ಶಿವರಾಮ ಕಾಸರಗೋಡುಗೆ ಸನ್ಮಾನ
ಕಾಸರಗೋಡು: ಒಗ್ಗಟ್ಟಿನ ಮೂಲಕ ಸಮಾಜವನ್ನು ಕಟ್ಟಬಹುದು ಮತ್ತು ಸಮಾಜ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ. ಸಮಾಜದ ಅಭಿವೃದ್ಧಿಗೆ ಒಗ್ಗಟ್ಟು ಕಾರಣವಾಗುತ್ತದೆ ಎಂದು ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸಂಘ ಇದರ ಅಣಂಗೂರು ಉಪಸಂಘದ ಅಧ್ಯಕ್ಷ ಕೆ. ಕಮಲಾಕ್ಷ ಕಲ್ಲುಗದ್ದೆ ಅವರು ಹೇಳಿದರು.
ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘ ಇದರ ಅಣಂಗೂರು ಉಪಸಂಘದ ಆಶ್ರಯದಲ್ಲಿ ಕಾಸರಗೋಡಿನ ಮಾಜಿ ನಗರಸಭಾ ಸದಸ್ಯ ಕೆ. ರಾಧಾಕೃಷ್ಣ ಅಣಂಗೂರು ಅವರ ಮನೆಯಲ್ಲಿ ಶ್ರೀ ಪುರಂದರಾನುಗ್ರಹ ಪ್ರಶಸ್ತಿ ಪುರಸ್ಕೃತರಾದ ಶಿವರಾಮ ಕಾಸರಗೋಡು ಅವರಿಗೆ ನೀಡಿದ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಕೆ.ಜೆ. ಜೋಗೇಂದ್ರನಾಥ ವಿದ್ಯಾನಗರ ಅವರು ಅಭಿನಂದನಾ ಭಾಷಣ ಮಾಡಿದರು. ಅಣಂಗೂರಿನ ಶ್ರೀ ಲಕ್ಷ್ಮಣಾನಂದ ಸರಸ್ವತಿ ಮಹಿಳಾ ಭಜನಾ ವೃಂದದ ಉಪಾಧ್ಯಕ್ಷೆ ಶ್ರೀಮತಿ ಕೆ.ಪಿ. ಸಂಧ್ಯಾ ರಾಣಿ ವಾಮನರಾವ್ ಶುಭ ಹಾರೈಸಿದರು.
ಪತ್ರಕರ್ತ ಪ್ರದೀಪ್ ಬೇಕಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಡಾ. ಮಹೇಶ್, ರಾಧಾಕೃಷ್ಣ ಅಣಂಗೂರು, ಜಗದೀಶ್ ಬಿ. ರಾಜೇಶ್, ರಾಜೇಶ್ಚಂದ್ರ, ಪ್ರಕಾಶ್ ವಿದ್ಯಾನಗರ, ಅರುಣಕುಮಾರ್, ಎಸ್. ಲೋಕೇಶಕುಮಾರ್, ಆಶಾಲತಾ ರಾಧಾಕೃಷ್ಣ, ಕಲಾವತಿ, ಪ್ರತಿಭಾ ಮಹೇಶ, ಬಬಿತಾ ಸಂತೋಷ್, ಉಷಾಕಿರಣ್, ಆಶಾಕಿರಣ್, ಸೀಮಾ ಲೋಕೇಶ್, ಶೋಭ ವಿಜಯ್, ಭಾರತಿ ಜಗದೀಶ್ ಮೊದಲಾದವರು ಉಪಸ್ಥಿತರಿದ್ದರು.
ಉಪಾಧ್ಯಕ್ಷ ಕಮಲಾಕ್ಷ ಅಣಂಗೂರು ಸ್ವಾಗತಿಸಿದರು. ಕೋಶಾಧಿಕಾರಿ ಸುನಿಲ್ಕುಮಾರ್ ವಂದಿಸಿದರು. ಹರೀಶ್ಕುಮಾರ್ ಕೆ.ಎಸ್. ಅಣಂಗೂರು ನಿರೂಪಿಸಿದರು. ಕೃತಿ, ಸುದೇಷ್ಣ, ಸ್ಮೃತಿ ಪ್ರಾರ್ಥಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

