಡಿರುವ ಮಾಹಿತ ಪ್ರಕಾರ ಬೆಳಗಾವಿಯಲ್ಲಿ ಕಳೆದೆರಡು ದಿನಗಳಿಂದ ಅಲ್ಲಿನ ತಾಪಮಾನ 39-40ರಷ್ಟಿದ್ದು, ಗೋಕಾಕ್ ತಾಲೂಕಿನ ಚಿಗಟೇರಿ ಗ್ರಾಮದಲ್ಲಿ 44.10ರಷ್ಟು ಉಷ್ಣಾಂಶ ದಾಖಲಾಗಿದೆ. ಅರಣ್ಯನಾಶ ಹಾಗೂ ವೇಗದ ನಗರೀಕರಣವೇ ಈ ತಾಪಮಾನಕ್ಕೆ ಕಾರಣವಾಗಿದೆ. ಅಂತರ್ಜಲ ಕೂಡ ಕಡಿಮೆಯಾಗುತ್ತಿದ್ದು, ಜನರು ಮತ್ತಷ್ಟು ಸಂಕಷ್ಟ ಎದುರಿಸಬೇಕಾದ ಪರಿಸ್ಥಿತಿ ಎದುರಾಗುತ್ತದೆ ಎಂದು ಹೇಳಿದೆ.
ಇನ್ನು ಕೆಲವು ಜಿಲ್ಲಾ ಆಡಳಿತ ಮಂಡಳಿಗಳು ಜನರ ಸಂಕಷ್ಟಕ್ಕೆ ಸಹಾಯ ಹಸ್ತ ನೀಡಿದ್ದು, ಈಗಾಗಲೇ 106 ಗ್ರಾಮಸ್ಥರಿಗೆ ಟ್ಯಾಂಕರ್ ಗಳ ಮೂಲಕ ನೀರನ್ನು ನೀಡುತ್ತಿದ್ದಾರೆ.
ವೈದ್ಯರು ಹೇಳುವ ಪ್ರಕಾರ ಒಬ್ಬ ವ್ಯಕ್ತಿಗೆ ದಿನ ನಿತ್ಯಕ್ಕೆ 40 ರಿಂದ 50 ಲೀಟರ್ ನಷ್ಟು ನೀರಿನ ಅಗತ್ಯವಿದ್ದು, ಇದರಲ್ಲಿ 5 ಲೀಟರ್ ನೀರು ಕುಡಿಯುವುದಕ್ಕೆ ಅಗತ್ಯವಿರುತ್ತದೆ. ಉಳಿದ ನೀರು ಆತನ ಕೆಲವು ಅಗತ್ಯಗಳಿಗೆ ಸಂಬಂಧಿಸಿರುತ್ತದೆ. ಇನ್ನು ಬರ ಪೀಡಿತ ರಾಜ್ಯಗಳಲ್ಲಿ ಅಧಿಕಾರಿಗಳು ಟ್ಯಾಂಕರ್ ಗಳ ಮೂಲಕ ನೀರಿನ್ನು ನೀಡುತ್ತಿದ್ದು, ಒಬ್ಬ ವ್ಯಕ್ತಿಗೆ 20 ಲೀಟರ್ ನೀರು ಸಿಗುವುದೇ ಕಷ್ಟವಾಗಿದೆ. ಇದು ಆರೋಗ್ಯಕರ ಬೆಳವಣಿಗೆಯಲ್ಲಿ. ಆರೋಗ್ಯ ಸಮಸ್ಯೆಗಳು ಎದುರಾಗಬಹುದು ಎಂದು ಹೇಳಿದ್ದಾರೆ.
ಇನ್ನು ಬೆಳಗಾವಿ ಹಿರಿಯ ನಾಗರೀಕರೊಬ್ಬರು ತಾಪಮಾನ ಕುರಿತಂತೆ ಮಾತನಾಡಿದ್ದು, ಬೆಳಗಾವಿಯನ್ನು ಬಡವರ ಮಹಾಬಲೇಶ್ವರವೆಂದೇ ಹೇಳಲಾಗುತ್ತಿತ್ತು. ಅತ್ಯಂತ ತಂಪಾದ ಕ್ಷೇತ್ರವೆಂದು ಹಲವರು ಇಲ್ಲಿ ನೆಲೆಯೂರುತ್ತಿದ್ದರು. ಬೇಸಿಗೆ ಕಾಲದಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದ ಕ್ಷೇತ್ರವಾಗಿತ್ತು. ಆದರೀಗ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. ಸ್ಥಳೀಯರು ವಲಸಿಗರಿಗೆ ಕುಡಿಯಲು ನೀರು ನೀಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


