'ಕೋವಿಡ್-19 ವಿರುದ್ಧ ಹೋರಾಡಲು ಅಶ್ವಗಂಧ ಸಹಕಾರಿ'
ಕೋವಿಡ್-19 ವಿರುದ್ಧ ಹೋರಾಡಲು ಆಯುರ್ವೇದದ ಔಷಧ, ಗಿಡಮೂಲಿಕೆಗಳು ಪರಿಣಾಮಕಾರಿ ಎಂದು ಹೇಳಲಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಅಧ್ಯಯನ ವರದಿಯೊಂದು ಪ್ರಕಟವಾಗಿದೆ.

ನವದೆಹಲಿ: ಕೋವಿಡ್-19 ವಿರುದ್ಧ ಹೋರಾಡಲು ಆಯುರ್ವೇದದ ಔಷಧ, ಗಿಡಮೂಲಿಕೆಗಳು ಪರಿಣಾಮಕಾರಿ ಎಂದು ಹೇಳಲಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಅಧ್ಯಯನ ವರದಿಯೊಂದು ಪ್ರಕಟವಾಗಿದೆ.
ಆಯುರ್ವೇದದ ಮೂಲಿಕೆ ಅಶ್ವಗಂಧ ಕೋವಿಡ್-19 ವೈರಾಣು ತಡೆಗಟ್ಟುವುದಕ್ಕೆ ಅತ್ಯಂತ ಪರಿಣಾಮಕಾರಿ ಔಷಧವಾಗಿ ಕೆಲಸ ಮಾಡಬಲ್ಲದು ಎಂದು ಐಐಟಿ-ದೆಹಲಿ ಹಾಗೂ ಜಪಾನ್ ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಇಂಡಸ್ಟ್ರಿಯಲ್ ಸೈನ್ಸ್-ಟೆಕ್ನಾಲಜಿಯ ಸಹಯೋಗದಲ್ಲಿ ನಡೆದ ಜಂಟಿ ಸಂಶೋಧನೆಯಿಂದ ಸಾಬೀತಾಗಿದೆ.
ಅಶ್ವಗಂಧ ಹಾಗೂ ಪ್ರೋಪೋಲಿಸ್ ನಲ್ಲಿರುವ ಸಂಯುಕ್ತಗಳು ಕೊರೋನಾ ತಡೆಗೆ ಪರಿಣಾಮಕಾರಿಯಾದ ಔಷಧವಾಗಬಲ್ಲದು ಎಂದು ಸಂಶೋಧನಾ ತಂಡ ಹೇಳಿದೆ. ವೈರಾಣು ದ್ವಿಗುಣಗೊಳ್ಳುವ ಎಂಜೈಮ್ ನ್ನು ಗುರಿಯಾಗಿರಿಸಿಕೊಂಡು ಈ ಸಂಶೋಧನೆ ನಡೆದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


