ಫಿಫಾ ವಿಶ್ವಕಪ್ 2014

ಸ್ಪೇನ್‌ಗೆ ಗೆದ್ದದ್ದೇ ತೃಪ್ತಿ

ಹಾಲಿ ಚಾಂಪಿಯನ್ ಸ್ಪೇನ್ ತಂಡದ ಆಟಗಾರರು ಕೊನೆಗೂ ಗೆಲವಿನ ಮೂಲಕ 2014ರ ...

ಸ್ಪೇನ್‌ಗೆ ಗೆದ್ದದ್ದೇ ತೃಪ್ತಿ
Published On :

ಕ್ಯುರಿಟಿಬಾ: ಹಾಲಿ ಚಾಂಪಿಯನ್ ಸ್ಪೇನ್ ತಂಡದ ಆಟಗಾರರು ಕೊನೆಗೂ ಗೆಲವಿನ ಮೂಲಕ 2014ರ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಗೆ ವಿದಾಯ ಹೇಳಿದ್ದಾರೆ.
ಎರೆನಾ ಡಾ ಬೇಕ್ಸಾಡಾ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಸ್ಪೇನ್ ಆಟಗಾರರು 3-0 ಗೋಲುಗಳಿಂದ ಆಸ್ಟ್ಟ್ರೇಲಿಯಾ ವಿರುದ್ಧ ಜಯಭೇರಿ ಬಾರಿಸಿದರು. ಡೇವಿಡ್ ವಿಲ್ಲಾ, ಫರ್ನಾಂಡೊ ಟೊರೆಸ್ ಮತ್ತು ಜುವಾನ್ ಮಾಟಾ ಕ್ರಮವಾಗಿ ಗೋಲು ಬಾರಿಸಿ ಸ್ಪೇನ್ ತಂಡಕ್ಕೆ ಗೆಲವು ತಂದುಕೊಟ್ಟರು.
ಸ್ಪೇನ್ ಮತ್ತು ಆಸ್ಟ್ರೇಲಿಯಾ ತಂಡಗಳ ಆಟಗಾರರು ಈ ಮುನ್ನ ಗುಂಪು ಸೆಣಸಿನ ತಮ್ಮ ಮೊದಲೆರಡು ಪಂದ್ಯಗಳಲ್ಲಿ ಹಾಲೆಂಡ್ ಮತ್ತು ಚಿಲಿ ವಿರುದ್ಧ ಸೋಲನುಭವಿಸುವುದರೊಂದಿಗೆ ಬಹುಬೇಗನೆ ನಾಕೌಟ್ ಸುತ್ತಿನ ಪೈಪೋಟಿಯಿಂದ ಹೊರನಡೆದಿದ್ದರು. ಹಾಗಾಗಿ, ತಮ್ಮ ಕೊನೆಯ ಲೀಗ್ ಪಂದ್ಯದಲ್ಲಾ ದರೂ ಗೆಲವು ದಾಖಲಿಸುವ ಮೂಲಕ ಮರ್ಯಾದೆಯೊಂದಿಗೆ ಟೂರ್ನಿಗೆ ವಿದಾಯ ಹೇಳಲು ಬಯಸಿದ್ದರು.
ಆರಂಭದ ಎರಡೂ ಪಂದ್ಯಗಳಲ್ಲಿ ತೀರ ಕಳಪೆ ಪ್ರದರ್ಶನ ನೀಡಿದ್ದ ಸ್ಪೇನ್ ಆಟಗಾರರು ಇಲ್ಲಿ ಮಾತ್ರ ಎಂದಿನ ತಮ್ಮ ಅದ್ಭುತ ಆಟ ಪ್ರದರ್ಶಿಸಿ ರೋಚಕ ಗೆಲವು ತಮ್ಮದಾಗಿಸಿಕೊಂಡರು. ಆ ಮೂಲಕ ತಮ್ಮ ಗುಂಪಿನ ಅಂಕಪಟ್ಟಿಯಲ್ಲಿ 3ನೇ ಸ್ಥಾನದ ಗೌರವ ಪಡೆದರು. ಆದರೆ, ಆಸ್ಟ್ರೇಲಿಯಾ ಆಡಿದ ಎಲ್ಲ ಮೂರೂ ಲೀಗ್ ಪಂದ್ಯಗಳಲ್ಲಿ ಸೋಲನುಭವಿಸಿ ಪ್ರಸಕ್ತ ವಿಶ್ವಕಪ್‌ನಲ್ಲಿ ಗೆಲುವೇ ಕಾಣದೇ ನಿರ್ಗಮಿಸಬೇಕಾಯಿತು.
ಸ್ಪೇನ್-3
ಡೇವಿಡ್  ವಿಲ್ಲಾ-36ನೇ ನಿಮಿಷ
ಫರ್ನಾಂಡೊ ಟೊರೆಸ್-69ನೇ ನಿಮಿಷ
ಜುವಾನ್ ಮಾಟಾ- 82ನೇ ನಿಮಿಷ
ಆಸ್ಟ್ರೇಲಿಯಾ-0

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.