ದಿನಕ್ಕೊಂದು ಮೊಟ್ಟೆ ತಿಂದರೆ ಪಾರ್ಶ್ವವಾಯು ದೂರ!
ಪುಟ್ಟಮಕ್ಕಳು ಮೊಟ್ಟೆ ತಿಂದರೆ ಗಟ್ಟಿಯಾಗುತ್ತಾರೆ ಎಂಬ ಮಾತನ್ನು ಹಿರಿಯರು ಹೇಳುತ್ತಾರೆ. ಆದರೆ ನೂತನ ವರದಿಯೊಂದು ಹಿರಿಯರು ಮೊಟ್ಟೆ ತಿಂದರೂ ಗಟ್ಟಿಯಾಗಿ ಜೀವಿಸುತ್ತಾರೆ ಎಂಬುದುನ್ನು ಹೇಳುತ್ತದೆ.

ವಾಷಿಂಗ್ಟನ್: ಪುಟ್ಟಮಕ್ಕಳು ಮೊಟ್ಟೆ ತಿಂದರೆ ಗಟ್ಟಿಯಾಗುತ್ತಾರೆ ಎಂಬ ಮಾತನ್ನು ಹಿರಿಯರು ಹೇಳುತ್ತಾರೆ. ಆದರೆ ನೂತನ ವರದಿಯೊಂದು ಹಿರಿಯರು ಮೊಟ್ಟೆ ತಿಂದರೂ ಗಟ್ಟಿಯಾಗಿ ಜೀವಿಸುತ್ತಾರೆ ಎಂಬುದುನ್ನು ಹೇಳುತ್ತದೆ.
ಹೌದು..ಮಧ್ಯ ವಯಸ್ಕರು ಹಾಗೂ ಹಿರಿಯರು ಸೇರಿದಂತೆ ಎಲ್ಲರೂ ನಿತ್ಯ ಮೊಟ್ಟೆ ಸೇವಿಸುವುದರಿಂದ ಪಾರ್ಶ್ವವಾಯು (ಲಕ್ವ) ರೋಗದಿಂದ ದೂರವಿರಬಹುದು ಎಂಬ ಕುತೂಹಲಕಾರಿ ಅಂಶವನ್ನು ವಿಜ್ಞಾನಿಗಳು ಹೊರ ಹಾಕಿದ್ದಾರೆ. ಅಮೆರಿಕದ ಖ್ಯಾತ ಆಹಾರ ವಿಜ್ಞಾನಿ ಹಾಗೂ ಎಪಿಡ್ ಸ್ಟ್ಯಾಟ್ ಇನ್ಸ್ ಟಿಟ್ಯೂಟ್ ನ ಹಿರಿಯ ಪ್ರಾಧ್ಯಾಪಕ ಡಿ.ಅಲೆಕ್ಸಾಂಡರ್ ಅವರು ಈ ಬಗ್ಗೆ ಸುಧೀರ್ಘ ಸಂಶೋಧನೆ ನಡೆಸಿ ಅದರ ವರದಿಯನ್ನು ಹೊರಹಾಕಿದ್ದಾರೆ.
ಅಲೆಕ್ಸಾಂಡರ್ ಅವರ ನೂತನ ವರದಿಯಂತೆ ವ್ಯಕ್ತಿಯೋರ್ವ ನಿತ್ಯ ಒಂದೊಂದು ಮೊಟ್ಟೆ ಸೇವಿಸುತ್ತಾ ಬಂದರೆ ಅಂತಹ ವ್ಯಕ್ತಿ ಪಾರ್ಶ್ವವಾಯು ರೋಗದಿಂದ ದೂರವಿರುತ್ತಾನಂತೆ. ಅಲೆಕ್ಸಾಂಡರ್ ಅವರು 1982 ರಿಂದ 2015ರ ವರೆಗೆ ಸುಧೀರ್ಘ ಅಧ್ಯಯನ ಕೈಗೊಂಡು ತಮ್ಮ ವರದಿಯನ್ನು ನೀಡಿದ್ದಾರೆ. ಅದರಂತೆ ಈ ಸುಧೀರ್ಘ ಅವಧಿಯಲ್ಲಿ ಯಾವ ವ್ಯಕ್ತಿಗಳು ನಿತ್ಯ ಮೊಟ್ಟೆ ಸೇವಿಸುತ್ತಾ ಬಂದಿದ್ದಾರೆಯೋ ಅವರು ಪಾರ್ಶ್ವವಾಯು ರೋಗದಿಂದ ಮುಕ್ತರಾಗಿದ್ದರಂತೆ. ಆದರೆ ಮೊಟ್ಟೆ ತಿನ್ನದ ಅಥವಾ ಅಪರೂಪಕ್ಕೊಮ್ಮೆ ಮೊಟ್ಟೆ ಸೇವಿಸುತ್ತಿದ್ದವರಲ್ಲಿ ಈ ಖಾಯಿಲೆ ಪರಿಣಾಮ ಹೆಚ್ಚಿತ್ತಂತೆ. ಅಲೆಕ್ಸಾಂಡರ್ ಈ ವಿಶಿಷ್ಠ ಸಂಶೋಧನೆಗಾಗಿ ಒಟ್ಟು 3,08,000 ಮಂದಿಯನ್ನು ಬಳಕೆ ಮಾಡಿಕೊಂಡಿದ್ದು, ಈ ಪೈಕಿ ಮೊಟ್ಟೆ ಸೇವಿಸದ 2,76,000 ಮಂದಿಯಲ್ಲಿ ಪಾರ್ಶವಾಯು, ಹೃದಯ ಸಮಸ್ಯೆ ಹಾಗೂ ಮೆದುಳಿನ ಸಮಸ್ಯೆಗಳು ಹೆಚ್ಚಾಗಿ ಕಂಡುಬಂದಿವೆಯಂತೆ.
ಮೊಟ್ಟೆಯಲ್ಲಿರುವ ವಿಶಿಷ್ಠ ಮತ್ತು ಯಥೇಚ್ಛ ಪ್ರೊಟೀನ್ ಗಳು ಮಾನವನ ದೇಹ ಮತ್ತು ಮೆದುಳಿನ ಆರೋಗ್ಯವನ್ನು ರಕ್ಷಿಸುವಲ್ಲಿ ಪರಿಣಾಮಕಾರಿಯಾಗಿ ಸಹಕರಿಸುತ್ತವೆಯಂತೆ. ಪ್ರಮುಖವಾಗಿ ಮೊಟ್ಟೆ ಮಾನವನ ದೇಹಕ್ಕೆ ಅಗತ್ಯವಾದ ವಿಟಮಿನ್ ಡಿ, ಇ ಮತ್ತು ಎ ಅಂಶಗಳನ್ನು ಪೂರೈಸುತ್ತದೆಯಂತೆ. ಇದಲ್ಲದೆ ಮೊಟ್ಟೆಯ ಹಳದಿ ಭಾಗ ಮಾನವನ ದೇಹಕ್ಕೆ ಅಗತ್ಯವಾದ ಆ್ಯಂಟಿ ಆಕ್ಸಿಡೆಂಟ್, ಜೀಕ್ಸಾಂಥಿನ್ ಅಂಶಗಳನ್ನು ಪೂರೈಸುತ್ತದೆಯಂತೆ.
ಅದರಂತೆ ನಿತ್ಯ ಮೊಟ್ಟೆ ತಿನ್ನುವುದರಿಂದ ಪಾರ್ಶ್ವವಾಯುವಿಗೆ ತುತ್ತಾಗುವ ಅಪಾಯವನ್ನು ಶೇ.12ರಷ್ಟು ದೂರವಿಡಬಹುದು ಎಂದು ಅಲೆಕ್ಸಾಂಡರ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


