ಆರೋಗ್ಯ

ಸುಗಂಧ ದ್ರವ್ಯ, ಕೃತಕ ಸುಗಂಧ ದ್ರವ್ಯಗಳಿಂದ ಆರೋಗ್ಯದ ಮೇಲೆ ಪರಿಣಾಮ

ಸುಗಂಧ ದ್ರವ್ಯ ಅಥವಾ ಪರ್ಫ್ಯೂಮ್ ಗಳನ್ನು ಹಾಕಿಕೊಳ್ಳುವುದು ಆಕರ್ಷಣೀಯವಾಗಿರುತ್ತದೆ. ಆದರೆ ಈ ರೀತಿಯ ಸುಗಂಧ ದ್ರವ್ಯಗಳಿಂದ, ಪರ್ಫ್ಯೂಮ್ ಗಳಿಂದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ....

ಸುಗಂಧ ದ್ರವ್ಯ, ಕೃತಕ ಸುಗಂಧ ದ್ರವ್ಯಗಳಿಂದ ಆರೋಗ್ಯದ ಮೇಲೆ ಪರಿಣಾಮ
ಕೃತಕ ಸುಗಂಧ ದ್ರವ್ಯ
Published On :
ಲಂಡನ್: ಸುಗಂಧ ದ್ರವ್ಯ ಅಥವಾ ಪರ್ಫ್ಯೂಮ್ ಗಳನ್ನು ಹಾಕಿಕೊಳ್ಳುವುದು ಆಕರ್ಷಣೀಯವಾಗಿರುತ್ತದೆ. ಆದರೆ ಈ ರೀತಿಯ ಸುಗಂಧ ದ್ರವ್ಯಗಳಿಂದ, ಪರ್ಫ್ಯೂಮ್ ಗಳಿಂದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ ಎಂದು ಸಂಶೋಧನಾ ವರದಿ ಹೇಳಿದೆ. 
ಪರ್ಫ್ಯೂಮ್ ಗಳಿಂದ ತಲೆನೋವು, ಆಸ್ತಮಾ, ರಾಷಸ್ ಗಳ ಸಮಸ್ಯೆ ಕಾಣಿಸಿಕೊಳ್ಳಲಿದೆ ಎಂದು ಕೇಟ್ ಗ್ರೆನ್ವಿಲ್ಲೆ ಬರೆದಿರುವ ದಿ ಕೇಸ್ ಅಗೆನೆಸ್ಟ್ ಫ್ರಾಗ್ನೆನ್ಸ್ ಎಂಬ ಸಂಶೋಧನಾ ಬರವಣಿಗೆ ಮೂಲಕ ತಿಳಿದುಬಂದಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ 2014 ರಲ್ಲಿ ನಡೆಸಿದ್ದ ಅಧ್ಯಯನದ ಫಲಿತಾಂಶವೂ ಈಗಿನ ಸಂಶೋಧನಾ ಬರವಣಿಗೆಗೆ ಪೂರಕವಾಗಿದ್ದು, 2014 ರಲ್ಲಿ ಸಮೀಕ್ಷೆಗೊಳಪಡಿಸಲಾಗಿದ್ದ ಮಹಿಳೆಯರ ಪೈಕಿ ಮುಕ್ಕಾಲು ಭಾಗದಷ್ಟು ಮಹಿಳೆಯರಿಗೆ ಉಂಟಾಗಿದ್ದ ಮೈಗ್ರೇನ್ ಗೆ ಪರ್ಫ್ಯೂಮ್ ಕಾರಣ ಎಂದು ಹೇಳಲಾಗಿತ್ತು. 
ಆಧುನಿಕ ಕಾಲದ ಬಹುತೇಕ ಪರ್ಫ್ಯೂಮ್ ಗಳು ಕೃತಕ ರಾಸಾಯನಿಕಗಳಿಂದ ತಯಾರಾಗಿದ್ದು, ತಲೆನೋವು, ಆಸ್ತಮಾ, ರಾಷಸ್ ಗಳ ಸಮಸ್ಯೆ ಕಾಣಿಸಿಕೊಳ್ಳಲಿದೆ ಎಂಬುದು ಅಧ್ಯಯನ ವರದಿಯ ಸಾರಾಂಶವಾಗಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.