ಹೊರನಾಡು ಕನ್ನಡಿಗ

ಏ.6-7 ಬಾ. ಸಾಮಗರಿಗೆ ಅಭಿನಂದನೆ

Published On :

ನವದೆಹಲಿ: ಹೊರನಾಡಿನಲ್ಲಿ ಕನ್ನಡನಾಡು, ನುಡಿ, ಸಾಹಿತ್ಯ, ಸಂಸ್ಕೃತಿಯ ಅಭಿವೃದ್ಧಿಗಾಗಿ ಕಳೆದ ಮೂರು ದಶಕಗಳಿಂದ ಯಶಸ್ವಿಯಾಗಿ ಸೇವೆ ಸಲ್ಲಿಸಿ ಈಗ ಮೂರು ದಶಕಗಳನ್ನು ಪೂರೈಸುತ್ತಿರುವ ಸಂದರ್ಭದಲ್ಲಿ ದಿಲ್ಲಿಯ ಸಂಪಾದಕ ಅವರಿಗೆ ಮುಂದಿನ ಏಪ್ರಿಲ್ 6-7ರಂದು ದಿಲ್ಲಿಯಲ್ಲಿ ನಡೆಯಲಿರುವ 30ನೇ ರಾಷ್ಟ್ರೀಯ ಕನ್ನಡ ಸಮ್ಮೇಳನದಲ್ಲಿ ಅಭಿನಂದಿಸಲು ನಿರ್ಧರಿಸಲಾಗಿದೆ.
'ಬಾ ಸಾಮಗ' ಎಂದೇ ಕನ್ನಡಿಗರಿಗಾಗಿ ಚಿರಪರಿಚಿತರಾಗಿರುವ ಮಲ್ಪೆ ಬಾಲಕೃಷ್ಣ ಸಾಮಗ ಅವರು 1983ರಿಂದ ಕನ್ನಡ ಅಭಿವೃದ್ಧಿಗಾಗಿ ಬದುಕನ್ನು ಮುಡಿಪಿಟ್ಟು ದಿಲ್ಲಿಯಿಂದ 'ದೆಹಲಿ ಕನ್ನಡಿಗ' ಪತ್ರಿಕೆ ಮಾಸ ಪತ್ರಿಕೆ ಆರಂಭಿಸಿ ಹೊರನಾಡ ಕನ್ನಡಾಭಿವೃದ್ಧಿಯಲ್ಲಿ ನೂತನ ಅಧ್ಯಾಯ ಆರಂಭಿಸಿದರು. 'ದೆಹಲಿ ಕನ್ನಡಿಗ' ಪತ್ರಿಕೆ ಆಶ್ರಯದಲ್ಲಿ ಕನ್ನಡಕ್ಕೆ ಇನ್ನೂ ಹೆಚ್ಚಿನ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾನ್ಯತೆ, ಗೌರವ ದೊರಕಿಸಿ ಕನ್ನಡಿಗರಿಗೆ ಎಲ್ಲಾ ರಂಗಗಳಲ್ಲಿ ನ್ಯಾಯ ಒದಗಿಸಿ ದಿಲ್ಲಿಯಲ್ಲಿ ಇದುವರೆಗೆ 29 ರಾಷ್ಟ್ರೀಯ ಕನ್ನಡ ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಕರ್ನಾಟಕ ಸಂಸ್ಕೃತಿ ವೈಭವ ಪುನರುತ್ಧಾನದ ಉದ್ದೇಶದಿಂದ ಕನ್ಯಾಕುಮಾರಿ, ಪಣಜಿ, ಕೊಲ್ಕತ್ತಾ, ಬರೋಡ, ಭೋಪಾಲ್, ಹೈದರಾಬಾದ್, ಚೆನ್ನೈ, ಕಠ್ಮಂಡು, ಪಾಂಡಿಚೇರಿ ಮತ್ತು ದುಬೈಯಲ್ಲಿ ಒಟ್ಟು 10 ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಏರ್ಪಡಿಸಿರುತ್ತಾರೆ. ಕನ್ನಡಿಗರ, ಕನ್ನಡದ ಹಿತರಕ್ಷಣೆಗಾಗಿ ಅನೇಕ ಕಾರ್ಯಕ್ರಮಗಳನ್ನು ಸಂಯೋಜಿಸುವ ಸಾಮಗ ಅವರು 15 ಪುಸ್ತಕಗಳನ್ನು, ನೂರಾರು ಲೇಖನಗಳನ್ನು ಬರೆದಿದ್ದಾರೆ.
ಹೊರನಾಡ ಕನ್ನಡಾಭಿವೃದ್ಧಿಗಾಗಿ ಸಾಮಗರು ಸಲ್ಲಿಸಿದ ಸೇವೆಯನ್ನು ಪರಿಗಣಿಸಿ, 2010ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಗದಗದಲ್ಲಿ ಏರ್ಪಡಿಸಿದ್ದ 76ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇವರನ್ನು ಸನ್ಮಾನಿಸಿದೆ. ಇದೀಗ ಏಪ್ರಿಲ್‌ನಲ್ಲಿ ನಡೆಯುವ ಸಾಮಗರ  ಅಭಿನಂದನಾ ಸಮಾರಂಭದಲ್ಲಿ ಅಭಿನಂದನಾ ಗ್ರಂಥವನ್ನು ಪ್ರಕಟಿಸಲು ನಿರ್ಧರಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.