ಕೊಬ್ಬು ಮತ್ತು ಕಾರ್ಬೊಹೈಡ್ರೇಟ್ ಕಡಿಮೆ ಪ್ರಮಾಣದ ಆಹಾರಗಳಿಂದ ತೂಕ ಇಳಿಕೆ
ದೇಹದ ಅತಿಯಾದ ತೂಕ ಇಳಿಸಿಕೊಳ್ಳಲು ಕಡಿಮೆ ಕೊಬ್ಬಿನ ಆಹಾರ ಅಥವಾ ಕಡಿಮೆ ಕಾರ್ಬೊಹೈಡ್ರೇಟ್ ...

ನ್ಯೂಯಾರ್ಕ್: ದೇಹದ ಅತಿಯಾದ ತೂಕ ಇಳಿಸಿಕೊಳ್ಳಲು ಕಡಿಮೆ ಕೊಬ್ಬಿನ ಆಹಾರ ಅಥವಾ ಕಡಿಮೆ ಕಾರ್ಬೊಹೈಡ್ರೇಟ್ ಇರುವ ಆಹಾರವನ್ನು ಸೇವಿಸಬೇಕೆ ಎಂಬ ಗೊಂದಲದಲ್ಲಿದ್ದೀರಾ? ಆಹಾರದಲ್ಲಿ ಕಾರ್ಬೋಹೈಡ್ರೇಟ್ ಅಥವಾ ಕೊಬ್ಬುಗಳನ್ನು ಕಡಿಮೆ ಮಾಡುವುದರಿಂದ ಹೆಚ್ಚಿನ ಪ್ರಮಾಣದ ತೂಕವನ್ನು ಸಮ ಪ್ರಮಾಣದಲ್ಲಿ ಕಡಿಮೆ ಮಾಡಿಕೊಳ್ಳಬಹುದು ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.
ಜಾಮಾ ಎಂಬ ಪತ್ರಿಕೆಯಲ್ಲಿ ಈ ಅಧ್ಯಯನ ಪ್ರಕಟವಾಗಿದ್ದು, ತೂಕ ಕಡಿಮೆ ಮಾಡಿಕೊಳ್ಳಲು ಕಡಿಮೆ ಕೊಬ್ಬು ಅಥವಾ ಕಡಿಮೆ ಕಾರ್ಬೊಹೈಡ್ರೇಟ್ ಇರುವ ಪದಾರ್ಥಗಳನ್ನು ಸಮ ಪ್ರಮಾಣದಲ್ಲಿ ಸೇವಿಸುವುದನ್ನು ಕಡಿಮೆ ಮಾಡಬೇಕು. ಕಡಿಮೆ ಸಕ್ಕರೆ ಸೇವಿಸುವುದು, ಕಡಿಮೆ ಸಂಸ್ಕರಿತ ಪದಾರ್ಥಗಳು ಮತ್ತು ಸಾಧ್ಯವಾದಷ್ಟುತರಕಾರಿಗಳನ್ನು ಸೇವಿಸುವುದರಿಂದ ಸಲಾಡ್ ಮಾಡಿ ತಿನ್ನುವುದರಿಂದ ತೂಕ ಕಳೆದುಕೊಳ್ಳಬಹುದು.
ತೂಕ ಕಳೆದುಕೊಳ್ಳಲು ಉತ್ತಮ ಡಯಟ್ ಸೂತ್ರಗಳೇನು ಎಂಬ ದೀರ್ಘಾವಧಿಯ ಚರ್ಚೆಗೆ ಈ ಅಧ್ಯಯನ ಪರಿಹಾರ ನೀಡುತ್ತದೆ.
ಒಬ್ಬರು ಒಂದು ಡಯಟ್ ಸೂತ್ರವನ್ನು ಅನುಸರಿಸಿ ತೂಕ ಚೆನ್ನಾಗಿ ಇಳಿಸಿಕೊಂಡಿದ್ದನ್ನು, ಮತ್ತೊಬ್ಬರು ಅದೇ ಡಯಟ್ ಸೂತ್ರವನ್ನು ಅನುಸರಿಸಿದರೂ ಕೂಡ ಅವರಿಗೆ ತೂಕ ಕಳೆದುಕೊಳ್ಳಲು ಸಹಾಯವಾಗದಿರುವ ಬಗ್ಗೆ ನಾವು ಅನೇಕ ಸಂದರ್ಭಗಳಲ್ಲಿ ನೋಡಿದ್ದೇವೆ ಎನ್ನುತ್ತಾರೆ ಕ್ಯಾಲಿಫೋರ್ನಿಯಾದ ಸ್ಟಾನ್ ಫೊರ್ಡ್ ವಿಶ್ವವಿದ್ಯಾಲಯದ ವೈದ್ಯಕೀಯ ಪ್ರೊಫೆಸರ್ ಕ್ರಿಸ್ಟೊಫರ್ ಗಾರ್ಡನರ್.
ಇದಕ್ಕೆ ಕಾರಣ ನಮ್ಮ ದೇಹ ಪ್ರಕೃತಿಯಲ್ಲಿನ ವ್ಯತ್ಯಾಸ. ಈ ವೈವಿಧ್ಯತೆಗೆ ಕಾರಣವೇನೆಂಬುದನ್ನು ನಾವು ತಿಳಿದುಕೊಳ್ಳಬೇಕು. ಉತ್ತಮ ಡಯಟ್ ಎಂದರೇನು ಎಂದು ನಾವು ಕೇಳಬಾರದು, ಬದಲಿಗೆ ಯಾರಿಗೆ ಯಾವ ಡಯಟ್ ಉತ್ತಮ ಎಂದು ಕೇಳಬೇಕು ಎನ್ನುತ್ತಾರೆ ಅವರು.
ಈ ವಿಜ್ಞಾನಿಗಳ ತಂಡ 609 ಪುರುಷರು ಮತ್ತು ಮಹಿಳೆಯರ ಮೇಲೆ ಅಧ್ಯಯನ ನಡೆಸಿದ್ದು ಅವರು 18ರಿಂದ 50 ವರ್ಷದವರೊಳಗಿನವರಾಗಿದ್ದರು. ಇವರಲ್ಲಿ ಕಡಿಮೆ ಕೊಬ್ಬಿನ ಅಂಶ ಇರುವ ಮತ್ತು ಇನ್ನೊಂದು ಕಡಿಮೆ ಕಾರ್ಬೊಹೈಡ್ರೇಟ್ ಇರುವ ಪದಾರ್ಥಗಳನ್ನು ಸೇವಿಸುವ ಗುಂಪು ಎಂದು ವಿಂಗಡಿಸಲಾಗಿಯಿತು. ಪ್ರತಿ ಗುಂಪಿಗೆ ಒಂದು ವರ್ಷ ಡಯಟ್ ಪಾಲಿಸುವಂತೆ ಸೂಚಿಸಲಾಯಿತು.
ಎರಡೂ ಗುಂಪಿನ ಸದಸ್ಯರು ಸರಾಸರಿ 13 ಪೌಂಡ್ ಗಳಷ್ಟು ತೂಕವನ್ನು ಇಳಿಸಿಕೊಂಡಿದ್ದರು. ಕೆಲವರು 60 ಪೌಂಡ್ ಗಳಷ್ಟು ತೂಕ ಇಳಿಸಿಕೊಂಡಿದ್ದರೆ ಇನ್ನು ಕೆಲವರು ಸುಮಾರು 15ರಿಂದ 20 ಪೌಂಡುಗಳಷ್ಟು ತೂಕ ಹೆಚ್ಚಿಸಿಕೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


