ಮೆಸ್ಸಿ ಮೋಡಿಗೆ ನಾಚಿದ ನೈಜೀರಿಯಾ

ಪೋರ್ಟೊ ಅಲೆಗ್ರೆ: ಲಯೋನೆಲ್ ಮೆಸ್ಸಿ ಅವರು ಅದ್ಭುತ ಎರಡು ಗೋಲು ದಾಖಲಿಸುವುದರೊಂದಿಗೆ ಅರ್ಜೆಂಟೀನಾ ತಂಡ ನೈಜಿರಿಯಾ ವಿರುದ್ಧ ಬುಧವಾರ ನಡೆದ ಪಂದ್ಯದಲ್ಲಿ 3-2 ಗೋಲುಗಳ ಅಂತರದಿಂದ ಜಯ ಕಂಡುಕೊಂಡಿತು.
ಪಂದ್ಯ ಆರಂಭದ 2ನೇ ನಿಮಿಷದಲ್ಲಿ ಗೋಲು ದಾಖಲಿಸಿದ್ದ ಮೆಸ್ಸಿ ಪಂದ್ಯಾವಳಿಯಲ್ಲಿ ತಮ್ಮ ಮೂರನೇ ಗೋಲು ದಾಖಲಿಸುವ ಮೂಲಕ, ಅರ್ಜೆಂಟೀನಾ 1-0 ಅಂತರದಿಂದ ಮುನ್ನಡೆ ಸಾಧಿಸಿತು.
ಆದರೆ, 3ನೇ ನಿಮಿಷದಲ್ಲೇ ಇದಕ್ಕೆ ತಕ್ಕ ಉತ್ತರ ನೀಡಿದ್ದ ನೈಜಿರಿಯಾ, ಅಹ್ಮದ್ ಮೂಸಾ ಗಳಿಸಿದ ಗೋಲಿನೊಂದಿಗೆ 1-1 ಅಂತರದಿಂದ ಸಮಬಲ ಸಾಧಿಸಿತು. ನಂತರ 45ನೇ ನಿಮಿಷದಲ್ಲಿ ದೊರಕಿದ ಪ್ರಿ ಕಿಕ್ ಅವಕಾಶದಲ್ಲಿ ಮೆಸ್ಸಿ ಮತ್ತೊಂದು ಗೋಲು ದಾಖಲಿಸುವ ಮೂಲಕ ಅರ್ಜೆಂಟೀನಾಕ್ಕೆ ಮುನ್ನಡೆ ತಂದುಕೊಟ್ಟರು.
ನಂತರ ದ್ವಿತೀಯಾರ್ಧ ಪಂದ್ಯದ ಆರಂಭದಲ್ಲಿ ಆಕ್ರಮಣಕಾರಿ ಪ್ರದರ್ಶನ ತೋರಿದ ನೈಜಿರಿಯಾ 47ನೇ ನಿಮಿಷದಲ್ಲಿ ಅಹ್ಮದ್ ಮೂಸಾ ಪಂದ್ಯದಲ್ಲಿ ತಮ್ಮ ಎರಡನೇ ಗೋಲು ದಾಖಲಿಸುವ ಮೂಲಕ 2-2 ಗೋಲುಗಳಿಂದ ಸಮಬಲ ಸಾಧಿಸಿತು.
ಆದರೆ, 2 ನಿಮಿಷಗಳ ನಂತರ ಕಾರ್ನರ್ ಕಿಕ್ನಲ್ಲಿ ಎಜೆಖ್ವೆಲ್ ಗಾರೆ ಅವರು ತಲೆಯ ಮೂಲಕ ಪಾಸ್ ಮಾಡಿದ ಚೆಂಡನ್ನು ಗೋಲು ಪೆಟ್ಟಿಗೆ ಸೇರುವಂತೆ ಮಾಡುವಲ್ಲಿ ಮಾರ್ಕೋಸ್ ರೋಜೊ 49ನೇ ನಿಮಿಷದಲ್ಲಿ ದಾಖಲಿಸಿದ ಗೋಲಿನೊಂದಿನಗೆ 3-2 ಅಂತರದಿಂದ ಜಯ ಸಾಧಿಸಿತು. ನೈಜೀರಿಯಾ ಸಹ ಸ್ಫೂರ್ತಿಯ ಪ್ರದರ್ಶನ ನೀಡಿತಾದರೂ, ಮೆಸ್ಸಿ ಮ್ಯಾಜಿಕ್ ಮುಂದೆ ಅದರ ಆಟ ನಡೆಯಲಿಲ್ಲ. ಆದರೆ, ಈ ಪಂದ್ಯದಲ್ಲಿ ಡ್ರಾ ಸಾಧಿಸಿದ್ದರೂ, ನಾಕೌಟ್ ಹಂತ ಪ್ರವೇಶಿಸುವ ಅವಕಾಶ ಹೊಂದಿದ್ದ ನೈಜಿರಿಯಾ ಸೋಲಿನ ಆಘಾತ ಕಂಡುಕೊಂಡಿತು.
ಇದು ಮೆಸ್ಸಿಗೆ ಪಂದ್ಯಾವಳಿಯಲ್ಲಿ 4ನೇ ಗೋಲಾಗಿತ್ತು. ಬ್ರೆಜಿಲ್ನ ನೇಮಾರ್ ಸಹ 4 ಗೋಲು ದಾಖಲಿಸಿದ್ದು, ಗೋಲ್ಡನ್ ಬೂಟ್ಗಾಗಿ ಈಗ ಈ ಇಬ್ಬರು ಆಟಗಾರರು ಪೈಪೋಟಿಯಲ್ಲಿದ್ದಾರೆ.
ಅರ್ಜೆಂಟೀನಾ-3
ಮೆಸ್ಸಿ 2ನೇ, 45ನೇ ನಿಮಿಷ ಮಾರ್ಕೋಸ್ 49ನೇ ನಿಮಿಷ
ನೈಜೀರಿಯಾ-2
ಅಹ್ಮದ್ ಮೂಸಾ 3 ಮತ್ತು ನಿಮಿಷ 47ನೇ ನಿಮಿಷ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


