ಪ್ರಿಕ್ವಾರ್ಟರ್ಗೆ ಕೋಸ್ಟ

ರೇಸಿಫ್: ಮತ್ತೊಂದು ಸೊಗಸಾದ ಆಟದ ಪ್ರದರ್ಶನ ನೀಡಿದ ಕೋಸ್ಟ ರಿಕಾ ತಂಡದ ಆಟಗಾರರು ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಸತತ ಎರಡನೇ ಜಯಭೇರಿ ಬಾರಿಸುವ ಮೂಲಕ 'ಡಿ' ಗುಂಪಿನಿಂದ ಪ್ರಿಕ್ವಾರ್ಟರ್ಫೈನಲ್ ಪ್ರವೇಶಿಸಿದ್ದಾರೆ.
ಎರೆನಾ ಪೆರ್ನಾಂಬುಕೊ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಕೋಸ್ಟ ರಿಕಾ ತಂಡ ಏಕೈಕ ಗೋಲಿನಿಂದ ಪ್ರಬಲ ಇಟಲಿ ತಂಡವನ್ನು ಪರಾಭವಗೊಳಿಸಿತು.
ಪಂದ್ಯದ 44ನೇ ನಿಮಿಷದಲ್ಲಿ ನಾಯಕ ಬ್ರಯಾನ್ ರ್ಯೂಜ್ ಆಕರ್ಷಕ ಗೋಲು ಬಾರಿಸಿ ಕೋಸ್ಟ ರಿಕಾ ತಂಡದ ಗೆಲವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಎದುರಾಳಿ ರಕ್ಷಣಾ ಆಟಗಾರರ ಕಣ್ತಪ್ಪಿಸಿ ಜೂನಿಯರ್ ಡಯಾಜ್ ಚೆಂಡನ್ನು ರಭಸವಾಗಿ ಒದ್ದರು. ಆಗ ಗೋಲುಬಲೆಯ ಸಮೀಪ ಹೊಂಚು ಹಾಕುತ್ತಿದ್ದ ಮುನ್ಪಡೆ ಆಟಗಾರ ಬ್ರಯಾನ್ ರ್ಯೂಜ್ ಅವರು ಚೆಂಡನ್ನು ಹೆಡ್ ಮಾಡುವ ಮೂಲಕ ಇಟಲಿ ಗೋಲ್ಕೀಪರ್ ಜಿಯಾನ್ಲುಜಿ ಬಫನ್ರನ್ನು ವಂಚಿಸಿ ಗುರಿ ಸೇರಿಸುವ ಮೂಲಕ ಕೋಸ್ಟ ರಿಕಾಕ್ಕೆ ವಿರಾಮದ ವೇಳೆಗೆ 1-0 ಗೋಲಿನ ಮುನ್ನಡೆ ದೊರಕಿಸಿಕೊಟ್ಟರು.
ಇನ್ನು ಉತ್ತರಾರ್ಧದ ಆಟದಲ್ಲಿ ಇಟಲಿ ಆಟಗಾರರು ಗೋಲು ಗಳಿಸಿ ಎದುರಾಳಿ ಜೊತೆ ಸಮಗೌರವ ಸಾಧಿಸಲು ಸಾಕಷ್ಟು ಶ್ರಮಿಸಿದರಾದರೂ ನಿರೀಕ್ಷಿತ ಫಲ ಕಾಣುವಲ್ಲಿ ವಿಫಲರಾದರು. ಪ್ರಮುಖವಾಗಿ ಕೋಸ್ಟ ರಿಕಾದ ರಕ್ಷಣಾ ಗೋಡೆಯನ್ನು ಭೇದಿಸಿ ಗುರಿ ಸೇರುವಲ್ಲಿ ಇಟಲಿ ಆಟಗಾರರು ಹಿನ್ನಡೆ ಅನುಭವಿಸಿದರು.
ತನ್ನ ಮೊದಲ ಪಂದ್ಯದಲ್ಲಿ 2 ಬಾರಿಯ ಚಾಂಪಿಯನ್ ಉರುಗ್ವೆ ತಂಡಕ್ಕೆ 3-1ರಿಂದ ಆಘಾತ ನೀಡಿದ್ದ ಕೋಸ್ಟ ರಿಕಾ ಈಗ ನಾಲ್ಕು ಬಾರಿಯ ಚಾಂಪಿಯನ್ ಇಟಲಿ ತಂಡಕ್ಕೂ ಅಚ್ಚರಿಯ ಸೋಲುಣಿಸಿ ಹದಿನಾರರಘಟ್ಟಕ್ಕೆ ಅರ್ಹತೆ ಪಡೆದುಕೊಂಡಿತು.
ಮತ್ತೊಂದೆಡೆ ಇಟಲಿ ತಂಡ ತನ್ನ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 2-1 ಗೋಲುಗಳಿಂದ ಗೆದ್ದು ಭರ್ಜರಿ ಆರಂಭ ಪಡೆದಿತ್ತು. ಆದರೆ, ಎರಡನೇ ಪಂದ್ಯದಲ್ಲಿ ಸೋಲನುಭವಿಸುವ ಮೂಲಕ ಮುಂದಿನ ಹಾದಿ ಕಠಿಣವಾಗಿಸಿಕೊಂಡಿತು. ಪಂದ್ಯದಲ್ಲಿ ಪ್ರತಿಶತ 55ರಷ್ಟು ಹಿಡಿತ ಸಾಧಿಸಿದ್ದರೂ ಸಹ ಇಟಲಿಗೆ ಜಯ ದಕ್ಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇಟಲಿ ತಂಡ ಪ್ರಿಕ್ವಾರ್ಟರ್ಫೈನಲ್ ಪ್ರವೇಶಿಸಬೇಕಾದರೆ, ಗುಂಪಿನ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಉರುಗ್ವೆ ವಿರುದ್ಧ ಜಯ ಸಾಧಿಸಲೇಬೇಕಾಗಿದೆ.
ಕೋಸ್ಟ ರಿಕಾ 'ಡಿ' ಗುಂಪಿನಿಂದ ನಾಕೌಟ್ ಪ್ರವೇಶಿಸಿದ ಮೊದಲ ತಂಡವಾಗಿದೆ. ಈ ಮಧ್ಯೆ ಕೋಸ್ಟ ರಿಕಾ ತಂಡ ಗೆಲವು ದಾಖಲಿಸಿದ ಹಿನ್ನೆಲೆಯಲ್ಲಿ ಇದೇ ಗುಂಪಿನ ಮತ್ತೊಂದು ಪ್ರಮುಖ ತಂಡ ಇಂಗ್ಲೆಂಡ್ ಟೂರ್ನಿಯಿಂದ ಹೊರಬಿದ್ದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


