ಆರೋಗ್ಯ

ವಾಯು ಮಾಲಿನ್ಯ ನಿಮ್ಮ ನೈತಿಕತೆಯನ್ನು ಕಲುಷಿತಗೊಳಿಸುತ್ತದೆ: ಅಧ್ಯಯನ

ವಾಯು ಮಾಲಿನ್ಯದಿಂದ ಮನುಷ್ಯನ ಆರೋಗ್ಯದ ಮೇಲೆ ಪರಿಮಾಮ ಬೀರುವುದು ಮಾತ್ರವಲ್ಲದೆ ...

ವಾಯು ಮಾಲಿನ್ಯ ನಿಮ್ಮ ನೈತಿಕತೆಯನ್ನು ಕಲುಷಿತಗೊಳಿಸುತ್ತದೆ: ಅಧ್ಯಯನ
ಸಾಂದರ್ಭಿಕ ಚಿತ್ರ
Published On :
ನ್ಯೂಯಾರ್ಕ್: ವಾಯು ಮಾಲಿನ್ಯದಿಂದ ಮನುಷ್ಯನ ಆರೋಗ್ಯದ ಮೇಲೆ ಪರಿಮಾಮ ಬೀರುವುದು ಮಾತ್ರವಲ್ಲದೆ ಅಪರಾಧ ಮತ್ತು ಮೋಸದಂತಹ ಅನೈತಿಕ ವರ್ತನೆಗಳನ್ನು ಮಾಡಿಸುತ್ತದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ.
ಪ್ರಾಯೋಗಿಕ ಮತ್ತು ಸೈದ್ಧಾಂತಿಕ ಅಧ್ಯಯನದಲ್ಲಿ ವಾಯು ಮಾಲಿನ್ಯದಿಂದ ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಮತ್ತು ವರ್ತನೆಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಕಂಡುಬಂದಿದೆ ಎಂದು ಅಧ್ಯಯನದ ಮುಖ್ಯ ಲೇಖಕ ಕೊಲಂಬಿಯಾ ಬ್ಯುಸಿನೆಸ್ ಶಾಲೆಯ ಜಾಕ್ಸನ್ ಜಿ.ಲು ಹೇಳಿದ್ದಾರೆ.
ಸೈಕಲಾಜಿಕಲ್ ಸೈನ್ಸ್ ಪತ್ರಿಕೆಯಲ್ಲಿ ಅಧ್ಯಯನ ಪ್ರಕಟಗೊಂಡಿದ್ದು ಅಮೆರಿಕಾ ನಗರದಲ್ಲಿ 9,360 ಮಂದಿ ಮೇಲೆ 9 ವರ್ಷಗಳ ಕಾಲ ಅಧ್ಯಯನ ನಡೆಸಲಾಗಿದೆ.
ಅತ್ಯಂತ ಹೆಚ್ಚು ಮಾಲಿನ್ಯ ಇರುವ ನಗರಗಳಲ್ಲಿ ಅಪರಾಧ ಪ್ರಕರಣಗಳ ಪ್ರಮಾಣವೂ ಕೂಡ ಹೆಚ್ಚಿರುತ್ತದೆ. ಮಾಲಿನ್ಯ ಮತ್ತು ಮನುಷ್ಯನ ವರ್ತನೆಗಳ ಬಗ್ಗೆ ಸಂಶೋಧಕರು ನಿರಂತರ ಪ್ರಯೋಗಗಳನ್ನು ನಡೆಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.