ತುಮಕೂರು ವಿವಿಗೆ ನೂತನ ಕ್ಯಾಂಪಸ್
12 ವರ್ಷ ಹಳೆಯ ತುಮಕೂರು ವಿಶ್ವವಿದ್ಯಾಲಯಕ್ಕೆ ಕೊನೆಗೂ ನೂತನ ಕ್ಯಾಂಪಸ್ ಪ್ರಾಪ್ತಿಯಾಗಲಿದ್ದು, ಇನ್ನು ಐದು ವರ್ಷಗಳ ಅವಧಿಯಲ್ಲಿ ಬಿದರಕಟ್ಟೆಯಲ್ಲಿ ಸಂಪೂರ್ಣ ಪ್ರಮಾಣದ ನೂತನ ಕ್ಯಾಂಪಸ್ ತಲೆ ಎತ್ತಲಿದೆ..

ತುಮಕೂರು: 12 ವರ್ಷ ಹಳೆಯ ತುಮಕೂರು ವಿಶ್ವವಿದ್ಯಾಲಯಕ್ಕೆ ಕೊನೆಗೂ ನೂತನ ಕ್ಯಾಂಪಸ್ ಪ್ರಾಪ್ತಿಯಾಗಲಿದ್ದು, ಇನ್ನು ಐದು ವರ್ಷಗಳ ಅವಧಿಯಲ್ಲಿ ಬಿದರಕಟ್ಟೆಯಲ್ಲಿ ಸಂಪೂರ್ಣ ಪ್ರಮಾಣದ ನೂತನ ಕ್ಯಾಂಪಸ್ ತಲೆ ಎತ್ತಲಿದೆ.
ತುಮಕೂರಿನಿಂದ ಸುಮಾರು 21 ಕಿ.ಮೀ ದೂರದಲ್ಲಿರುವ ಬಿದರಕಟ್ಟೆಯಲ್ಲಿ ಈ 240 ಎಕರೆ ವಿಸ್ತಾರವಾದ ಪ್ರದೇಶದಲ್ಲಿ ಕ್ಯಾಂಪಸ್ ತಲೆ ಎತ್ತಿತ್ತಿದ್ದು, 99 ವರ್ಷಗಳ ಅವಧಿಗೆ ಸರ್ಕಾರ ಈ ಜಾಗವನ್ನು ವಿವಿಗೆ ಭೋಗ್ಯಕ್ಕೆ ನೀಡಿದೆ. ಈಗಾಗಲೇ ತುಮಕೂರು ವಿವಿ ವತಿಯಿಂದ ಸರಕಾರದಿಂದ ನೀಡಿರುವ 240 ಎಕರೆ ಪ್ರದೇಶದಲ್ಲಿದ್ದ ನೀಲಗಿರಿ ಮರಗಳನ್ನು ತೆಗೆಯುವ ಕೆಲಸ ಆರಂಭಗೊಂಡಿದ್ದು, ಉತ್ತಮ ಆರ್ಕಿಟೆಕ್ಟ್‌ಗಳನ್ನು ಗುರುತಿಸಿ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒಳಗೊಂಡು ಕ್ಯಾಂಪಸ್ ನೀಲನಕ್ಷೆ ತಯಾರಿಸಿ ಸರಕಾರಕ್ಕೆ ಪಸ್ತಾವನೆ ಸಲ್ಲಿಸುವಂತೆ ಕುಲಪತಿಗಳು ಮತ್ತು ಕುಲಸಚಿವರಿಗೆ ಸೂಚನೆ ನೀಡಲಾಗಿದೆ.
ಇದೇ ವೇಳೆ ವಿವಿ ದಶಮಾನೋತ್ಸವ ನೆನಪಿಗೆ ದಶಮಾನೋತ್ಸವ ಭವನ ಮತ್ತು ವಿವಿಯ ಪ್ರಧಾನ ದ್ವಾರ ನಿರ್ಮಾಣಕ್ಕಾಗಿ 10 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದ್ದು, ವಿವಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಪ್ರತ್ಯೇಕ 10 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಪರಿಶಿಷ್ಠ ಪಂಗಡ ಮತ್ತು ಪರಿಶಿಷ್ಟ ಜಾತಿಗೆ ಸೇರಿದೆ ವಿದ್ಯಾರ್ಥಿಗಳಿಗಾಗಿಯೇ 17.5 ಕೋಟಿ ವೆಚ್ಚದಲ್ಲಿ 3 ಹಾಸ್ಟೆಲ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ವಿವಿಯ ಉಪಕಲುಪತಿ ಎಹೆಚ್ ರಾಜಾಸಾಬ್ ಅವರು ಹೇಳುವಂತೆ, ವಿವಿ ಕ್ಯಾಂಪಸ್ ಅಡಿಗಲ್ಲು ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಉನ್ನತ ಶಿಕ್ಷಣ ಸಚಿವ ಟಿಬಿ ಜಯಚಂದ್ರ ಅವರು ಕ್ಯಾಂಪಸ್ ನಿರ್ಮಾಣ ಪ್ರಕ್ರಿಯೆಯಲ್ಲಿ ಹೆಚ್ಚಿನ ಆಸಕ್ತಿ ತೋರಿಸಿದ್ದಾರೆ ಎಂದು ಹೇಳಿದರು.
ಈಗಾಗಲೇ ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ಸ್ನಾತ ಕೋತ್ತರ ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಸೂಕ್ಷ್ಮ ಜೀವಿಶಾಸ್ತ್ರ ಹಾಗೂ ಜೈವಿಕ ತಂತ್ರಜ್ಞಾನ ಶಾಸ್ತ್ರ ವಿಭಾಗಗಳನ್ನು ತೆರೆಯಲು ಅನುಮೋದನೆ ನೀಡಲಾಗಿದೆ. ಇನ್ನು ಹೊಸದಾಗಿ ಅನುಮತಿ 11 ಕೋರ್ಸ್‌ಗಳ ಪೈಕಿ ಎಂಇಡಿ, ಎಂಪಿಇಡಿ, ಎಂಪಿಎ ಹಾಗೂ ಎಂ.ಎಸ್.ಕಮ್ಯೂನಿಕೇಷನ್ ಕೋರ್ಸ್‌ಗಳ ಆರಂಭಕ್ಕೂ ಈ ಹಿಂದಿನ ಸಭೆಯಲ್ಲಿ ಸಹಮತ ವ್ಯಕ್ತಪಡಿಸಲಾಗಿತ್ತು ಎಂದು ರಾಜಾಸಾಬ್ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


