ಒಂದೇ ಜಾತಿಯಲ್ಲಿ ಮದುವೆಯಾದರೆ ಆನುವಂಶಿಕ ಖಾಯಿಲೆ ಉಂಟಾಗಬಹುದು: ಅಧ್ಯಯನ
ಹತ್ತಿರದ ಸಂಬಂಧಿಕರನ್ನು ಮದುವೆಯಾಗುವುದರಿಂದ ಆನುವಂಶಿಕ ಖಾಯಿಲೆಗಳು....

Published On :
ಹೈದರಾಬಾದ್: ಹತ್ತಿರದ ಸಂಬಂಧಿಕರನ್ನು ಮದುವೆಯಾಗುವುದರಿಂದ ಆನುವಂಶಿಕ ಖಾಯಿಲೆಗಳು ಬರುತ್ತವೆ ಎನ್ನುತ್ತಾರೆ. ಆದರೆ ಒಂದೇ ಜಾತಿಯೊಳಗೆ ಮದುವೆಯಾಗುವುದರಿಂದ ದಂಪತಿಗೆ ಜನಿಸುವ ಸಂತತಿಯಲ್ಲಿ ಆರೋಗ್ಯ ಸಮಸ್ಯೆ ಉಂಟಾಗಬಹುದು ಎಂದು ಹೈದರಾಬಾದಿನ ಸೆಲ್ಯುಲರ್ ಅಂಡ್ ಮೊಲೆಕ್ಯುಲರ್ ಬಯಾಲಜಿ ಕೇಂದ್ರದ ಅಧ್ಯಯನ ತಿಳಿಸಿದೆ.
ಗಂಡು ಹೆಣ್ಣಿಬ್ಬರು ಒಬ್ಬರಿಗೊಬ್ಬರು ಸಂಬಂಧಿಕರಾಗಿರದಿದ್ದರೂ ಕೂಡ ಒಂದೇ ಸಮುದಾಯ, ಜಾತಿ ಅಥವಾ ಬುಡಕಟ್ಟಿಗೆ ಸೇರಿದವರಾಗಿದ್ದರೆ ಮದುವೆಯಾದರೆ ತಮ್ಮ ಡಿಎನ್ಎಯಲ್ಲಿರುವ ಆನುವಂಶಿಕ ತೊಂದರೆಗಳನ್ನು ವರ್ಗಾಯಿಸುವ ಸಾಧ್ಯತೆಯಿದೆ. ವಯಸ್ಸಾದ ಬಳಿಕ ಖಾಯಿಲೆಗಳು ಬರುವುದಕ್ಕೆ ಕೂಡ ಇದು ಕಾರಣವಾಗಿರುತ್ತದೆ.
ಪ್ರಚಲಿತದಲ್ಲಿರುವ ಖಾಯಿಲೆಗಳು ಒಂದೇ ಜಾತಿ, ಸಮುದಾಯದಲ್ಲಿ ಮದುವೆಯಾಗುವುದರಿಂದ ಬರುತ್ತದೆಯೇ ಎಂಬ ಬಗ್ಗೆ ಸಂದೇಹವನ್ನು ಹುಟ್ಟುಹಾಕುತ್ತದೆ.
ವಿವಿಧ ಶಿಕ್ಷಣ ಸಂಸ್ಥೆಗಳ ಡಾ.ಕೆ.ತಂಗರಾಜ್ ಅವರ ನೇತೃತ್ವದ 17 ವಿಜ್ಞಾನಿಗಳ ತಂಡ ಈ ಅಧ್ಯಯನ ನಡೆಸಿದೆ.
ಪೋಷಕರಲ್ಲಿನ ಆನುವಂಶಿಕ ತೊಂದರೆಗಳಿಂದ ಮಕ್ಕಳಲ್ಲಿ ಖಾಯಿಲೆಗಳು ಬರುವ ಸಾಧ್ಯತೆಗಳು ಹೆಚ್ಚು. ಹಿಂಸಾತ್ಮಕ ರೋಗಗಳು ಭಾರತೀಯ ಸಮುದಾಯಗಳಲ್ಲಿ ಅತಿ ಹೆಚ್ಚಾಗಿವೆ ಎಂದು ವಿಜ್ಞಾನಿಗಳ ತಂಡ ಹೇಳಿದೆ.
ದಕ್ಷಿಣ ಏಷ್ಯಾದ ಅದರಲ್ಲೂ ಶೇಕಡಾ 80ರಷ್ಟು ಭಾರತೀಯರನ್ನು ಸುಮಾರು 260 ಸಮುದಾಯಗಳಿಗೆ ಸೇರಿದ 2,800 ಮಂದಿಯನ್ನು ಅಧ್ಯಯನಕ್ಕೊಳಪಡಿಸಲಾಯಿತು.
ಅಧ್ಯಯನದ ಭಾಗವಾಗಿ ಮೂಲದ ಗುರುತು (IBD) ಸ್ಕೋರ್ ನ್ನು ಎಲ್ಲಾ 260 ಸಮುದಾಯಗಳಿಗೆ ಲೆಕ್ಕಾಚಾರ ಮಾಡಲಾಯಿತು. ಇದರಲ್ಲಿ ಭಾರತೀಯರ ಐಬಿಡಿ ಸ್ಕೋರ್ ಅಧಿಕವಾಗಿತ್ತು. ಒಂದೇ ಸಮುದಾಯ ಮತ್ತು ಜಾತಿಯೊಳಗೆ ಮದುವೆಯಾದವರಲ್ಲಿ ಆನುವಂಶಿಕ ರೋಗಗಳು ಮತ್ತು ಆನುವಂಶಿಕ ದೋಷಗಳು ಹೆಚ್ಚಾಗಿರುತ್ತದೆ. ಇದು ಮುಂದಿನ ಸಂತತಿಗೆ ವರ್ಗಾವಣೆಯಾಗುತ್ತದೆ. ಹತ್ತಿರದ ಸಂಬಂಧಿಕರಲ್ಲಿ ಮದುವೆಯಾಗುವ ಅಶ್ಕೆನಾಜಿ ಯಹೂದಿಗಳಿಗಿಂತಲೂ ಒಂದೇ ಜಾತಿಯಲ್ಲಿ ಮದುವೆಯಾದ ಭಾರತೀಯರಲ್ಲಿ ಆನುವಂಶಿಕ ಖಾಯಿಲೆಗಳು ಹೆಚ್ಚಾಗಿರುತ್ತವೆ ಎನ್ನಲಾಗಿದೆ.
ಗುಜ್ಜರ್ ಸಮುದಾಯದ ಐಬಿಡಿ ಸ್ಕೋರ್ ಅಶ್ಕೆನಾಜಿ ಯಹೂದಿ ಸಮುದಾಯಕ್ಕಿಂತ 11.6 ಪಟ್ಟು ಹೆಚ್ಚಾಗಿದೆ. ರೆಡ್ಡಿ ಮತ್ತು ವೈಶ್ಯ ಜಾತಿಯ ಐಬಿಡಿ ಸ್ಕೋರ್ ಅಸ್ಕೆನಾಜಿಗಿಂತ 9.5 ಪಟ್ಟು ಜಾಸ್ತಿಯಾಗಿದೆ ಎನ್ನುತ್ತದೆ ಅಧ್ಯಯನ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಬ್ರೇಕಿಂಗ್ ನ್ಯೂಸ್
ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಹೆಚ್ಚಿದ ಒತ್ತಡ: ಮುಖ್ಯ ಚುನಾವಣಾ ಆಯುಕ್ತರನ್ನ ವಜಾ ಮಾಡೊದು ಅಷ್ಟು ಸುಲಭನಾ? ಯಾರಿಗಿದೆ ಆ ಪವರ್? ಸಂವಿಧಾನ ಹೇಳುವುದೇನು?ರಾಹುಕಾಲ ಎಂದರೇನು? ಮದುವೆಗೆ ಅನ್ವಯಿಸುತ್ತದೆಯೇ? ರಾಹು ಶಾಂತಿಗಾಗಿ ನಿಂಬೆ ಹಣ್ಣು ದೀಪ ಹಚ್ಚುವುದು ಸೂಕ್ತವೇ?ಗೌರಿಬಿದನೂರಿನ ಮಣ್ಣಲ್ಲಿ ಅರಳಿದ ಮರುಭೂಮಿ ಹಣ್ಣು: ಅಸಾಧ್ಯವನ್ನು ಸಾಧ್ಯವಾಗಿಸಿದ ಹಠವಾದಿ; ಸ್ವಾವಲಂಬಿ ಕೃಷಿಗೆ ಹೊಸ ಭಾಷ್ಯ ಬರೆದ ದಿವಾಕರ್ ಚನ್ನಪ್ಪ..!ಕರ್ನಾಟಕದ ನಂ.1 ಶ್ರೀಮಂತ ಯಾರು ಗೊತ್ತಾ? ಅಂಬಾನಿ, ಅದಾನಿ ಬಿಡಿ; ಇಲ್ಲಿದೆ ನಮ್ಮ ಕರುನಾಡ ಸಿರಿವಂತರ ಟಾಪ್ ಲಿಸ್ಟ್!ಫ್ಯಾಟ್ ನಿಂದ ಫಿಟ್ ವರೆಗೆ: ಸಾಹೇಬಲಾಲ್ ಛಪ್ಪರ್ಬಂದ್ ಸ್ಫೂರ್ತಿದಾಯಕ ಪಯಣವಿದೇಶಿ ಪ್ರವಾಸದ ಪ್ಲ್ಯಾನ್ ಇದೆಯೇ? ಒಂದು ಸಣ್ಣ ತಪ್ಪು ಭಾರೀ ದಂಡಕ್ಕೆ ಕಾರಣವಾಗಬಹುದು; ಪ್ರವಾಸಿಗರು ತಿಳಿದಿರಲೇಬೇಕಾದ ನಿಯಮಗಳಿವು...!ಮನಸ್ಸಿದ್ದರೆ ಮಾರ್ಗ ಎಂಬುದನ್ನು ರುಜುವಾತು ಮಾಡಿದ ಛಲವಾದಿ; 27 ವರ್ಷಗಳ ಹೋರಾಟದಲ್ಲಿ 26 ಬಾರಿ ಸೋತು 59ನೇ ವಯಸ್ಸಿನಲ್ಲಿ ಸರ್ಕಾರಿ ಶಿಕ್ಷಕರಾದ ವಿಜಯ್ಪಶ್ಚಿಮ ಘಟ್ಟಗಳ ESA - ಕಸ್ತೂರಿರಂಗನ್ ವರದಿ ಇನ್ನೂ ಏಕೆ ಜಾರಿಗೆ ಬಂದಿಲ್ಲ?


