ಎದೆಬಡಿತ ನಿಲ್ಲುವ ಮುನ್ನ ಹೃದಯದ ಪಿಸುಮಾತನ್ನು ಆಲಿಸಿ!
ಯೌವ್ವನದಲ್ಲಿ ಹೆಚ್ಚು ಫಾಸ್ಟ್ ಫುಡ್ ಸೇವಿಸಬಹುದು, ಜೀವನ ಶೈಲಿ ಕ್ರಮಬದ್ಧವಾಗಿಲ್ಲದಿದ್ದರೂ ನಡೆಯುತದೆ, ಹೃದಯ ಸಮಸ್ಯೆಗಳು ಎದುರಾಗಲು 20-30 ತುಂಬಾ ಸಣ್ಣ ವಯಸ್ಸು ಎಂದೆಲ್ಲಾ ಭಾವಿಸುವವರಿಗೆ ಇಲ್ಲೊಂದು

Published On :
ಯೌವ್ವನದಲ್ಲಿ ಹೆಚ್ಚು ಫಾಸ್ಟ್ ಫುಡ್ ಸೇವಿಸಬಹುದು, ಜೀವನ ಶೈಲಿ ಕ್ರಮಬದ್ಧವಾಗಿಲ್ಲದಿದ್ದರೂ ನಡೆಯುತದೆ, ಹೃದಯ ಸಮಸ್ಯೆಗಳು ಎದುರಾಗಲು 20-30 ತುಂಬಾ ಸಣ್ಣ ವಯಸ್ಸು ಎಂದೆಲ್ಲಾ ಭಾವಿಸುವವರಿಗೆ ಇಲ್ಲೊಂದು ಎಚ್ಚರಿಕೆ ಇದೆ. ಅದೇನೆಂದರೆ ಹೃದಯ ಸಮಸ್ಯೆ ಎದುರಾಗಲು ವಯಸ್ಸು ಅಡ್ಡ ಬರುವುದಿಲ್ಲ ಎನ್ನುತ್ತಿದೆ ಹೊಸ ಸಂಶೋಧನೆ.
ವಯಸ್ಸಾದವರಿಗೆ ಮಾತ್ರ ಹೃದಯ ಸಮಸ್ಯೆ ಕಾಣಿಸಿಕೊಳ್ಳುವುದು ಎಂಬ ತಪ್ಪು ಕಲ್ಪನೆಯನ್ನು ತೆಗೆದುಹಾಕಬೇಕು, ಏಕೆಂದರೆ ಯುವಕರಲ್ಲಿಯೂ ಹೃದಯ ಸಮಸ್ಯೆ ಕಾಣಿಸಿಕೊಳ್ಳುವುದು ಹೆಚ್ಚುತ್ತಿದೆ, 29-50 ವಯಸ್ಸಿನ ವ್ಯಕ್ತಿಗಳಲ್ಲಿ ಹೃದಯ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಎಂದು ಸಂಶೋಧನೆ ಹೇಳಿದೆ.
30 ಹಾಗೂ ಅದಕ್ಕಿಂತ ಕಡಿಮೆ ವಯಸ್ಸಿಗಿಂತ 900 ಭಾರತೀಯರಿಗೆ ಪ್ರತಿದಿನವೂ ಹೃದಯಾಘಾತವಾಗುತ್ತಿದೆ ಎಂದು ಈ ಅಧ್ಯಯನ ವರದಿ ತಿಳಿಸಿದೆ. ಅಷ್ಟೇ ಅಲ್ಲದೇ 2015 ರಲ್ಲಿ 3.5 ಲಕ್ಷ ರೋಗಿಗಳು ಹೃದಯ ಸಮಸ್ಯೆಗೆ ಸಂಬಂಧಿಸಿದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ, ಈ ಪೈಕಿ ಪ್ರತಿ 10 ರಲ್ಲಿ ಒಬ್ಬರು 40 ಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರು ಎಂಬ ಅಂಶ ಬಹಿರಂಗವಾಗಿದೆ. ಈ ಪೈಕಿ ಬಹುತೇಕರಿಗೆ ಕೊರೋನರಿ ರಕ್ತನಾಳದಲ್ಲಿ ಉಂಟಾಗುವ ಬ್ಲಾಕೇಜ್ ನಿಂದ ಹೃದಯಾಘಾತ ಸಂಭವಿಸುತ್ತದೆ ಎಂದು ಅಧ್ಯಯನ ವರದಿ ಬಹಿರಂಗಪಡಿಸಿದೆ.
ಹೃದಯ ಸ್ನಾಯುವಿನ ಊತದಿಂದ ಉಂಟಾಗುತ್ತಿರುವ ಸಾವಿನ ಸಂಖ್ಯೆಯೂ ಹೆಚ್ಚುತಿದ್ದು. ಗ್ರಾಮೀಣ ಪ್ರದೇಶದಲ್ಲಿ ಬದುಕುತ್ತಿರುವ ಜನರಿಗಿಂತ ನಗರ ಪ್ರದೇಶಗಳಲ್ಲಿ ಬದುಕುತ್ತಿರುವ ಜನರಿಗೆ ಹೃದಯಾಘಾತದ ಅಪಾಯ ಮೂರು ಪಟ್ಟು ಹೆಚ್ಚಿರುತ್ತದೆ ಎಂದು ಅಧ್ಯಯನ ವರದಿ ಎಚ್ಚರಿಕೆ ನೀಡಿದೆ.
ಕಡಿಮೆ ವ್ಯಾಯಾಮ, ಹೆಚ್ಚಿನ ಜಂಕ್ ಫುಡ್ ಸೇವನೆ, ಧೂಮಪಾನ, ಕಚೆರಿಯಲ್ಲಿನ ಒತ್ತಡಗಳು ಹೃದಯಾಘಾತ ಸಂಭವಿಸುವುದಕ್ಕೆ ಪ್ರಮುಖ ಕಾರಣವಾಗಿದ್ದು, ಮಹಿಳೆಯರಿಗಿಂತ ಪುರುಷರಲ್ಲಿಯೇ ಈ ಸಮಸ್ಯೆ ಹೆಚ್ಚು ಕಾಣಿಸಿಕೊಳ್ಳುತ್ತಿದೆ, ಕ್ರಮಬದ್ಧವಾದ ಜೀವನ ಶೈಲಿ, ಹಣ್ಣು ತರಕಾರಿಗಳಂತಹ ಉತ್ತಮ ಆಹಾರ ಸೇವನೆ, ನಿಯಮಿತ ತಪಾಸಣೆಗಳಿಂದ ಯುವಕರು ಹೃದಯ ಸಮಸ್ಯೆಯನ್ನು ದೂರವಿಡಬಹುದು ಎಂದು ಅಧ್ಯಯನ ವರದಿ ಸಲಹೆ ನೀಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


