World Diabetes Day: ಮಕ್ಕಳಲ್ಲಿ ಮಧುಮೇಹ ತಡೆಯುವುದು ಹೇಗೆ...?
ಇಂದು ಮಕ್ಕಳ ದಿನಾಚರಣೆ, ಈ ದಿನದಂದು ಮಕ್ಕಳಲ್ಲಿ ಹೆಚ್ಚಾಗುತ್ತಿರುವ ಡಯಾಬಿಟಿಸ್ ನಿಯಂತ್ರಿಸಲು ಒಂದಷ್ಟು ಸಲಹೆಯನ್ನು ವೈದ್ಯರು ನೀಡಿದ್ದಾರೆ.

ಬದಲಾದ ಜೀವನಶೈಲಿಯಿಂದ ಇಂದು ಮಕ್ಕಳಲ್ಲಿಯೂ ಮಧುಮೇಹವನ್ನು ಸರ್ವೇಸಾಮಾನ್ಯವಾಗಿ ನೋಡುತ್ತಿದ್ದೇವೆ. ಮಕ್ಕಳಲ್ಲಿಯೂ ಟೈಪ್–1 ಮತ್ತು ಟೈಪ್–2 ಡಯಾಬಿಟಿಸ್ ಕಾಣಿಸಿಕೊಳ್ಳುತ್ತಿದ್ದು, ಇದು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಅಪಾಯಕಾರಿಯಾಗಿದೆ.
ಇಂದು ಮಕ್ಕಳ ದಿನಾಚರಣೆ, ಈ ದಿನದಂದು ಮಕ್ಕಳಲ್ಲಿ ಹೆಚ್ಚಾಗುತ್ತಿರುವ ಡಯಾಬಿಟಿಸ್ ನಿಯಂತ್ರಿಸಲು ಒಂದಷ್ಟು ಸಲಹೆಯನ್ನು ವೈದ್ಯರು ನೀಡಿದ್ದಾರೆ.
ಬಂಜಾರಾ ಹಿಲ್ಸ್‌ನ ರೆನೋವಾ ಸೆಂಚುರಿ ಹಾಸ್ಪಿಟಲ್ಸ್‌ನ ಕನ್ಸಲ್ಟೆಂಟ್ ಕ್ಲಿನಿಕಲ್ ಡಯೆಟಿಷಿಯನ್ ಸೌಜನ್ಯ ಗನಿವಾಡ ಅವರು ಮಾತನಾಡಿ, ಪೌಷ್ಟಿಕಾಂಶದ ಸಲಹೆ ನೀಡುವುದಷ್ಟೇ ಅಲ್ಲ, ಸಕ್ಕರೆ ಅಂಶವುಳ್ಳ ಆಹಾರ ಪದಾರ್ಥಗಳು ಮತ್ತು ಸಂಸ್ಕರಿಸಿದ ಆಹಾರಗಳಿಂದ ಎದುರಾಗುವ ಅಪಾಯಗಳ ಕುರಿತು ತಿಳಿಸಬೇಕಾಗಿದೆ. ಮೈದಾ, ಬ್ರೆಡ್ ಬದಲಿಗೆ ಧಾನ್ಯ ಅಥವಾ ಕಡಿಮೆ ಸಕ್ಕರೆ ಅಂಶವುಳ್ಳ ಹಣ್ಣುಗಳನ್ನು ಬಳಕೆ ಮಾಡುವಂತೆ ತಿಳಿಸಲಾಗುವುದು. ಇದು ಜೀವನಶೈಲಿಯನ್ನು ಬದಲಾಯಿಸುತ್ತದೆ ಎಂದು ಹೇಳಿದ್ದಾರೆ.
ಎಲ್‌ಬಿ ನಗರದ ಕಾಮಿನೇನಿ ಹಾಸ್ಪಿಟಲ್ಸ್‌ನ ಕನ್ಸಲ್ಟೆಂಟ್ ಎಂಡೋಕ್ರೈನಾಲಜಿಸ್ಟ್ ಡಾ ಜಿ ಸಂದೀಪ್ ರೆಡ್ಡಿ ಅವರು ಮಾತನಾಡಿ, ಮಧುಮೇಹ ದೈಹಿಕ ಆರೋಗ್ಯದ ಮೇಲಷ್ಟೇ ಅಲ್ಲ, ಮಕ್ಕಳ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ ಮಕ್ಕಳಿಗೆ ಅವರ ಸ್ಥಿತಿಯ ಬಗ್ಗೆ ಅರ್ಥ ಮಾಡಿಸುವುದು ಮುಖ್ಯವಾಗುತ್ತದೆ. ಇದರಿಂದ ಮಧುಮೇಹವನ್ನು ಸುಲಭವಾಗಿ ನಿರ್ವಹಣೆ ಮಾಡಬಹುದು. ಸ್ನೇಹಿತರೊಂದಿಗೆ ಕೂಡಿದಾಗ ಮಕ್ಕಳು ಒತ್ತಡವನ್ನು ಅನುಭವಿಸುತ್ತಾರೆ. ಇದು ಅವರ ಆತ್ಮವಿಶ್ವಾಸದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಮಕ್ಕಳಿಕೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.
ಮಕ್ಕಳನ್ನು ನಿಯಂತ್ರಿಸುವ ಬದಲು ಅವರಿಗೆ ಆಹಾರ ಸಿದ್ಧಪಡಿಸಿಕೊಳ್ಳಲು ಬಿಡಬೇಕು. ಇದು ಅವರ ಆತ್ಮಸ್ಥೈರ್ಯವನ್ನು ಹೆಚ್ಚಿಸುವುದಲ್ಲದೆ, ಆರೋಗ್ಯಕರ ಆಹಾರ ಸೇವನೆ ರೂಢಿಸಿಕೊಳ್ಳಲು ಸಹಾಯ ಮಾಡುತ್ತದೆ. ಇಲ್ಲದೆ, ದೈಹಿಕ ಚಟುವಟಿಕೆ ಕೂಡ ನಿರ್ಣಾಯವಾಗಿದ್ದು, ಈ ಬಗ್ಗೆಯೂ ಅರಿವು ಮೂಡಿಸಬೇಕು. ವ್ಯಾಯಾಮವು ಮಧುಮೇಹವನ್ನು ನಿರ್ವಹಿಸಲು ಸಹಾಯ ಮಾಡುವ ಸರಳ ಮಾರ್ಗಗಳಲ್ಲಿ ಒಂದಾಗಿದೆ. ಇದು ಅವರ ಮಾನಸಿಕ ಯೋಗಕ್ಷೇಮಕ್ಕೂ ಒಳ್ಳೆಯದು ಎಂದು ತಿಳಿಸಿದ್ದಾರೆ.
ಮಕ್ಕಳಲ್ಲಿ ಮಧುಮೇಹ ನಿಯಂತ್ರಿಸುವುದು ಹೇಗೆ?
ಮಕ್ಕಳಲ್ಲಿ ಮಧುಮೇಹ ನಿಯಂತ್ರಿಸಲು ಸಮತೋಲಿತ ಮತ್ತು ಪೌಷ್ಟಿಕ ಆಹಾರ ಅತ್ಯಗತ್ಯ. ಹೆಚ್ಚು ತರಕಾರಿ, ಹಣ್ಣು, ಧಾನ್ಯ ಮತ್ತು ಪ್ರೋಟೀನ್ ಸೇವನೆ ಹೆಚ್ಚಾಗಿರಲಿ. ಸಕ್ಕರೆ, ಕಾರ್ಬೋಹೈಡ್ರೇಟ್ ಆಹಾರದ ಮೇಲೆ ಸಂಪೂರ್ಣ ನಿಯಂತ್ರಣ ಇರಿಸಬೇಕು.
ನಿಯಮಿತ ಏರೋಬಿಕ್ ವ್ಯಾಯಾಮ, ಮಕ್ಕಳನ್ನು ಕ್ರೀಡೆಯಲ್ಲಿ ತೊಡಗಿಸುವುದು ಸೇರಿದಂತೆ ದೈಹಿಕ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿರುವಂತೆ ನೋಡಿಕೊಳ್ಳಿ. ಜೊತೆಗೆ, ಸಕ್ಕರೆ ಮಟ್ಟವನ್ನು ಪ್ರತಿ ನಿತ್ಯ ತಪಾಸಣೆ ಮಾಡುತ್ತ ಬರುವುದರಿಂದ ಸಕ್ಕರೆ ಮಟ್ಟದ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.
ಪರ್ಯಾಯ ಹಾಗೂ ಆರೋಗ್ಯಕರ ಸಿಹಿ ಪದಾರ್ಥಗಳು ಇಂತಿವೆ...
ಡಾರ್ಕ್ ಚಾಕೊಲೇಟ್
ಸಿರಿಧಾನ್ಯದ ಹಿಟ್ಟು
ಡ್ರೈಫ್ರೂಟ್ಸ್ ಲಡ್ಡು
ಹಣ್ಣುಗಳಿಂದ ತಯಾರಿಸಿದ ತಿನಿಸುಗಳು (ಸ್ಮೂಥಿಸ್, ಮೊಸರು, ಕಸ್ಟರ್ಡ್ ಇತ್ಯಾದಿ...)
ಚಿಕ್ಕಿ, ಮಖಾನ, ಧಾನಗಳಿಂದ ಮಾಡಿದ ಬಿಸ್ಕೆಟ್.
ಪೋಷಕರಿಗೆ ಕೆಲ ಸಲಹೆಗಳು...
ಮಕ್ಕಳೊಂದಿಗೆ ಮುಕ್ತವಾಗಿ ಮಾತನಾಡಿ.
ಆರೋಗ್ಯದ ಬಗ್ಗೆ ಮಕ್ಕಳಿಗೆ ಶಿಕ್ಷಣ ನೀಡಿ.
ನಿಮ್ಮ ಕೆಲಸಗಳಲ್ಲಿ ಅವರನ್ನು ತೊಡಗಿಸಿಕೊಳ್ಳಿ
ಭಾವನಾತ್ಮಕ ಬೆಂಬಲ
ಮಕ್ಕಳು ವಿಭಿನ್ನವಾಗಿ ಭಾವಿಸಬೇಡಿ
ಆರೋಗ್ಯಕರ ದಿನಚರಿಯನ್ನು ರೂಪಿಸಿ.
ಅವರ ಪ್ರತಿಯೊಂದು ಕಾರ್ಯಕ್ಕೂ ಪ್ರೋತ್ಸಾಹಿಸಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



