ಆರೋಗ್ಯ

ಒತ್ತಡ ಹೆಚ್ಚಾಗಿ, ಜ್ಞಾಪಕಶಕ್ತಿ ಕುಂದುತ್ತಿದೆಯೇ? ಹಾಗಾದರೆ ಆಗಾಗ ಡಾರ್ಕ್ ಚಾಕೊಲೇಟ್ ಸೇವಿಸಿ

ಡಾರ್ಕ್ ಚಾಕಲೇಟ್ ಸೇವಿಸುವುದರಿಂದ ಒತ್ತಡ, ಉರಿಯೂತಗಳು ಕಡಿಮೆಯಾಗಿ ನೆನಪುಶಕ್ತಿ ...

ಒತ್ತಡ ಹೆಚ್ಚಾಗಿ, ಜ್ಞಾಪಕಶಕ್ತಿ ಕುಂದುತ್ತಿದೆಯೇ? ಹಾಗಾದರೆ ಆಗಾಗ ಡಾರ್ಕ್ ಚಾಕೊಲೇಟ್ ಸೇವಿಸಿ
ಸಾಂದರ್ಭಿಕ ಚಿತ್ರ
Published On :

ನ್ಯೂಯಾರ್ಕ್: ಡಾರ್ಕ್ ಚಾಕಲೇಟ್ ಸೇವಿಸುವುದರಿಂದ ಒತ್ತಡ, ಉರಿಯೂತಗಳು ಕಡಿಮೆಯಾಗಿ ನೆನಪುಶಕ್ತಿ ಹೆಚ್ಚಿಸುತ್ತದೆ. ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿ ಮನಸ್ಥಿತಿಯನ್ನು ಕೂಡ ಉತ್ತಮಪಡಿಸುತ್ತದೆ ಎಂದು ಪ್ರಾಯೋಗಿಕ ವರದಿ ಹೇಳಿದೆ.

ಡಾರ್ಕ್ ಚಾಕಲೇಟ್ ನಲ್ಲಿ ಕೊಕೊ ಬೀಜದ ಪ್ರಮಾಣ ಹೆಚ್ಚಿರುವುದರಿಂದ ಈ ಲಾಭವಾಗುತ್ತದೆ. ಕೊಕೊ ಬೀಜದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತವನ್ನು ತಡೆಯುವ ಅಂಶಗಳಿದ್ದು ಅದು ಮೆದುಳು ಹಾಗೂ ಹೃದಯದ ಆರೋಗ್ಯಗಳಿಗೆ ಉತ್ತಮವಾಗಿದೆ ಎಂದು ಸಂಶೋಧನೆ ತಿಳಿಸುತ್ತದೆ.

ಮೆದುಳಿನ ಕಾರ್ಯದ ಮೇಲೆ ಡಾರ್ಕ್ ಚಾಕಲೇಟ್ ಗಳ ಪ್ರಭಾವ ಕುರಿತು ವರ್ಷಗಳ ಕಾಲ ಅಧ್ಯಯನ ನಡೆಸಿದ್ದು ಅದರಲ್ಲಿನ ಸಕ್ಕರೆ ಅಂಶಗಳು ಕೂಡ ಮನುಷ್ಯನನ್ನು ಸಂತೋಷವಾಗಿಡುವಲ್ಲಿ ಸಹಕಾರಿಯಾಗಿದೆ ಎಂದು ಮುಖ್ಯ ಸಂಶೋಧಕ ಕ್ಯಾಲಿಫೋರ್ನಿಯಾದ ಲೊಮ ಲಿಂಡಾ ವಿಶ್ವವಿದ್ಯಾಲಯದ ಲೀ ಎಸ್ ಬರ್ಕ್ ತಿಳಿಸಿದ್ದಾರೆ.

ಮಾನವನ ಅನುವಂಶದ ಮೇಲೆ ಕೂಡ ಡಾರ್ಕ್ ಚಾಕಲೇಟ್ ಗಳು ಪ್ರಭಾವ ಬೀರುತ್ತವೆ. ಇದು ಸೆಲ್ಯುಲರ್ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ನಿಯಂತ್ರಿಸುವುದಲ್ಲದೆ ನರ ಸಂಕೇತ ಮತ್ತು ಸಂವೇದನಾತ್ಮಕ ಗ್ರಹಿಕೆ ಮೇಲೆ ಪರಿಣಾಮ ಬೀರುತ್ತದೆ ಕೂಡ.

ಕೊಕೊದ ಅಂಶ ಡಾರ್ಕ್ ಚಾಕಲೇಟ್ ಗಳಲ್ಲಿ ಹೆಚ್ಚಾಗಿ ಇರುವುದರಿಂದ ಸಂವೇದನೆ, ಸ್ಮರಣೆ, ಮನಸ್ಥಿತಿ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ ಎಂದು ಪ್ರಯೋಗದಿಂದ ತಿಳಿದುಬಂದಿದೆ ಎನ್ನುತ್ತಾರೆ ಬರ್ಕ್.

ಈ ಅಧ್ಯಯನ ಅಮೆರಿಕಾದ ಸಾನ್ ಡಿಯಗೊದ ಎಕ್ಸರಿಮೆಂಟಲ್ ಬಯೊಲಜಿ 2018ನಲ್ಲಿ ಪ್ರಕಟವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.