ವಿಕಿಪೀಡಿಯಾ ಅಂತರ್ಜಾಲ ಕನ್ನಡ ಕಮ್ಮಟ
ಮುಂಬಯಿ: ತಂತ್ರಜ್ಞಾನದಲ್ಲಿ ಕನ್ನಡ ಭಾಷೆಯನ್ನು ತುರ್ತಾಗಿ ಅಳವಡಿಸಿಕೊಳ್ಳಬೇಕು. ಕನ್ನಡ ಜನತೆಗೆ ಬೇಕಾದ ಪ್ರಪಂಚ ಜ್ಞಾನವನ್ನು ಒದಗಿಸಿಕೊಡುವುದು ವರ್ತಮಾನದ ತುರ್ತ ಆಗಿದ್ದು ಮಾಹಿತಿ, ಸಾಹಿತ್ಯ ರಚನೆಯಲ್ಲಿ ಸಾಹಿತಿಗಳು, ಲೇಖಕರು ಕೈ ಜೋಡಿಸಬೇಕು ಎಂಬುದು ವಿಕಿಪೀಡಿಯಾ ಕನ್ನಡ ವಿಭಾಗದ ಸಂಚಾಲಕ, ವಿಜ್ಞಾನಿ ಡಾ. ಪವನಜ ಅವರು ಮನವಿ ಮಾಡಿಕೊಂಡಿದ್ದಾರೆ.
ಮುಂಬೈ ವಿವಿ ಕನ್ನಡ ವಿಭಾಗ ಇತ್ತೀಚೆಗೆ ಆಯೋಜಿಸಿದ್ದ ಕನ್ನಡ ವಿಕಿಪೀಡಿಯಾ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಾ ಅವರು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಲೇಖನ ರಚನೆಯನ್ನು ಮಾಡುವ ಬಗ್ಗೆ ತಿಳಿಯಪಡಿಸಿದರು. ಅವರು ಇಂಟರ್ನೆಟ್ ಬರವಣಿಗೆ ಕಾರ್ಯಾಗಾರವನ್ನು ನಡೆಸಿಕೊಟ್ಟು ಮಾತನಾಡಿ ಕನ್ನಡವನ್ನು ಉಳಿಸಬೇಕಾದರೆ ನಾವು ಅದನ್ನು ಬಳಸಬೇಕು. ಅದಕ್ಕಾಗಿ ಕನ್ನಡದಲ್ಲಿ ಅಂತರ್ಜಾಲ ಉಪಯೋಗಿಸಬೇಕು. ವಿಕಿಪೀಡಿಯಾವು ಜನರಿಂದ ಜನರಿಗಾಗಿ ಜನರೇ ನಡೆಸುವ ವಿಶ್ವಕೋಶ ಎಂದು ಅವರು ನುಡಿದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ. ಜಿ.ಎನ್. ಉಪಾಧ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರೊನಿಡಾ ಪ್ರೆಸ್ ಮೀಡಿಯಾ ಇದರ ಕಾರ್ಯಾಧ್ಯಕ್ಷ ರೋನ್ಸ್ ಬಂಟ್ವಾಳ್ ಅವರು ಅಂತರ್ಜಾಲ ಬರವಣಿಗೆ ಕಮ್ಮಟವನ್ನು ಉದ್ಘಾಟಿಸಿ ಮಾತನಾಡುತ್ತಾ ವಿಕೀಪೀಡಿಯಾದಂತಹ ಮಾಧ್ಯಮಗಳು ಭಾಷೆಗಳನ್ನು ಬೆಸೆಯುತ್ತಾ ಸಂಬಂಧಗಳನ್ನು ರೂಪಿಸುತ್ತವೆ. ವಿವಿಧತೆಗಳ ವಿವರಣೆಗಳನ್ನು ತಿಳಿಸುತ್ತದೆ ಎಂದರು. ಸಾಹಿತಿ ವಿ.ಗ ನಾಯಕ ಅವರು ಬರವಣಿಗೆಯನ್ನು ಬೆಳೆಸುವುದು ಹೇಗೆ ಎಂಬ ಬಗ್ಗೆ ಮಾತನಾಡಿದರು.
ವಿಕಿಪೀಡಿಯಾದ ಸಕ್ರಿಯ ಲೇಖಕರಾದ ಲಕ್ಷೀ ವೆಂಕಟೇಶ್, ಪತ್ರಕರ್ತೆ ಸೀತಾಲಕ್ಷ್ಮಿ ಕರ್ಕಿಕೋಡಿ ಮತ್ತು ಎಂ.ಎ, ಎಂ.ಫಿಲ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕೆ. ನಳಿನ ಸ್ವಾಗತಿಸಿ ನಿರೂಪಿಸಿದರು. ಡಾ. ಜಿ.ಎನ್. ಉಪಾಧ್ಯ ಪ್ರಾಸ್ತಾವಿಕ ಭಾಷಣಗೈದರು. ವಿಭಾಗದ ಸಂಶೋಧನಾ ಸಹಾಯಕಿ ಪೂರ್ಣಿಮಾ ಎಸ್. ಶೆಟ್ಟಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

