ವಿಮಾನನಿಲ್ದಾಣ ರಸ್ತೆ ಟೋಲ್ ಶುಲ್ಕ ಹೆಚ್ಚಳ
ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ- ಹೆಬ್ಬಾಳ ರಸ್ತೆ ಟೋಲ್ ದರವನ್ನು ಹೆಚ್ಚಿಸಲು ರಾಷ್ಟ್ರೀಯ ಹೆದ್ದಾರಿ...

ಬೆಂಗಳೂರು: ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ- ಹೆಬ್ಬಾಳ ರಸ್ತೆ ಟೋಲ್ ದರವನ್ನು ಹೆಚ್ಚಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಒಪ್ಪಿಗೆ ನೀಡಿದೆ. ಪ್ರತಿ ಟ್ರಿಪ್ಗೆ 10 ರೂಪಾಯಿ ಹೆಚ್ಚಿಸಿರುವ ನವಯುಗ ಟೋಲ್ ಕಂಪೆನಿ ವಾಹನ ಚಾಲಕರಿಗೆ ಮತ್ತೆ ಶಾಕ್ ನೀಡಿದೆ.
ಏಪ್ರಿಲ್ ಒಂದರಿಂದ ಪರಿಷ್ಕೃತ ಟೋಲ್ ದರ ವಸೂಲಿ ಮಾಡಲಾಗುತ್ತದೆ. ಕಾರು, ಜೀಪು, ವ್ಯಾನುಗಳಿಗೆ ವಿನಾಯಿತಿ ನೀಡಲಾಗಿದೆ. ಟೋಲ್ ದರ ಹೆಚ್ಚಿಸಿದ ಸಂಗತಿ ತಿಳಿದು ಜನರು ಹೋರಾಟಕ್ಕೆ ಇಳಿಯುವ ಸಾಧ್ಯತೆ ಇದೆ. ಹೀಗಾಗಿ ಟೋಲ್ಗೆ ಪೊಲೀಸರ ಬಿಗಿ ಬಂದೋಬಸ್ತ್ ಒದಗಿಸಲಾಗಿದೆ.
ಹೆಬ್ಬಾಳದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೂ ಸಿಗ್ನಲ್ ಫ್ರೀ ರಸ್ತೆ ಬಳಸುವ ಬೃಹತ್ ವಾಹನಗಳಿಗೆ ಪ್ರತಿ ಸಂಚಾರಕ್ಕೆ 20 ರೂ. ಹೆಚ್ಚಿಸಲಾಗಿದೆ. ಗೂಡ್ಸ್ ವಾಹನ, ಮಿನಿ ಬಸ್, ಟೆಂಪೊ ಟ್ರಾವೆಲರ್ಗಳ ಪ್ರತಿ ಸಂಚಾರಕ್ಕೆ ಇದ್ದ 175 ರೂ. ಶುಲ್ಕವನ್ನು, ಇದೀಗ 185 ರೂ.ಗೆ ಹೆಚ್ಚಿಸಲಾಗಿದೆ. ಬಸ್, ಲಾರಿ ಮತ್ತಿತರ ಬೃಹತ್ ವಾಹನಗಳಿಗೆ ವಿಧಿಸುತ್ತಿದ್ದ 360 ರೂ. ಶುಲ್ಕವನ್ನು 380 ರೂ.ಗೆ ಏರಿಸಲಾಗಿದೆ.
ಈ ಹಿಂದೆ ಟೋಲ್ ದರ ಹೆಚ್ಚಿಸಿದ್ದರಿಂದ ಆಕ್ರೋಶಗೊಂಡ ಸಾರ್ವಜನಿಕರು ಟೋಲ್ಗೆ ಕಲ್ಲು ತೂರಿ ದ್ವಂಸಗೊಳಿಸಿದ್ದರು. ಕರವೇ ಸೇರಿ ವಿವಿಧ ಕನ್ನಡಪರ ಸಂಘಟನೆಗಳು ಟೋಲ್ ಹೆಚ್ಚಳ ವಿರುದ್ಧ ಧ್ವನಿ ಎತ್ತಿದ್ದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


