ಫಿಫಾ ವಿಶ್ವಕಪ್ 2014

ಇರಾನ್ ವಿರುದ್ಧ ಬೊಸ್ನಿಯಾ ವೀರಾವೇಶ

ಇರಾನ್ ವಿರುದ್ಧ ಬೊಸ್ನಿಯಾ ವೀರಾವೇಶ
Published On :

ಸಲ್ವಾಡೋರ್: ತಾನು ನಂಬಿಕೊಂಡಿದ್ದ ಎಡಿನ್ ಜೆಕೋ ಮತ್ತು ಮಿರಾಲೆಮ್ ಪಾನಿಕ್ ಅವರು ಗೋಲು ದಾಖಲಿಸುವ ಮೂಲಕ ಬೊಸ್ನಿಯಾ ಮತ್ತು ಹೆರ್ಜ್‌ಗೊವಿನ ತಂಡ ಇರಾನ್ ವಿರುದ್ಧ 3-1 ಗೋಲುಗಳಿಂದ ಜಯ ಕಂಡುಕೊಂಡಿತು. ಇದರೊಂದಿಗೆ ಪಂದ್ಯಾವಳಿಯ ಮೊದಲೆರಡು ಪಂದ್ಯಗಳಲ್ಲಿ ಸೋಲನುಭವಿಸಿದ್ದ ಬೊಸ್ನಿಯಾ ಮೊದಲ ಬಾರಿಗೆ ತನ್ನ ಗೆಲುವಿನ ಖಾತೆಯನ್ನು ತೆರೆಯಿತು. ಮೊದಲೆರಡು ಪಂದ್ಯಗಳಲ್ಲಿ ಗೋಲು ದಾಖಲಿಸದೇ ತನ್ನ ಹೋರಾಟ ಅಂತ್ಯಗೊಳಿಸಿದ್ದ ಇರಾನ್ ಈ ಪಂದ್ಯದಲ್ಲಿ ರೆಜಾ ಘೂಚೆನ್ನಿಜ್‌ಹಾಡ್ ಪಂದ್ಯದ 82ನೇ ನಿಮಿಷದಲ್ಲಿ ಗೋಲು ದಾಖಲಿಸುವುದರೊಂದಿಗೆ ಗೋಲು ಖಾತೆ ತೆರೆಯಿತು. ಪಂದ್ಯದ 23ನೇ ನಿಮಿಷದಲ್ಲಿ ಎಡಿನ್ ಜೆಕೋ ದಾಖಲಿಸಿದ ಗೋಲಿನ ನೆರವಿನೊಂದಿಗೆ ಮೊದಲಾರ್ಧ ಪಂದ್ಯದಲ್ಲಿ ಬೊಸ್ನಿಯಾ, 1-0 ಅಂತರದಿಂದ ಮುನ್ನಡೆ ಕಂಡುಕೊಂಡಿತ್ತು. ದ್ವಿತಿಯಾರ್ಧದ 59ನೇ ನಿಮಿಷದಲ್ಲಿ ಮಿರಾಲೆಮ್ ಪಾನಿಕ್ ಗೋಲು ದಾಖಲಿಸುವ ಮೂಲಕ ಬೊಸ್ನಿಯಾ 2-0 ಅಂತರದಿಂದ ಮುನ್ನಡೆ ಕಂಡುಕೊಂಡಿತು. ನಂತರ 83ನೇ ನಿಮಿಷದಲ್ಲಿ ಅದಿಜಾ ರಸಾಜೆವಿಚ್ ಗೋಲು ದಾಖಲಿಸುವುದರೊಂದಿಗೆ ಬೊಸ್ನಿಯಾ 3-1 ಗೋಲುಗಳಿಂದ ಜಯ ಕಂಡುಕೊಂಡಿತು.
ಬೊಸ್ನಿಯಾ-3
ಎಡಿನ್ ಜೆಕೋ 23 ನೇ ನಿಮಿಷ    ಮಿರಾಲೆಮ್ 59ನೇ ನಿಮಿಷ ಅದಿಜಾ 83ನೇ ನಿಮಿಷ
ಇರಾನ್-1
ರೆಜಾ 82ನೇ ನಿಮಿಷ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.