ನಿಮ್ಮ ರೋಗ ನಿರೋಧಕ ಶಕ್ತಿ ವರ್ಧನಗೆ ಸಹಾಯ ಮಾಡುವ ಎರಡು ಆಹಾರ ಪದಾರ್ಥಗಳು
ಮಾನವ ತಾನು ತಿನ್ನುವ ಆಹಾರ ಹಾಗೂ ಆರೋಗ್ಯ ಪರಸ್ಪರ ಸಂಬಂಧಹೊಂದಿದೆ. ಆಹಾರ ಜೀರ್ಣವಾಗುವ ಕ್ರಿಯೆ, ನರಮಂಡಲ, ದುಗ್ಧರಸ ವ್ಯವಸ್ಥೆ ಎಲ್ಲವೂ ಸಹ ಒಂದಕ್ಕೊಂದು ಕೊಂಡಿಯಾಗಿದೆ. ದುಗ್ಧರಸ ವ್ಯವಸ್ಥೆಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕಾರಣವಾಗಿದೆ, ಆದ್ದರಿಂದ ಕೊರೋನಾವೈರಸ್ ಹಾವಳಿಯಿರುವ ಈ ಕಾಲಘಟ್ಟದಲ್ಲಿ ಇದು ಇನ್ನೂ ಹೆಚ್ಚಿನ ಪ್ರಸ್ತುತತೆಯನ್ನು ಹೊಂದಿದೆ. ತೂಕ ಹೆಚ

ಮಾನವ ತಾನು ತಿನ್ನುವ ಆಹಾರ ಹಾಗೂ ಆರೋಗ್ಯ ಪರಸ್ಪರ ಸಂಬಂಧಹೊಂದಿದೆ. ಆಹಾರ ಜೀರ್ಣವಾಗುವ ಕ್ರಿಯೆ, ನರಮಂಡಲ, ದುಗ್ಧರಸ ವ್ಯವಸ್ಥೆ ಎಲ್ಲವೂ ಸಹ ಒಂದಕ್ಕೊಂದು ಕೊಂಡಿಯಾಗಿದೆ. ದುಗ್ಧರಸ ವ್ಯವಸ್ಥೆಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕಾರಣವಾಗಿದೆ, ಆದ್ದರಿಂದ ಕೊರೋನಾವೈರಸ್ ಹಾವಳಿಯಿರುವ ಈ ಕಾಲಘಟ್ಟದಲ್ಲಿ ಇದು ಇನ್ನೂ ಹೆಚ್ಚಿನ ಪ್ರಸ್ತುತತೆಯನ್ನು ಹೊಂದಿದೆ. ತೂಕ ಹೆಚ್ಚಾಗುವುದು, ಕಿಬ್ಬೊಟ್ಟೆಯ ಬೊಜ್ಜು ಹಾಗೂ ರೋಗನಿರೋಧಕ ಶಕ್ತಿಯ ಕುಂದುವಿಕೆ ಒತ್ತಡದ ಲಕ್ಷಣವಾಗಿರಬಹುದು ಎನ್ನುವುದನ್ನು ನೀವು ಗಮನದಲ್ಲಿರಿಸಿಕೊಳ್ಳಬೇಕು.
ದೇಹದ ನೈಸರ್ಗಿಕ ಒತ್ತಡದ ಪ್ರತಿಕ್ರಿಯೆ ಅನಪೇಕ್ಷಿತ ಅಥವಾ ಹಾನಿಕಾರಕವಲ್ಲ. ವಾಸ್ತವವಾಗಿ, ಇದು ಜೀವಿಸಬಲ್ಲ ಪ್ರವೃತ್ತಿಯ ನಿರ್ಣಾಯಕ ಅಂಶ. ಆದರೆ ಇದೀಗ ಆಧುನಿಕ ಜೀವನ ಶೈಲಿಯಲ್ಲಿ ನಾವು ನಿರಂತರ ಒತ್ತಡಕ್ಕೆ ಸಿಲುಕುತ್ತೇವೆ. ಈ ಅತಿಯಾದ ಮತ್ತು ನಿರಂತರ ಒತ್ತಡದ ಪ್ರತಿಕ್ರಿಯೆಯೇ ಹಾನಿಕಾರಕವಾಗಿದೆ. ಒತ್ತಡ-ಮುಕ್ತ ವಾಗಿದ್ದೇನೆ ಎನ್ನುವ ಯಾರೊಬ್ಬರನ್ನೂ ನಾವಿಂದು ಕಾಣಲು ಸಾಧ್ಯವಿಲ್ಲ. ಅದಕ್ಕಾಗಿಯೇ ಒತ್ತಡವನ್ನು ನಿರ್ವಹಿಸಲು ಕಲಿಯುವುದು ನಮ್ಮ ದಿನಚರಿಯ ಒಂದು ಭಾಗವಾಗಬೇಕು.
ಒತ್ತಡವನ್ನು ನಿವಾರಿಸಲು ಧ್ಯಾನ ತಂತ್ರಗಳನ್ನು ತಿಳಿದಿರಬೇಕು. ಆದರೆ ಅದನ್ನು ಪ್ರಾರಂಭಿಸುವುದು, ದಿನನಿತ್ಯ ತಪ್ಪದೇ ಮುಂದುವರಿಸಿಕೊಂಡು ಹೋಗುವುದೇನೂ ಸುಲಭದ ಮಾತಲ್ಲ. ಧ್ಯಾನ ತಂತ್ರಗಳೊಂದಿಗೆ, ದೇಹದ ಅತಿಯಾದ ಒತ್ತಡದ ಪ್ರತಿಕ್ರಿಯೆಯನ್ನು ತಗ್ಗಿಸಬಲ್ಲ ಆಹಾರದ ಬಗ್ಗೆ ಇಂದಿಲ್ಲಿ ನಾವು ಗಮನ ಹರಿಸೋಣ. ಅರಿಶಿಣ ಹಾಗೂ ತುಳಸಿ ಈ ಎರಡು ಈ ಹೊತ್ತಿನಲ್ಲಿ ನಮಗೆ ಪ್ರಧಾನವಾಗಿ ಕಾಣಿಸುತ್ತದೆ.
ಅರಿಶಿನವು ಅನೇಕ ಕಾಯಿಲೆಗಳ ವಿರುದ್ಧ ಹೋರಾಡಬಲ್ಲ ಸಾಮರ್ಥ್ಯ ಹೊಂದಿದೆ. ಅರಿಶೀನದ ಕೆಲ ಅಂಶಗಳು ಳು ದೇಹದಲ್ಲಿನ ಕಾರ್ಟಿಸೋಲ್ (ಒತ್ತಡ-ಪ್ರೇರಿತ ಹಾರ್ಮೋನ್) ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಸೋಂಕುಗಳ ವಿರುದ್ಧ ಹೋರಾಡುವ ದುಗ್ಧರಸ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ.
ಅರಿಶಿನದ ಬಗ್ಗೆ ಸಾಂಪ್ರದಾಯಿಕ ತಿಳುವಳಿಕೆಯಂತೆ ಅದರ ಸಾರಗಳು ಪ್ರತಿಕಾಯ ಉತ್ಪಾದನೆಯನ್ನು ಹೆಚ್ಚಿಸುತ್ತವೆ ಮತ್ತು ಆದ್ದರಿಂದ ದೇಹದಲ್ಲಿನ ಸೋಂಕಿನ ದಾಳಿಯ ವಿರುದ್ಧ ಹೋರಾಡುತ್ತವೆ ಎಂಬುದು ವಿಜ್ಞಾನದಿಂದ ಕೂಡ ಸಾಬೀತಾಗಿದೆ. ಅರಿಶಿನವು ದುಗ್ಧರಸ ವ್ಯವಸ್ಥೆಯ ಮೂಲಕ ವೈರಾಣುಗಳ ಹರಿವನ್ನು ತಡೆಯುವ ಮೂಲಕವೂ ಕಾರ್ಯನಿರ್ವಹಿಸುತ್ತದೆ.
ಅರಿಶಿನ ಪುಡಿ ಸಾಂಪ್ರದಾಯಿಕ ಭಾರತೀಯ ಅಡುಗೆಯ ಒಂದು ಭಾಗವಾಗಿದ್ದು ಇದರ ಹೆಚ್ಚಿನ ಪ್ರಮಾಣ ಒತ್ತಡ ತಗ್ಗಿಸುವುದಕ್ಕೆ ಸಹಕಾರಿಯಾಗಿದೆ. ಅದಕ್ಕಾಗಿ ನೀವು ಅರಿಶಿನ ಪುಡಿ, ತುಪ್ಪ ಮತ್ತು ಕರಿಮೆಣಸಿನೊಂದಿಗೆ ತಯಾರಿಸಿದ ಪೇಸ್ಟ್ ಅನ್ನು ಸೇವಿಸಬಹುದು. ಪಾಶ್ಚಾತ್ಯರಿಂದ ಸಾಕಷ್ಟು ಹೆಸರಾದ Turmeric latte, ಸೇವನೆ ಅದರ ಇನ್ನೊಂದು ರೂಪವಾಗಿದೆ.
ತುಳಸಿ ನಮಗೆ ಪರಿಚಿತವಾಗಿರುವ ಮತ್ತೊಂದು ಮೂಲಿಕೆ. ಈ ಸಸ್ಯವು ದೇಹದಲ್ಲಿ ನಿರ್ವಹಿಸುವ ಅನೇಕ ಪಾತ್ರದ ಮಹತ್ವ ನಮಗೆ ಅರಿವಿದೆ.ಒತ್ತಡಕ್ಕೆ ಒಳಗಾದಾಗ ದೇಹವು ಬಿಡುಗಡೆ ಮಾಡುವ ಅತ್ಯಂತ ಹಾನಿಕಾರಕ ಅಣುಗಲನ್ನು ತಡೆಯಬಲ್ಲ ಶಕ್ತಿ ತುಳಸಿಗಿದೆ. ಅರಿಶಿನದಂತೆ, ತುಳಸಿಯು ದೇಹದ ಮೇಲೆ ಆಗುವ ಒತ್ತಡದ ದುಷ್ಪರಿಣಾಮವನ್ನು ತಗ್ಗಿಸಲಿದೆ. ನಿದ್ರೆಯು ಒತ್ತಡದಿಂದ ಪಾರಾಗುವ ಮತ್ತೊಂದು ಪ್ರಮುಖ ಮಾರ್ಗವಾಗಿದೆ. ತುಳಸಿಯ ನಿಯಮಿತ ಸೇವನೆ - ತಾಜಾ ಎಲೆಗಳನ್ನು ಪಾನೀಯಗಳಲ್ಲಿ ಸೇರ್ಪಡಿಸುವುದು ಅಥವಾ ಕಷಾಯ ತಯಾರಿಯಲ್ಲಿ ಬಳಕೆ ಇದು ವಿಶ್ರಾಂತಿ ನಿದ್ರೆ ಮತ್ತು ಪ್ರತಿರಕ್ಷಣಾ ವ್ಯವಸ್ಥೆ ಸುಧಾರಣೆಗೆ ಸಹಕಾರಿಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


