ತುಮಕೂರು: ಚಿತ್ರ ವೀಕ್ಷಣೆ ವೇಳೆ ಪವನ್ ಕಲ್ಯಾಣ್ ಅಭಿಮಾನಿ ಹತ್ಯೆ
ತೆಲುಗು ಚಿತ್ರರಂಗದ ಖ್ಯಾತ ನಟ ಪವನ್ ಕಲ್ಯಾಣ್ ಅವರ ಹೊಸ ಚಿತ್ರ ಸರ್ದಾರ್ ಗಬ್ಬರ್ ಸಿಂಗ್ ಚಿತ್ರದ ಪ್ರದರ್ಶನದ ವೇಳೆ ಅಭಿಮಾನಿಯೊಬ್ಬ...

ಅನಂತಪುರ: ತೆಲುಗು ಚಿತ್ರರಂಗದ ಖ್ಯಾತ ನಟ ಪವನ್ ಕಲ್ಯಾಣ್ ಅವರ ಹೊಸ ಚಿತ್ರ ಸರ್ದಾರ್ ಗಬ್ಬರ್ ಸಿಂಗ್ ಚಿತ್ರದ ಪ್ರದರ್ಶನದ ವೇಳೆ ಅಭಿಮಾನಿಯೊಬ್ಬ ಮತ್ತೊಬ್ಬನನ್ನು ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ಕಳೆದ ರಾತ್ರಿ ನಡೆದಿದೆ.
ಚಲನಚಿತ್ರ ಪ್ರದರ್ಶನದ ವೇಳೆ ಇಬ್ಬರ ಮಧ್ಯೆ ಜಗಳ ಆರಂಭವಾಗಿ ವಿಕೋಪಕ್ಕೆ ತಿರುಗಿ ಶೋ ಮುಗಿಯುವ ಹೊತ್ತಿಗೆ ಒಬ್ಬ ಇನ್ನೊಬ್ಬನನ್ನು ಇರಿದು ಕೊಲೆ ಮಾಡಿದ್ದಾನೆ. ಕರ್ನಾಟಕದ ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನಲ್ಲಿರುವ ಅಲಂಕಾರ ಥಿಯೇಟರ್ ನಲ್ಲಿ ಈ ಘಟನೆ ನಡೆದಿದೆ.
21 ವರ್ಷದ ರಾಕೇಶ್ ತೆಲುಗು ನಟ ಪವನ್ ಕಲ್ಯಾಣ್ ಅವರ ಕಟ್ಟಾ ಅಭಿಮಾನಿ. ಚಿತ್ರ ಪ್ರದರ್ಶನದ ಮಧ್ಯೆ ಹಾಡೊಂದು ಬಂದಾಗ ಎದ್ದು ನಿಂತು ಕುಣಿಯಲಾರಂಭಿಸಿದ. ಆಗ ಹಿಂದಿನ ಸೀಟಿನಲ್ಲಿ ಕುಳಿತಿದ್ದ ರವಿ ಎಂಬಾತನಿಗೆ ಅಡ್ಡವಾಯಿತು. ರಾಕೇಶ್ ನನ್ನು ಕುಳಿತುಕೊಳ್ಳುವಂತೆ ರವಿ ಸೂಚಿಸಿದನು. ಆದರೆ ಅದಕ್ಕೆ ಒಪ್ಪದೆ ಡ್ಯಾನ್ಸ್ ಮುಂದುವರಿಸಿದನು. ಸಿಟ್ಟಿನಿಂದ ರವಿ ಜಗಳ ಮಾಡಲು ಆರಂಭಿಸಿದನು. ಕುಳಿತಿದ್ದ ಪ್ರೇಕ್ಷಕರಿಗೆ ತೊಂದರೆಯಾಗಿ ಅವರು ಬಯ್ಯಲು ಶುರು ಮಾಡಿದರು. ಸಿನಿಮಾ ಮುಗಿದ ಬಳಿಕವೂ ಹೊರಗೆ ಬಂದು ರವಿ ಮತ್ತು ರಾಕೇಶ್ ಜಗಳ ಮುಂದುವರಿಸಿದರು. ಸಿಟ್ಟಿನಲ್ಲಿ ರವಿ ರಾಕೇಶ್ ಗೆ ತಿವಿದು ಸ್ನೇಹಿತರ ಜೊತೆ ಪರಾರಿಯಾದನು.
ಗಂಭೀರ ಗಾಯಗೊಂಡಿದ್ದ ರಾಕೇಶ್ ನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾನೆ. ಘಟನೆ ಸಂಬಂಧ ರಾಕೇಶ್ ನ ಕುಟುಂಬಸ್ಥರು ಪಾವಗಡ ಪೊಲೀಸ್ ಠಾಣೆಗೆ ದೂರು ನೀಡಿ ಆರೋಪಿ ರವಿಯನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದ್ದಾರೆ.
ಪೊಲೀಸ್ ಠಾಣೆಗೆ ಧಾವಿಸಿದ ತುಮಕೂರು ಪೊಲೀಸ್ ಸೂಪರಿಂಟೆಂಡೆಂಟ್ ಕಾರ್ತಿಕ್ ರೆಡ್ಡಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಲೆತ್ನಿಸಿದರು. ಕೇಸು ದಾಖಲಿಸಿರುವ ಪಾವಗಡ ಪೊಲೀಸರು ಆರೋಪಿ ರವಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


