ಫಿಫಾ ವಿಶ್ವಕಪ್ 2014

ಅಭಿಮಾನಿಗಳನ್ನು ಚದುರಿಸಲು ಲಾಠಿ

ಅರ್ಜೆಂಟೀನಾ ತಂಡದ ಆಟಗಾರರ ಬಸ್ ಬಳಿ ಭದ್ರತೆಯನ್ನು...

ಅಭಿಮಾನಿಗಳನ್ನು ಚದುರಿಸಲು ಲಾಠಿ
Published On :

ಬೆಲೊ ಹಾರಿಜಂಟ್: ಅರ್ಜೆಂಟೀನಾ ತಂಡದ ಆಟಗಾರರ ಬಸ್ ಬಳಿ ಭದ್ರತೆಯನ್ನು ಉಲ್ಲಘಿಸಿದ ಅಭಿಮಾಗಳನ್ನು ಚದುರಿಸಲು ಬ್ರೆಜಿಲ್ ಪೊಲೀಸರು ಶನಿವಾರ ಲಾಠಿ ಪ್ರಹಾರ ನಡೆಸಿದ್ದಾರೆ.
ಈ ಘಟನೆಯಲ್ಲಿ ಬ್ರೆಜಿಲ್‌ನ ನಾಲ್ವರು, ಅರ್ಜೆಂಟೀನಾದ ಮೂವರು ಹಾಗೂ ಕೊಲಂಬಿಯಾದ ಓರ್ವ ಅಭಿಮಾನಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಸೇನಾ ಪೊಲೀಸರು ತಿಳಿಸಿದ್ದಾರೆ. ಆಟಗಾರರನ್ನು ಕರೆದೊಯ್ಯಲು ಸ್ಟೇಡಿಯಂನ ಬಳಿ ಬಸ್ ನಿಲ್ಲಸಿದ್ದಾಗ, ನಿಯಮಗಳನ್ನು ಉಲ್ಲಂಘಿಸಿದ ಅಭಿಮಾನಿಗಳನ್ನು ಚದಿರಸಲು ಪೊಲೀಸರು ಹರಿತವಲ್ಲದ ಆಯುಧಗಳನ್ನು ಬಳಿಸಿದ್ದಾರೆ.
ಆದರೆ, ಯಾವ ರೀತಿಯ ಆಯುಧಗಳನ್ನು ಬಳಿಸಿದರು ಎಂಬುದು ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಆದರೆ, ಬ್ರೆಜಿಲ್ ಪೊಲೀಸರು ಜನರ ಪ್ರತಿಭಟನೆಯನ್ನು ಹತ್ತಿಕ್ಕಲು ರಬ್ಬರ್ ಬುಲೆಟ್‌ಗಳು, ಅಶ್ರು ವಾಯು ಹಾಗೂ ಸ್ಟನ್ ಗ್ರೆನೇಡ್‌ಗಳನ್ನು ಬಳಸುತ್ತಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.