ಬೆಂಗಳೂರಿನಲ್ಲಿ ಹ್ಯಾರ್ಲೆ ಡೇವಿಡ್‍ಸನ್ ವಾಹನ ಮಾಲಿಕರ ರ್ಯಾಲಿ!
ರಾಜಧಾನಿ ಬೆಂಗಳೂರಿನಲ್ಲಿ ಏಪ್ರಿಲ್ 2 ರಂದು ನಡೆದ 5 ನೇ ದಕ್ಷಿಣ ಎಚ್.ಒ.ಜಿ ರ್ಯಾಲಿಯಲ್ಲಿ 1000 ಕ್ಕೂ ಅಧಿಕ ಹ್ಯಾರ್ಲೆ ಡೇವಿಡ್‍ಸನ್ ಸವಾರರು ಪಾಲ್ಗೊಂಡಿದ್ದರು.

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಏಪ್ರಿಲ್ 2 ರಂದು ನಡೆದ 5 ನೇ ದಕ್ಷಿಣ ಎಚ್.ಒ.ಜಿ ರ್ಯಾಲಿಯಲ್ಲಿ 1000 ಕ್ಕೂ ಅಧಿಕ ಹ್ಯಾರ್ಲೆ ಡೇವಿಡ್‍ಸನ್ ಸವಾರರು ಪಾಲ್ಗೊಂಡಿದ್ದರು. ಇದರಲ್ಲಿ 22 ಹ್ಯಾರ್ಲೆ ಮಾಲೀಕರ ತಂಡಗಳು ಭಾಗವಹಿಸಿದ್ದವು. ಇದರ ವಿಶೇಷವೆಂದರೆ ಕೆಲವರು ದೂರದ ಲಕ್ನೋ ಮತ್ತು ದೆಹಲಿಯಿಂದ ಬೈಕ್ ರೈಡ್ ಮಾಡಿಕೊಂಡು ಬಂದು ತಮ್ಮ ಕೌತುಕದ ಅನುಭವಗಳನ್ನು ಹಂಚಿಕೊಂಡರು.
ಈ ರ್ಯಾಲಿಯ ಪ್ರಮುಖ ಉದ್ದೇಶವೆಂದರೆ, ಹ್ಯಾರ್ಲೆ ಮಾಲೀಕರ ತಂಡಗಳಲ್ಲಿ ಕಸ್ಟಮ್ ಕಾಂಟೆಸ್ಟ್ ಅನ್ನು ಜನಪ್ರಿಯಗೊಳಿಸುವುದಾಗಿತ್ತು. ಈ ಮೂಲಕ ಬೈಕ್ ಮಾಲೀಕರು ತಮ್ಮ ಮೋಟರ್‍ಸೈಕಲ್‍ಗಳ ಮೂಲಕ ಕಲಾತ್ಮಕತೆಯನ್ನು ಜಗತ್ತಿಗೆ ಸಾರುವ ಅವಕಾಶ ಒದಗಿಸಲಾಗಿತ್ತು. ಗ್ರಾಹಕೀಕರಣ ಮತ್ತು ವೈಯಕ್ತೀಕರಣದ ಮೂಲಕ ಹ್ಯಾರ್ಲೆ ಮಾಲೀಕತ್ವದ ಅನುಭವವನ್ನು ಒರೆಗೆ ಹಚ್ಚುವುದು ಮತ್ತು ಈ ಮೋಟರ್‍ಸೈಕಲ್‍ಗಳ ಬಗ್ಗೆ ತಮ್ಮ ಅನುಭವಗಳನ್ನು ತೋರಿಸುವುದು ಇದರ ಮತ್ತೊಂದು ಉದ್ದೇಶವಾಗಿತ್ತು. ಟಸ್ಕರ್‍ಚಾಪ್ಟರ್(ಬೆಂಗಳೂರು) ತಿರುಮಲ ಗೋವಿಂದರಾಜ್ ಅವರು ತಮ್ಮ ಹ್ಯಾರ್ಲೆ ಡೇವಿಡ್‍ಸನ್ ಸ್ಟ್ರೀಟ್ ಗ್ಲೈಡ್ ಸ್ಪೆಷಲ್ ಪ್ರಶಸ್ತಿಗೆ ಪಾತ್ರರಾದರು.
ಈ ರ್ಯಾಲಿಯಲ್ಲಿ ಹ್ಯಾರ್ಲೆ ಮಾಲೀಕರ ತಂಡಗಳ 370 ಸವಾರರು ಸಾವಿರಾರು ಕಿಲೋಮೀಟರ್‍ಗಳನ್ನು ಕ್ರಮಿಸಿದರು. ಈ ರ್ಯಾಲಿಯಲ್ಲಿ ದೇಶಾದ್ಯಂತ ಸಾವಿರಾರು ಕಿಲೋಮೀಟರ್ ಕ್ರಮಿಸುವ ಮೂಲಕ ರೈಡರ್‍ಗಳು ತಮ್ಮಲ್ಲಿರುವ ಬೈಕ್ ರೈಡ್‍ನ ಉತ್ಸಾಹ ಮತ್ತು ಆತ್ಮಸ್ಥೈರ್ಯವನ್ನು ಪ್ರದರ್ಶನ ಮಾಡಿದರು. ಪ್ರತಿವರ್ಷ ನಡೆಯುವ ಪ್ರತಿಯೊಂದು ವಲಯಗಳ ರ್ಯಾಲಿಗಳಲ್ಲಿ ಮತ್ತು ಎಚ್.ಒ.ಜಿ ರ್ಯಾಲಿಯಲ್ಲಿ ಪಾಲ್ಗೊಂಡವರನ್ನು ಸನ್ಮಾನಿಸಲಾಗುತ್ತದೆ.
ಟಸ್ಕರ್ ಹ್ಯಾರ್ಲೆ-ಡೇವಿಡ್‍ಸನ್‍ನ ಪ್ರಿನ್ಸಿಪಾಲ್ ಡೀಲರ್ ಆಗಿರುವ ಶ್ರೀನಿವಾಸ ರೆಡ್ಡಿ ಅವರು ಈ ಸಂದರ್ಭದಲ್ಲಿ ಮಾತನಾಡಿ, ``ನಮ್ಮ ಟಸ್ಕರ್ ಚಾಪ್ಟರ್ ನಗರದಲ್ಲೇ 5 ನೇ ಎಚ್.ಒ.ಜಿ ರ್ಯಾಲಿಯನ್ನು ಆಯೋಜಿಸುವ ಮೂಲಕ ಭ್ರಾತೃತ್ವವನ್ನು ಮೆರೆದಂತಾಗಿದೆ. ಇದು ನಮಗೆ ಹೆಮ್ಮೆ ಎನಿಸಿದೆ. ಇಂತಹ ಎಚ್.ಒ.ಜಿ.ಗಳಿಂದಾಗಿ ಅತ್ಯಂತ ಹೇರಳವಾದ ಮನೋರಂಜನೆ ಜತೆಗೆ ಹ್ಯಾರ್ಲೆ ಮಾಲೀಕತ್ವ ಹೊಂದಿರುವವರು ಒಂದೆಡೆ ಕಲೆಯಲು ವೇದಿಕೆ ಕಲ್ಪಿಸಿದಂತಾಗುತ್ತದೆ. ಇನ್ನು ನಮ್ಮ ಕುತೂಹಲವನ್ನು ತಡೆಯಲು ಸಾಧ್ಯವಿಲ್ಲ. ಈ ವರ್ಷಾಂತ್ಯದಲ್ಲಿ ಇಂದೋರ್(ಟೈಗರ್ ಚಾಪ್ಟರ್)ನಲ್ಲಿ ನಡೆಯಲಿರುವ ಪೂರ್ವ ಎಚ್.ಒ.ಜಿ. ಯನ್ನು ಕಾತುರದಿಂದ ಎದುರು ನೋಡುತ್ತಿದ್ದೇವೆ’’ ಎಂದರು.
ಪ್ರತಿ ವರ್ಷ ನಡೆಯುವ ವಲಯವಾರು ರ್ಯಾಲಿಗಳು ಹ್ಯಾರ್ಲೆ ಮಾಲೀಕರಿಗೆ ಹೊಸ ಅನುಭವಗಳ ಜತೆಗೆ ಬೈಕ್ ರೈಡಿಂಗ್‍ನ ಹೊಸ ಹೊಸ ಅನುಭವಗಳನ್ನು ನೀಡುತ್ತವೆ. ಈ ರ್ಯಾಲಿಗಳಿಂದ ಅವಿಸ್ಮರಣೀಯ ಅನುಭವಗಳನ್ನು ಮಾಲೀಕರು ಹೊಂದಬಹುದು. ದಕ್ಷಿಣದಲ್ಲಿ ನಡೆಯುವ ಪ್ರತಿಯೊಂದು ರ್ಯಾಲಿಗಳು ವಿಶೇಷತೆಗಳಿಂದ ಕೂಡಿರುತ್ತವೆ. ಈ ಹಿಂದೆ ಕೊಚ್ಚಿ, ಹೈದ್ರಾಬಾದ್, ಚೆನ್ನೈ ಮತ್ತು ಹಂಪಿಯಲ್ಲಿ ನಡೆದಿದ್ದ ರ್ಯಾಲಿಗಳಲ್ಲಿ ದೇಶದ ವಿವಿಧ ಭಾಗಗಳ ಎಚ್.ಒ.ಜಿ ಗಳ ಸದಸ್ಯರು ಹೆಚ್ಚು ಹುಮ್ಮಸ್ಸಿನಿಂದ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


