ವಾಯುಮಾಲಿನ್ಯದಿಂದಲೂ ಮಧುಮೇಹ; ಹೆಚ್ಚಿನ ಅಪಾಯದಲ್ಲಿ ಭಾರತ: ಲ್ಯಾನ್ಸೆಟ್ ವರದಿ
ವಾಯುಮಾಲಿನ್ಯದಿಂದಲೂ ಮಧುಮೇಹ ಉಂಟಾಗುವ ಸಾಧ್ಯತೆಗಳಿದ್ದು, ಕಡಿಮೆ ಮಟ್ಟ ಎಂದು ಪರಿಗಣಿಸಲಾಗುತ್ತಿರುವ ಈಗಿನ ವಾಯುಮಾಲಿನ್ಯದ ಪ್ರಮಾಣವೂ ಅಪಾಯಕಾರಿ-ಲ್ಯಾನ್ಸೆಟ್ ವರದಿ

Published On :
ವಾಯುಮಾಲಿನ್ಯದಿಂದಲೂ ಮಧುಮೇಹ ಉಂಟಾಗುವ ಸಾಧ್ಯತೆಗಳಿದ್ದು, ಕಡಿಮೆ ಮಟ್ಟ ಎಂದು ಪರಿಗಣಿಸಲಾಗುತ್ತಿರುವ ಈಗಿನ ವಾಯುಮಾಲಿನ್ಯದ ಪ್ರಮಾಣವೂ ಅಪಾಯಕಾರಿ ಎಂದು ಲ್ಯಾನ್ಸೆಟ್ ವರದಿ ಎಚ್ಚರಿಸಿದೆ.
2016 ರಲ್ಲಿ ಜಾಗತಿಕ ಮಟ್ಟದಲ್ಲಿ ಒಟ್ಟಾರೆ ಮಧುಮೇಹಕ್ಕೆ ತುತ್ತಾಗಿರುವವರ ಸಂಖ್ಯೆಯ ಪೈಕಿ ಕೇವಲ ವಾಯುಮಾಲಿನ್ಯದಿಂದಷ್ಟೇ ಮಧುಮೇಹಕ್ಕೆ ತುತ್ತಾಗಿರುವವರ ಸಂಖ್ಯೆ ಶೇ.14 ಕ್ಕೆ ಏರಿಕೆಯಾಗಿದೆ. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಗಾಳಿಯನ್ನು ಶುದ್ಧಗೊಳಿಸುವ ನೀತಿಗಳ ಕೊರತೆ, ಪರಿಸರ ಹಾನಿಯನ್ನು ತಗ್ಗಿಸುವ ನೀತಿಗಳ ಕೊರತೆ ಇದ್ದು ಭಾರತದಂತಹ ರಾಷ್ಟ್ರಗಳೂ ಸಹ ವಾಯುಮಾಲಿನ್ಯ-ಮಧುಮೇಹಕ್ಕೆ ಸಂಬಂಧಿಸಿದಂತೆ ಅತಿ ಹೆಚ್ಚು ಅಪಾಯ ಎದುರಿಸುತ್ತಿದೆ ಎನ್ನುತ್ತಿದೆ ಲ್ಯಾನ್ಸೆಟ್ ವರದಿ
ವಾಯುಮಾಲಿನ್ಯದಿಂದಾಗಿ ದೇಹದಲ್ಲಿ ಇನ್ಸುಲಿನ್ ಉತ್ಪಾದನೆ ಕಡಿಮೆಯಾಗುತ್ತಿದ್ದು, ಮಧುಮೇಹ ಉಂಟಾಗಲು ಕಾರಣವಾಗುತ್ತಿದೆ. ಜಾಗತಿಕವಾಗಿ ಹೆಚ್ಚುತ್ತಿರುವ ಮಧುಮೇಹಕ್ಕೂ-ವಾಯುಮಾಲಿನ್ಯಕ್ಕೂ ಸಂಬಂಧವಿರುವುದು ನಮ್ಮ ಅಧ್ಯಯನ ವರದಿಯಲ್ಲಿ ಸ್ಪಷ್ಟವಾಗಿದೆ ಎಂದು ವಾಷಿಂಗ್ ಟನ್ ನ ವಿಶ್ವವಿದ್ಯಾನಿಲಯದ ಸಂಶೋಧಕರಾದ ಜಿಯಾದ್ ಅಲ್-ಆಲಿ ಹೇಳಿದ್ದಾರೆ. 2016 ರಲ್ಲಿ ಜಾಗತಿಕ ಮಟ್ಟದಲ್ಲಿ ಬೇರೆ ಯಾವುದೆ ಕಾರಣಗಳಿಲ್ಲದೇ ಕೇವಲ ವಾಯುಮಾಲಿನ್ಯದಿಂದಲೇ ಸುಮಾರು 3 ಮಿಲಿಯನ್ ಗೂ ಹೆಚ್ಚಿನ ಜನರು ಮಧುಮೇಹಕ್ಕೆ ತುತ್ತಾಗಿದ್ದಾರೆ. ಇದು ಒಟ್ಟಾರೆ ಮಧುಮೇಹಕ್ಕೆ ತುತ್ತಾದವರ ಶೇ.14 ರಷ್ಟಾಗಿದೆ.
ವಾಯುಮಾಲಿನ್ಯದ ಪ್ರಮಾಣವನ್ನು ನಿಗದಿಪಡಿಸುವಾಗ ಕಡಿಮೆ ಮಟ್ಟ ಎಂದು ಪರಿಗಣಿಸಲಾಗುತ್ತಿರುವ ಮಟ್ಟವೂ ಸಹ ಅಪಾಯಕಾರಿಯೇ ಎಂಬುದನ್ನು ಅಮೆರಿಕದ ಪರಿಸರ ರಕ್ಷಣಾ ಏಜೆನ್ಸಿ(ಇಪಿಎ) ಹಾಗೂ ವಿಶ್ವ ಆರೋಗ್ಯ ಸಂಸ್ಥೆ( ಡಬ್ಲ್ಯೂಹೆಚ್ ಒ) ಪರಿಗಣಿಸಿದೆ. ಆದರೆ ಇದನ್ನೂ ಸಡಿಲಗೊಳಿಸಬೇಕೆಂದು ಕೈಗಾರಿಕಾ ವಲಯ ಲಾಬಿ ಮಾಡುತ್ತಿದೆ. ಈಗ ಕಡಿಮೆ ಮಟ್ಟ ಎಂದು ಪರಿಗಣಿಸಲಾಗುತ್ತಿರುವ ವಾಯುಮಾಲಿನ್ಯದ ಮಟ್ಟವನ್ನು ಮತ್ತಷ್ಟು ಕಠಿಣವಾಗಿ ಪರಿಶೀಲನೆ ಮಾಡಬೇಕಿದ್ದು, ಕಠಿಣ ಮಾನದಂಡಗಳನ್ನು ರೂಪಿಸಬೇಕಿದೆ ಎಂದು ಲ್ಯಾನ್ಸೆಟ್ ವರದಿಯಲ್ಲಿ ಸಲಹೆ ನೀಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


