ರೋಸ್ಟೆಡ್, ಗ್ರಿಲ್ಡ್ ಮಾಂಸಹಾರ ಸೇವೆನೆಯಿಂದ ಏರುತ್ತದೆ ರಕ್ತದೊತ್ತಡ!
ವಾರಕ್ಕೊಮ್ಮೆ ಗ್ರಿಲ್ಡ್ ಚಿಕನ್, ರೋಸ್ಟೆಡ್ ಪಿಶ್ ತಿನ್ನುವವರಿಗೊಂದು ಆಘಾತಕಾರಿ ಸುದ್ದಿಯಿದೆ. ಅತ್ಯಧಿಕ ಉಷ್ಣಾಂಶದಲ್ಲಿ ಬೇಯಿಸಿದ ಮಾಂಸಾಹಾರವನ್ನು ...

Published On :
ನ್ಯೂಯಾರ್ಕ್: ವಾರಕ್ಕೊಮ್ಮೆ ಗ್ರಿಲ್ಡ್ ಚಿಕನ್, ರೋಸ್ಟೆಡ್ ಪಿಶ್ ತಿನ್ನುವವರಿಗೊಂದು ಆಘಾತಕಾರಿ ಸುದ್ದಿಯಿದೆ. ಅತ್ಯಧಿಕ ಉಷ್ಣಾಂಶದಲ್ಲಿ ಬೇಯಿಸಿದ ಮಾಂಸಾಹಾರವನ್ನು ಸೇವಿಸುವುದರಿಂದ ರಕ್ತದೊತ್ತಡ ಮಟ್ಟದಲ್ಲಿ ಏರಿಕೆಯಾಗುತ್ತದೆ, ಜೊತೆಗೆ ಹಲವು ಹೃದಯ ಸಂಬಂಧಿ ಕಾಯಿಲೆಗಳು ಬರುತ್ತವೆ ಎಂಬುದು ಅಧ್ಯಯನದಿಂದ ತಿಳಿದು ಬಂದಿದೆ.
ತಿಂಗಳಲ್ಲಿ 15 ಬಾರಿ ಗ್ರಿಲ್ಡ್ ಚಿಕನ್, ಫಿಶ್ ಸೇವನೆ ಮಾಡಿದರೇ ಶೇ, 17 ರಷ್ಟು ರಕ್ತದೊತ್ತಡ ಪ್ರಮಾಣಏರುತ್ತದೆ ಎಂದು ಹಾರ್ವರ್ಡ್ ಅಧ್ಯಯನ ಕಂಡು ಹಿಡಿದಿದೆ.
ಅಪರೂಪಕ್ಕೆ ಈ ರೀತಿಯ ಮಾಂಸಾಹಾರ ಸೇವಿಸುವವರಿಗಿಂತ ಇವರಿಗೆ ಅಪಾಯ ಹೆಚ್ಚು ಇರುತ್ತದೆ. ಅಧಿಕ ಉಷ್ಣತೆಗೆ ಮಾಂಸಾಹಾರವನ್ನು ಒಡ್ಡಿದಾಗ ಅದರಿಂದ ಬಿಡುಗಡೆಯಾಗುವ ಪ್ರೋಟೀನ್ ನಿಂದ ರಸಾಯನಿಕ ಉತ್ಪತ್ತಿಯಾಗುತ್ತದೆ ಈ ಆಹಾರ ಪದಾರ್ಥ ಸೇವಿಸುವದರಿಂದ ಅಧಿಕ ರಕ್ತದೊತ್ತಡ ಉಂಟಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಮಾಂಸಾಹಾರದಲ್ಲಿ ಉತ್ಪತ್ತಿಯಾಗುವ ರಾಸಾಯನಿಕಗಳಿಂದ ಒತ್ತಡ, ಊರಿಯೂತ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂದು ಬೋಸ್ಟನ್ ಟಿ.ಎಚ್ ಚಾನ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ವಿಭಾಗದ ಲೇಖಕರು ಹೇಳಿದ್ದಾರೆ.
ಹೀಗಾಗಿ ತೆರೆದ ಬೆಂಕಿಯಲ್ಲಿ ಮಾಂಸ ಸುಡುವುದು, ಅಧಿಕ ಉಷ್ಣಾಂಶದಲ್ಲಿ ಬೇಯಿಸುವ ಮಾಂಸಾಹಾರಗಳಿಂದ ದೂರ ಇರುವಂತೆ ಅವರು ಸಲಹೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


